‘ನಾನು ಛತ್ರಿ ಹಿಡಿಯೋಕೆ ಬಂದಿಲ್ಲ’; ಉರಿದು ಬಿದ್ದ ಜಾನ್ವಿ
ನಟಿ ಜಾನ್ವಿ ಬಿಗ್ ಬಾಸ್ ಮನೆಯಲ್ಲಿ ರಿಷಾ ವಿರುದ್ಧ ಖಡಕ್ ತಿರುಗೇಟು ನೀಡಿದ್ದಾರೆ. ಕ್ಯಾಪ್ಟನ್ಸಿ ರೇಸ್‌ನಲ್ಲಿ ತಮ್ಮ ತಂಡದ ಸದಸ್ಯರನ್ನು ಹೊರಗಿಟ್ಟು ತಮ್ಮ ಲಾಭ ಪಡೆದ ರಿಷಾ ಅವರ ಸಮರ್ಥನೆ ಜಾನ್ವಿಗೆ ಸಿಟ್ಟು ತರಿಸಿದೆ. 'ಅಶ್ವಿನಿಗೆ ಬಕೆಟ್ ಹಿಡಿಯುತ್ತಾರೆ' ಎಂಬ ರಿಷಾ ಟೀಕೆಗೆ ಜಾನ್ವಿ, 'ನಾನು ನಿಮ್ಮ ತರಹ ಛತ್ರಿ ಹಿಡಿಯೋಕೆ ಬಂದಿಲ್ಲ' ಎಂದು ನೇರವಾಗಿ ಉತ್ತರ ನೀಡಿದ್ದಾರೆ.

ನಟಿ ಜಾನ್ವಿ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಸಾಕಷ್ಟು ಹೈಲೈಟ್ ಕೂಡ ಆಗುತ್ತಿದ್ದಾರೆ. ಹೀಗಿರುವಾಗಲೇ ಜಾನ್ವಿ ಹಾಗೂ ರಿಷಾ ವಿರುದ್ಧ ಕಿತ್ತಾಟ ನಡೆದಿದೆ. ಪದೇ ಪದೇ ಕೆಣಕಲು ಬಂದ ರಿಷಾಗೆ ಜಾನ್ವಿ ಅವರು ಖಡಕ್ ಆಗಿ ತಿರುಗೇಟು ಕೊಟ್ಟಿದ್ದಾರೆ. ಜಾನ್ವಿ ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ನ್ಯಾಯದ ಪರ ಆಡುವ ಪ್ರಯತ್ನದಲ್ಲಿದ್ದಾರೆ.
ರಿಷಾ, ಸೂರಜ್ ಹಾಗೂ ರಘು ಒಂದೊಂದು ತಂಡದ ನಾಯಕರಾಗಿದ್ದರು. ಈ ಮೂವರಿಗೂ ಬಿಗ್ ಬಾಸ್ ಒಂದು ಆಯ್ಕೆ ಕೊಟ್ಟರು. ಈ ಮೂವರು ನೇರವಾಗಿ ಬಿಗ್ ಬಾಸ್ ರೇಸ್ಗೆ ಆಯ್ಕೆ ಆಗುವ ಅವಕಾಶ ಇತ್ತು. ಹೀಗಾದರೆ ತಂಡದ ಇತರೆ ಸದಸ್ಯರು ಆಟದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ರಘು ಹಾಗೂ ರಿಷಾ ಈ ಆಯ್ಕೆ ಬಳಸಿದರು. ಸೂರಜ್ ಸಿಂಗ್ ಈ ಆಯ್ಕೆ ತ್ಯಜಿಸಿದರು.
ಈ ರೀತಿ ಆಯ್ಕೆ ಬಳಕೆ ಮಾಡಿಕೊಂಡಿದ್ದೂ ಅಲ್ಲದೆ, ಎಲ್ಲಾ ಸ್ಪರ್ಧಿಗಳು ತಮಗೆ ತಾವು ಸಮರ್ಥನೆ ನೀಡಲು ಬಂದರು. ಈ ವಿಚಾರ ಜಾನ್ವಿ ಅವರಿಗೆ ಸಿಟ್ಟು ತರಿಸಿದೆ. ಅವರು ರಿಷಾ ವಿರುದ್ಧ ಕೂಗಾಡಿದ್ದಾರೆ. ‘ಅಶ್ವಿನಿಗೆ ಜಾನ್ವಿ ಬಕೆಟ್ ಹಿಡಿಯುತ್ತಾರೆ. ಅವರ ನೆರಳಲ್ಲೇ ಆಡುತ್ತಾರೆ’ ಎಂದು ರಿಷಾ ಅವರು ಜಾನ್ವಿಗೆ ಪರೋಕ್ಷವಾಗಿ ಹೇಳಿದ್ದರು. ಕ್ಯಾಪ್ಟನ್ಸಿ ಆಟ ಸಿಕ್ಕಿಲ್ಲ ಹಾಗೂ ಈಗಾದ ಹಿನ್ನಡೆ ಜಾನ್ವಿ ಅವರನ್ನು ಕೆರಳಿಸಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಶೀಘ್ರವೇ ಅಶ್ವಿನಿ ಗೌಡ ಹೊರಕ್ಕೆ? ನಡೆಯಲಿದೆ ಪೊಲೀಸ್ ವಿಚಾರಣೆ
‘ನಾನು ನಿಮ್ಮ ತರಹ ಛತ್ರಿ ಹಿಡಿಯೋಕೆ ಬಂದಿಲ್ಲ’ ಎಂದು ಜಾನ್ವಿ ಅವರು ರಿಷಾ ಅವರಿಗೆ ಹೇಳಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ರಿಷಾ ವಿರುದ್ಧ ಜಾನ್ವಿ ಅವರು ಕೂಗಾಡಿದ್ದಾರೆ. ರಿಷಾ ಅವರು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗಿ ರೇಸ್ಗೇನೋ ತೆರಳಿದ್ದರು. ಆದರೆ, ಅವರಿಂದ ಇದನ್ನು ಗೆಲ್ಲೋಕೆ ಸಾಧ್ಯವಾಗಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








