AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುದ್ಧ ಬೇಡ, ಅದರಿಂದ ಹಾನಿ ಆಗಲಿದೆ: ನಟಿ ಸಂಜನಾ ಗಲ್ರಾನಿ

Sanjana Galrani: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಭಾರತ ಉಗ್ರರ ಮೇಲೆ ಮಾಡಿರುವ ದಾಳಿಗೆ ಪಾಕಿಸ್ತಾನ ಪ್ರತಿಕಾರದ ದಾಳಿ ಮಾಡುತ್ತಿದ್ದು, ಅದಕ್ಕೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ. ಹಲವರು ಭಾರತೀಯ ಸೇನೆಗೆ ಬೆಂಬಲ ನೀಡುತ್ತಿದ್ದಾರೆ. ಇದೀಗ ನಟಿ ಸಂಜನಾ ಗಲ್ರಾನಿ, ಯುದ್ಧ ಬೇಡ ಎಂದಿದ್ದಾರೆ. ನಟಿ ಹೇಳಿರುವುದೇನು? ಇಲ್ಲಿದೆ ಮಾಹಿತಿ.

ಯುದ್ಧ ಬೇಡ, ಅದರಿಂದ ಹಾನಿ ಆಗಲಿದೆ: ನಟಿ ಸಂಜನಾ ಗಲ್ರಾನಿ
Sanjana Galrani1
ಮಂಜುನಾಥ ಸಿ.
|

Updated on: May 08, 2025 | 3:35 PM

Share

ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ಸರ್ಕಾರ ಈಗಾಗಲೇ ಯುದ್ಧಕ್ಕೆ ಸೈನ್ಯದ ಜೊತೆಗೆ ದೇಶದ ನಾಗರೀಕರನ್ನು ಸಜ್ಜುಗೊಳಿಸುತ್ತಿದೆ. ನಿನ್ನೆಯಷ್ಟೆ ದೇಶದ ಹಲವು ನಗರಗಳಲ್ಲಿ ಮಾಕ್​ ಡ್ರಿಲ್​ಗಳನ್ನು ಮಾಡಲಾಗಿದೆ. ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನ ಸೇನೆಯು ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿ ಆರಂಭ ಮಾಡಿದೆ. ಇದರಿಂದ ಗಡಿಯಲ್ಲಿರುವ ಭಾರತೀಯರ ಆಸ್ತಿ ಹಾಗೂ ಜೀವ ಹಾನಿ ಆಗಿದೆ. ಎರಡೂ ದೇಶಗಳ ನಡುವೆ ಯಾವಾಗ ಬೇಕಾದರೂ ಯುದ್ಧ ಪ್ರಾರಂಭ ಆಗಬಹುದು ಎನ್ನಲಾಗುತ್ತಿದೆ. ಇದರ ನಡುವೆ ನಟಿ ಸಂಜನಾ ಗಲ್ರಾನಿ ಯುದ್ಧ ಬೇಡ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

‘ಯಾವುದೇ ಕ್ರಿಯೆಗೆ ಸಮಾನವಾದ ಅಥವಾ ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ನಾನು ಸಂಪೂರ್ಣ ದೇಶಪ್ರೇಮಿ. ಅದರ ಜೊತೆಗೆ ನಾನು ಶಾಂತಿ ಪ್ರೇಮಿಯೂ ಹೌದು. (Peace ಸ್ಪೆಲ್ಲಿಂಗ್ ತಪ್ಪಾಗಿ ಬರೆದಿದ್ದಾರೆ). ಯಾವುದೇ ರೀತಿಯ ಸಣ್ಣ ಅಥವಾ ಯುದ್ಧ ದೇಶದ ಗೌರವಕ್ಕೆ ಒಳ್ಳೆಯದಲ್ಲ. ಯುದ್ಧವು ಭಾರತದ ಆರ್ಥಿಕತೆಗೆ ಹೊಡೆತ ನೀಡುತ್ತದೆ. ಜನ ಜೀವನ ಸ್ತಬ್ಧಗೊಳ್ಳುತ್ತದೆ. ಯುದ್ಧದಲ್ಲಿ ಪಾಲ್ಗೊಂಡ ದೇಶಗಳಿಗೆ ಆಗುವ ನಷ್ಟ ಅಗಣ್ಯ ಮತ್ತು ಅದರ ಪರಿಹಾರ ಸಾಧ್ಯವೇ ಇಲ್ಲ’ ಎಂದಿದ್ದಾರೆ ನಟಿ.

‘ಎಲ್ಲವೂ ಶಾಂತರೀತಿಯಿಂದ ಶೀಘ್ರವೇ ಅಂತ್ಯವಾಗಲಿದೆ ಎಂಬ ನಿರೀಕ್ಷೆ ನನ್ನದು, ಜೈ ಹಿಂದ್’ ಎಂದು ನಟಿ ಸಂಜನಾ ಗಲ್ರಾನಿ ಇಂದು (ಮೇ 08) ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಆದರೆ ನಟಿಯ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ:ಸಂಜನಾ ಗಲ್ರಾನಿ ಕೇಸ್​​ನಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಲು ಸಿಸಿಬಿ ರೆಡಿ

ಪಾಕ್ ಕೃಪಾಪೋಷಿತ ಉಗ್ರರು ಪಹಲ್ಗಾಮ್​ ನಲ್ಲಿ ಮಾಡಿರುವ ಹೇಯ ಕೃತ್ಯಕ್ಕೆ ಪ್ರತಿಕಾರ ಪಡೆಯಬೇಕು ಎಂಬುದು ಭಾರತೀಯರ ಒಕ್ಕೂರಲ ಒತ್ತಾಯವಾಗಿತ್ತು. ಭಾರತ ಸರ್ಕಾರವು ಪಾಕ್​ನ ಗಡಿಯೊಳಗೆ ಇದ್ದ ಉಗ್ರರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ದಾಳಿ ನಡೆಸಿದೆ. ಇದೀಗ ಪಾಕಿಸ್ತಾನ ಸಹ ದಾಳಿಗೆ ಪ್ರತಿದಾಳಿ ಆರಂಭಿಸಿದ್ದು, ಅದಕ್ಕೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡುತ್ತಿದೆ. ಆದರೆ ಇದು ಹೀಗೆ ಮುಂದುವರೆದು ಎರಡು ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