‘ಕಾಂತಾರ ನೋಡಿ ಮೈಮರೆತೆ’; ರಿಷಬ್ ಚಿತ್ರ ಹೊಗಳಿದ ಅಲ್ಲು ಅರ್ಜುನ್

ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಸಿನಿಮಾಗಳನ್ನು ವೀಕ್ಷಿಸಿ ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಅಲ್ಲು ಅರ್ಜುನ್ ವಿಮರ್ಶೆ ತಿಳಿಸಿದ ಅನೇಕ ಉದಾಹರಣೆ ಇದೆ. ಈಗ ಅಲ್ಲು ಅರ್ಜುನ್ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರ ನೋಡಿ ಮೈಮರೆತಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಲು ಅವರು ಮರೆತಿಲ್ಲ.

‘ಕಾಂತಾರ ನೋಡಿ ಮೈಮರೆತೆ’; ರಿಷಬ್ ಚಿತ್ರ ಹೊಗಳಿದ ಅಲ್ಲು ಅರ್ಜುನ್
ರಿಷಬ್-ಅಲ್ಲು ಅರ್ಜುನ್

Updated on: Oct 24, 2025 | 1:38 PM

‘ಕಾಂತಾರ: ಚಾಪ್ಟರ್ 1’ (Kantara: Chapter 1) ಚಿತ್ರವನ್ನು ಅನೇಕ ಸ್ಟಾರ್ ಕಲಾವಿದರು ಹೊಗಳಿದ್ದಾರೆ. ಕನ್ನಡದವರು ಮಾತ್ರವಲ್ಲದೆ ಪರಭಾಷಿಗರು ಕೂಡ ಸಿನಿಮಾನ ಹೊಗಳುತ್ತಿದ್ದಾರೆ. ಈಗ ಈ ಚಿತ್ರವನ್ನು ಅಲ್ಲು ಅರ್ಜುನ್ ಅವರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, ಈ ಸಿನಿಮಾ ನೋಡಿದ ಅವರು ಮೈಮರೆತಿದ್ದಾಗಿ ಹೇಳಿದ್ದಾರೆ. ಇಡೀ ತಂಡವನ್ನು ಅವರು ಹೊಗಳಿದ್ದಾರೆ. ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಸಿನಿಮಾಗಳನ್ನು ವೀಕ್ಷಿಸಿ ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಅಲ್ಲು ಅರ್ಜುನ್ ವಿಮರ್ಶೆ ತಿಳಿಸಿದ ಅನೇಕ ಉದಾಹರಣೆ ಇದೆ. ಈಗ ಅಲ್ಲು ಅರ್ಜುನ್ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರ ನೋಡಿ ಮೈಮರೆತಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಲು ಅವರು ಮರೆತಿಲ್ಲ.

ಇದನ್ನೂ ಓದಿ
‘ಸೀತಾ ರಾಮ’ ಮುಗಿದ ಬಳಿಕ ಏನು ಮಾಡ್ತಿದ್ದಾಳೆ ಸಿಹಿ? ಇಲ್ಲಿದೆ ವಿವರ
ಮೊದಲ ಬಾರಿಗೆ ಅತೀ ಕಡಿಮೆ ಕಲೆಕ್ಷನ್ ಮಾಡಿದ ‘ಕಾಂತಾರ: ಚಾಪ್ಟರ 1’
ಬಿಗ್ ಬಾಸ್ ಮನೆಯಿಂದ ಶೀಘ್ರವೇ ಅಶ್ವಿನಿ ಗೌಡ ಹೊರಕ್ಕೆ? ನಡೆಯಲಿದೆ ವಿಚಾರಣೆ
ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ; ತಾಳ್ಮೆ ಕಳೆದುಕೊಂಡ ಕಾವ್ಯಾ

‘ಕಾಂತಾರ ಚಿತ್ರವನ್ನು ವೀಕ್ಷಿಸಿದೆ. ಅದ್ಭುತ ಸಿನಿಮಾ. ಸಿನಿಮಾ ನೋಡಿ ನಾನು ಮೈಮರೆತೆ. ಒನ್ ಮ್ಯಾನ್ ಆರ್ಮಿ ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆ. ಅವರು ಬರಹಗಾರನಾಗಿ, ನಿರ್ದೇಶಕನಾಗಿ, ನಟನಾಗಿ ಶ್ರಮಿಸಿದ್ದಾರೆ.  ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಹಾಗೂ ಇತರರ ನಟನೆ ಉತ್ತಮವಾಗಿದೆ.  ಅಜನೀಶ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಕೆಲಸ ಉತ್ತಮವಾಗಿದೆ’ ಎಂದು ಅಲ್ಲು ಅರ್ಜುನ್ ಟ್ವೀಟ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ವಿಶ್ವ ಬಾಕ್ಸ್ ಆಫೀಸ್​​ ಲೆಕ್ಕ ನೀಡಿದ ಹೊಂಬಾಳೆ ಫಿಲ್ಮ್ಸ್; ದಾಖಲೆ ಮೇಲೆ ದಾಖಲೆ

ವಿಜಯ್ ಕಿರಗಂದೂರು ಅವರು ಸಿನಿಮಾನ ನಿರ್ಮಾಣ ಮಾಡಿದವರು. ಅವರಿಗೆ ಹಾಗೂ ಅವರ ತಂಡಕ್ಕೆ ಅಲ್ಲು ಅರ್ಜುನ್ ಅಭಿನಂದನೆ ತಿಳಿಸಿದ್ದಾರೆ. ‘ಈ ಅನುಭವ ಹೇಳಲು ಶಬ್ದಗಳೇ ಸಾಲುವುದಿಲ್ಲ’ ಎಂದು ಅಲ್ಲು ಅರ್ಜುನ್ ವಿವರಿಸಿದ್ದಾರೆ.  ‘ಕಾಂತಾರ: ಚಾಪ್ಟರ್ 1’ ಚಿತ್ರ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 800+ ಕೋಟಿ ರೂಪಾಯಿ ಗಳಿಸಿದೆ. ಸಿನಿಮಾ ಹೇಗಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:28 pm, Fri, 24 October 25