‘ತೆಲುಗಿನಲ್ಲಿ ಮಲಗಿದವಳಿಗೆ, ಕನ್ನಡದವನ ಜೊತೆ ಮಲಗೋಕೆ ಆಗಲ್ವ’; ಖ್ಯಾತ ಆ್ಯಂಕರ್ ಕೋಪಗೊಂಡಿದ್ದೇಕೆ?

ಸೌಮ್ಯಾ ರಾವ್ ಅವರು ತೆಲುಗು ಚಿತ್ರರಂಗದಲ್ಲಿ ಯಶಸ್ವಿಯಾಗಿದ್ದರೂ, ಕನ್ನಡ ಚಿತ್ರರಂಗದಲ್ಲಿ ಅವಕಾಶಗಳನ್ನು ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಅವರು ಎದುರಿಸುತ್ತಿರುವ ದೌರ್ಜನ್ಯದ ಬಗ್ಗೆಯೂ ಮಾತನಾಡಿದ್ದಾರೆ. ಕನ್ನಡ ಉದ್ಯಮದಲ್ಲಿನ ಕೆಲವು ನಕಾರಾತ್ಮಕ ಅಂಶಗಳನ್ನು ಅವರು ಟೀಕಿಸಿದ್ದಾರೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ವಿವರ.

‘ತೆಲುಗಿನಲ್ಲಿ ಮಲಗಿದವಳಿಗೆ, ಕನ್ನಡದವನ ಜೊತೆ ಮಲಗೋಕೆ ಆಗಲ್ವ’; ಖ್ಯಾತ ಆ್ಯಂಕರ್ ಕೋಪಗೊಂಡಿದ್ದೇಕೆ?
ಸೌಮ್ಯಾ ರಾವ್
Follow us
ರಾಜೇಶ್ ದುಗ್ಗುಮನೆ
|

Updated on:Jan 18, 2025 | 10:21 AM

ಸೌಮ್ಯಾ ರಾವ್ ಅವರು ನಟಿಯಾಗಿ, ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಕನ್ನಡದವರಾದರೂ ತೆಲುಗು ಚಿತ್ರರಂಗದಲ್ಲಿ ಆ್ಯಂಕರಿಂಗ್​​ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾ ಕೆಟ್ಟ ಕಮೆಂಟ್​ಗಳು ಬಂದಿದ್ದವು. ಈ ಬಗ್ಗೆ ಸೌಮ್ಯಾ ರಾವ್ ಅವರು ಮಾತನಾಡಿದ್ದಾರೆ. ಅವರು ಈ ಬಗ್ಗೆ ಸಾಕಷ್ಟು ಬೇಸರ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಸೌಮ್ಯಾ ಅವರು ತೆಲುಗಿನಲ್ಲಿ ಟಾಪ್​ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಆದರೆ, ಕನ್ನಡದಲ್ಲಿ ಅವರಿಗೆ ಅವಕಾಶ ಸಿಕ್ಕೇ ಇಲ್ಲ. ಈ ಬಗ್ಗೆ ಅವರು ‘ರಾಜೇಶ್ ಗೌಡ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರು ಸತ್ಯ ಕಹಿ ಎಂದಿದ್ದಾರೆ. ಕನ್ನಡದಲ್ಲಿ ಕೇಳಿದರೂ ಅವರಿಗೆ ಅವಕಾಶ ನೀಡಿಲ್ಲವಂತೆ..

ಈ ಮೊದಲು ತೆಲುಗು ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸೌಮ್ಯಾ ಅವರು ಕನ್ನಡ ಇಂಡಸ್ಟ್ರಿ ಬಗ್ಗೆ ಬೇಸರ ಹೊರಹಾಕಿದ್ದರು. ‘ಕನ್ನಡ ಇಂಡಸ್ಟ್ರಿ ಮೇಲೆ ನನಗೆ ಒಲವು ಇಲ್ಲ, ಏಕೆಂದರೆ ಅವರು ನನ್ನನ್ನು ಬೆಳೆಸಿಲ್ಲ ಎಂದು ನಾನು ಹೇಳಿದ್ದೆ. ಅದನ್ನು ನಾನು ಬೇಸರದಿಂದ ಹೇಳಿದ್ದು. ಪ್ರಸ್ತುತ ಕನ್ನಡ ಇಂಡಸ್ಟ್ರಿ ಒಳ್ಳೆಯ ಹೀರೋಯಿನ್​ಗಳನ್ನು ಕಳೆದುಕೊಳ್ಳುತ್ತಿದೆ. ಕೆಟ್ಟ ಹುಳದಿಂದ ಇಂಡಸ್ಟ್ರಿ ಹಾಳಾಗುತ್ತಿದೆ ಎಂದು ನಾನು ಸಂದರ್ಶನದಲ್ಲಿ ಹೇಳಿದ್ದೆ’ ಎಂಬುದಾಗಿ ಸೌಮ್ಯಾ ಹೇಳಿದ್ದಾರೆ. ಈ ಬಗ್ಗೆ ಅವರು ಸಾಕಷ್ಟು ಟೀಕೆ ಎದುರಿಸಿದ್ದರು.

