ಜನಪ್ರಿಯ ನಟಿ ಮೀನಾ (Meena) ಅವರ ಬಾಳಿನಲ್ಲಿ ಕತ್ತಲು ಆವರಿಸಿದೆ. ಅವರ ಪತಿ ವಿದ್ಯಾಸಾಗರ್ ನಿಧನರಾಗಿದ್ದಾರೆ. ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದ ಮೀನಾ ಅವರು 2009ರಲ್ಲಿ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗೆ ಶ್ವಾಸಕೋಶದ ಸೋಂಕಿಗೆ (Lung Infection) ಒಳಗಾಗಿದ್ದ ವಿದ್ಯಾಸಾಗರ್ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಪತ್ನಿ ಮತ್ತು ಮಗಳನ್ನು ಅವರು ಅಗಲಿದ್ದಾರೆ. ವಿದ್ಯಾಸಾಗರ್ ಇನ್ನಿಲ್ಲ (Vidyasagar Death) ಎಂಬ ಸುದ್ದಿ ತಿಳಿದು ಅನೇಕ ಸೆಲೆಬ್ರಿಟಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಎಲ್ಲರೂ ಪ್ರಾರ್ಥಿಸಿದ್ದಾರೆ. ವೀನಾ ಕುಟುಂಬಕ್ಕೆ ಸಾಂತ್ವನ ಹೇಳಲಾಗುತ್ತಿದೆ.
ಮೀನಾ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಶರತ್ ಕುಮಾರ್ ಅವರು ವಿದ್ಯಾಸಾಗರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಮೀನಾ ಪತಿ ವಿದ್ಯಾಸಾಗರ್ ಅವರ ಅಕಾಲಿಕ ಮರಣದ ಸುದ್ದಿ ತಿಳಿದು ಆತಂಕ ಆಯಿತು. ಮೀನಾ ಅವರಿಗೆ ನಮ್ಮ ಕುಟುಂಬದಿಂದ ಸಾಂತ್ವನಗಳು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಶರತ್ ಕುಮಾರ್ ಟ್ವೀಟ್ ಮಾಡಿದ್ದಾರೆ.
It is shocking to hear the news of the untimely demise of Actor Meena’s husband Vidyasagar, our family’s heartfelt condolences to Meena and the near and dear of her family, may his soul rest in peace pic.twitter.com/VHJ58o1cwP
— R Sarath Kumar (@realsarathkumar) June 28, 2022
ಕೊರೊನಾದಿಂದಲೇ ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಸೋಂಕು ಉಂಟಾಗಿರಬಹುದೇ ಎಂಬ ಅನುಮಾನ ಮೂಡಿದೆ. ಯಾಕೆಂದರೆ, ಈ ವರ್ಷ ಆರಂಭದಲ್ಲಿ ಮೀನಾ ಅವರ ಇಡೀ ಕುಟುಂಬಕ್ಕೆ ಕೊವಿಡ್ ತಗುಲಿತ್ತು. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾಲ್ಲಿ ಬರೆದುಕೊಂಡಿದ್ದರು. ಕೊವಿಡ್ ಬಂದುಹೋದ ಬೆನ್ನಲ್ಲೇ ಅವರಿಗೆ ಈ ರೀತಿ ಆರೋಗ್ಯ ಸಮಸ್ಯೆ ಎದುರಾಗಿದ್ದರಿಂದ ಅನುಮಾನ ಮೂಡಿದೆ.
‘2022ರಲ್ಲಿ ನಮ್ಮ ಮನೆಗೆ ಬಂದ ಮೊದಲ ಅತಿಥಿ ಮಿಸ್ಟರ್ ಕೊರೊನಾ. ಅದಕ್ಕೆ ನನ್ನ ಇಡೀ ಕುಟುಂಬ ಇಷ್ಟ ಆಗಿದೆ. ಆದರೆ ಅದು ಉಳಿದುಕೊಳ್ಳಲು ನಾನು ಬಿಡುತ್ತಿಲ್ಲ. ಎಚ್ಚರಿಕೆಯಿಂದಿರಿ ಜನಗಳೇ.. ಸುರಕ್ಷತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಿ. ಜವಾಬ್ದಾರಿಯಿಂದ ನಡೆದುಕೊಳ್ಳಿ. ಕೊರೊನಾ ಹರಡಲು ಬಿಡಬೇಡಿ’ ಎಂದು ಮೀನಾ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ‘ಐಫಾ 2022’ ಸಮಾರಂಭದಲ್ಲಿ ಎಸ್ಪಿಬಿ, ಲತಾಜೀ, ಕೆಕೆ ನಿಧನದ ಬಗ್ಗೆ ಮಾತನಾಡಿದ ಎ.ಆರ್. ರೆಹಮಾನ್
Anekal Balaraj Death: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್ ಬಾಲರಾಜ್ ಇನ್ನಿಲ್ಲ; ಬೆಂಗಳೂರಿನಲ್ಲಿ ಅಪಘಾತದಿಂದ ನಿಧನ
Published On - 7:13 am, Wed, 29 June 22