AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ಆರೋಪ, ದೂರು ದಾಖಲಿಸಿದ ನಟಿಯ ಸಹೋದರಿ

Sandalwood news: ಸ್ಯಾಂಡಲ್​​ವುಡ್ ನಟಿಯ ಸಹೋದರಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದು, ವ್ಯಕ್ತಿಯೊಬ್ಬನ ಮೇಲೆ ದೂರು ದಾಖಲಿಸಿದ್ದಾರೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ ರಾಘವೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ತಮ್ಮ ಇಚ್ಛೆಗೆ ವಿರುದ್ಧವಾಗಿ ತಮ್ಮೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆಂದು ನಟಿಯ ಸಹೋದರಿ ಆರೋಪ ಮಾಡಿದ್ದಾರೆ.

ಅತ್ಯಾಚಾರ ಆರೋಪ, ದೂರು ದಾಖಲಿಸಿದ ನಟಿಯ ಸಹೋದರಿ
Victim
ಮಂಜುನಾಥ ಸಿ.
|

Updated on: Aug 13, 2026 | 5:57 PM

Share

ಸ್ಯಾಂಡಲ್​​ವುಡ್ ನಟಿಯ (Sandalwood actress) ಸಹೋದರಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದು, ವ್ಯಕ್ತಿಯೊಬ್ಬನ ಮೇಲೆ ದೂರು ದಾಖಲಿಸಿದ್ದಾರೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ ರಾಘವೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ತಮ್ಮ ಇಚ್ಛೆಗೆ ವಿರುದ್ಧವಾಗಿ ತಮ್ಮೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆಂದು ನಟಿಯ ಸಹೋದರಿ ಆರೋಪ ಮಾಡಿದ್ದಾರೆ.

ನಟಿಯ ಸಹೋದರಿ ನೀಡಿರುವ ದೂರಿನ ಅನ್ವಯ ಆಕೆ ಮತ್ತು ಬಂಧಿತ ರಾಘವೇಂದ್ರ ಇಬ್ಬರೂ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಆ ವೇಳೆ ಪರಸ್ಪರ ಪರಿಚಯವಾಗಿತ್ತು, ಪರಿಚಯ ಸ್ನೇಹಕ್ಕೆ ತಿರುಗಿ, ಬಳಿಕ ಇಬ್ಬರೂ ಪ್ರೀತಿಸಲು ಪ್ರಾರಂಭಿಸಿದ್ದರು. ಈ ವೇಳೆ ರಾಘವೇಂದ್ರ ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿದ್ದ, ಹಾಗೂ ತಮ್ಮೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ನಟಿಯ ಸಹೋದರಿ ಹೇಳಿದ್ದಾರೆ.

ರಾಘವೇಂದ್ರ, ತಮ್ಮ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸಾಲಗಳನ್ನು ಪಡೆದುಕೊಂಡಿದ್ದ. ಈ ವಿಷಯವಾಗಿ ತಮಗೂ ರಾಘವೇಂದ್ರಗೂ ಜಗಳ ಆಗಿತ್ತು. ಆ ಬಳಿಕ ವಿಚಾರಣೆ ಮಾಡಿದಾಗ ರಾಘವೇಂದ್ರಗೆ ಈಗಾಗಲೇ ಮದುವೆ ಆಗಿರುವುದು ಗೊತ್​ತಾಗಿತ್ತು. ಆದರೆ ರಾಘವೇಂದ್ರ, ಯುವತಿಯ ಖಾಸಗಿ ಚಿತ್ರಗಳನ್ನು ಇರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದ. ಆ ವಿಷಯವನ್ನು ನಟಿಯ ಸಹೋದರಿ ಈ ಮೊದಲೇ ಪೊಲೀಸರಿಗೆ ತಿಳಿಸಿದ್ದರು. ಆಗ ಪೊಲೀಸರು ಕರೆದು ರಾಘವೇಂದ್ರಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದರು.

ಇದನ್ನೂ ಓದಿ:ಟಾಕ್ಸಿಕ್ ಸಂಬಂಧದ ಕಷ್ಟ ತೆರೆದಿಟ್ಟ ನಟಿ ಅನುಪಮಾ ಪರಮೇಶ್ವರನ್

ಆದರೆ ಇತ್ತೀಚೆಗೆ ರಾಘವೇಂದ್ರ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇಶ ಕಳಿಸಿದ್ದ. ಕೈಗೆ ಗಾಯ ಮಾಡಿಕೊಂಡಿರುವುದಾಗಿ ಫೋಟೊಗಳನ್ನು ಕಳಿಸಿದ್ದ. ಕೂಡಲೇ ನಟಿಯ ಸಹೋದರಿ ಸ್ಥಳಕ್ಕೆ ತೆರಳಿದಾಗ, ಆತ ಟೊಮ್ಯಾಟೊ ಕೆಚಪ್ ಬಳಸಿ ಸುಳ್ಳು ಫೋಟೊಗಳನ್ನು ಸೃಷ್ಟಿಸಿ ಯುವತಿಗೆ ಕಳಿಸಿದ್ದ ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ. ಆದರೆ ತಾನು ಅಲ್ಲಿಗೆ ಹೋದಾಗ ಮತ್ತೆ ಆಕೆಯ ಖಾಸಗಿ ಫೋಟೊಗಳನ್ನು ತೋರಿಸಿ ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡಿ, ಯುವತಿಯ ಇಚ್ಛೆಗೆ ವಿರುದ್ಧವಾಗಿ ಆಕೆಯೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ನಟಿಯ ಸಹೋದರಿಯ ದೂರು ದಾಖಲಿಸಿಕೊಂಡ ಪೊಲೀಸರು ರಾಘವೇಂದ್ರನ ಮೇಲೆ ಅತ್ಯಾಚಾರ, ಬ್ಲಾಕ್​​ಮೇಲ್, ಬೆದರಿಕೆ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us