‘ಅಣ್ಣಾವ್ರ ಸಿನಿಮಾಗಳನ್ನು ನೋಡಿದ್ದೀರಾ ಎಂದೆಲ್ಲ ಜನರು ಕೇಳುತ್ತಾರೆ. ನಾನು ರಾಜ್​ಕುಮಾರ್ ಸಿನಿಮಾ ನೋಡಿ ಬೆಳೆದವಳು. ಬೇಡರ ಕಣ್ಣಪ್ಪ ಇಂದ ಹಿಡಿದು ಶಬ್ದವೇದಿ ಸಿನಿಮಾವರೆಗೆ ಎಲ್ಲವನ್ನೂ ನೋಡಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಸೌಮ್ಯಾ.

‘ತೆಲುಗಿನಲ್ಲೇ ಬಿದ್ದು ಸಾಯಿ, ಇಲ್ಲಿಗೆ ಬರಬೇಡ ಎಂದು ಅನೇಕರು ಕಮೆಂಟ್ ಹಾಕಿದ್ದರು. ನಾನು ಇಲ್ಲಿ ಮೈಮಾಟ ತೋರಿಸೋಕೆ ಬಂದಿಲ್ಲ. ಬಡತನದ ಬೇಗೆಯಿಂದ ಹೊರ ಬರೋಕೆ ಬಂದಿದ್ದು. 100ರಲ್ಲಿ 90 ಜನರು ಒಳ್ಳೆಯ ಮಾತನ್ನು ಆಡಿದ್ದಾರೆ. ಉಳಿದ ಶೇ.10 ಜನರ ಮಾತನ್ನು ಕೇಳೋಕೆ ಆಗಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

‘ನನ್ನ ಬಗ್ಗೆ ಕೆಟ್ಟ ಶಬ್ದ ಬಳಕೆ ಮಾಡುತ್ತಾರೆ. ಕರ್ನಾಟಕ್ಕೆ ಬಂದ್ರೆ ಮೆಟ್ಟಲ್ಲಿ ಹೊಡಿತೀನಿ ಎನ್ನುತ್ತಾರೆ. ನನ್ನ ರಾಜ್ಯಕ್ಕೆ ಬರೋಕೆ ಅವರ ಒಪ್ಪಿಗೆ ಬೇಕಾ? ಈಗ ಬಟ್ಟೆ ಬಿಚ್ಚಿಕೊಂಡು ನಿಂತರವರಿಗೆ ಹೆಚ್ಚು ಫಾಲೋವರ್ಸ್​. ಬಟ್ಟೆ ಬಿಚ್ಚುಕೊಂಡು ನಿಂತವರು ಇವರಿಗೆ ದೇವರ ರೀತಿ ಕಾಣಿಸುತ್ತಾರೆ. ತೆಲುಗುನಲ್ಲಿ ಯಾರದ್ದೋ ಜೊತೆ ಮಲಗಿದ್ದಾಳೆ, ಅದಕ್ಕೆ ಅಲ್ಲಿ ಅವಕಾಶ ಸಿಕ್ಕಿತು ಎಂದು ಯಾರೋ ಕಮೆಂಟ್ ಮಾಡಿದ್ದರು. ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜೊತೆ ಮಲಗೋಕೆ ಬರಲ್ವ? ಅಲ್ಲಿರೋನು ಗಂಡಸೇ, ಇಲ್ಲಿರೋನು ಗಂಡಸೇ. ನನಗೆ ಆ ರೀತಿಯ ಕಲಾವಿದೆ ಅಲ್ಲ. ಕಲಾವಿದರ ಜೀವನ ತುಂಬಾನೇ ಕಷ್ಟ’ ಎಂದು ಕೋಪ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:21 am, Sat, 18 January 25

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್