Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರೀಕರಣ ಮುಗಿಸಿದ ‘ಶೆಫ್ ಚಿದಂಬರ’: ಸಿನಿಮಾ ಮೇಲೆ ಅನಿರುದ್ಧ್​ಗೆ ಭರಪೂರ ಭರವಸೆ

Chef Chidambara: ಅನಿರುದ್ದ್ ನಟಿಸಿರುವ 'ಶೆಫ್ ಚಿದಂಬರ' ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾಕ್ಕೆ ವಿಶೇಷ ತರಬೇತಿ ಪಡೆದು ಕ್ಯಾಮೆರಾ ಎದುರಿಸಿದ್ದಾರೆ ನಟ ಅನಿರುದ್ಧ್.

ಚಿತ್ರೀಕರಣ ಮುಗಿಸಿದ 'ಶೆಫ್ ಚಿದಂಬರ': ಸಿನಿಮಾ ಮೇಲೆ ಅನಿರುದ್ಧ್​ಗೆ ಭರಪೂರ ಭರವಸೆ
ಅನಿರುದ್ದ್
Follow us
ಮಂಜುನಾಥ ಸಿ.
|

Updated on: Oct 11, 2023 | 9:56 PM

‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಮತ್ತೊಮ್ಮೆ ಜನಪ್ರಿಯತೆ ಗಳಿಸಿರುವ ನಟ ಅನಿರುದ್ಧ್ ಜತಕರ್ (Anirudh Jatkar) ನಾಯಕರಾಗಿ ನಟಿಸಿರುವ, “ಶೆಫ್ ಚಿದಂಬರ” ಸಿನಿಮಾ ಚಿತ್ರೀಕರಣ ಮುಗಿಸಿದೆ. ಈ ಹಿಂದೆ “ರಾಘು” ಹೆಸರಿನ ಸಿನಿಮಾ ಮಾಡಿದ್ದ ಎಂ ಆನಂದರಾಜ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಸಿನಿಮಾದ ಚಿತ್ರೀಕರಣ ಆಗಸ್ಟ್ 10ರಂದು ಆರಂಭವಾಗಿತ್ತು. ಅ.10ರಂದು ಮುಕ್ತಾಯವಾಗಿದೆ ಎಂದರು ನಿರ್ದೇಶಕ ಆನಂದರಾಜ್. ”ಬೆಂಗಳೂರು, ಮಂಗಳೂರು, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ 29 ದಿನಗಳ ಕಾಲ ನಮ್ಮ ಸಿನಿಮಾದ ಚಿತ್ರೀಕರಣ ನಡೆದಿದೆ. ‘ಶೆಫ್ ಚಿದಂಬರ’ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಡಾರ್ಕ್ ಹ್ಯೂಮರ್ ಮಾದರಿಯ ಕತೆ ಹೊಂದಿರುವ ಸಿನಿಮಾ. ಅನಿರುದ್ದ್ ಅವರು ಶೆಫ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟಿ ನಿಧಿ ಸುಬ್ಬಯ್ಯ ಭಿನ್ನವಾದ ಪಾತ್ರದಲ್ಲಿ ನಟಿಸಿದ್ದಾರೆ. ರೆಚೆಲ್ ಡೇವಿಡ್ ಸಹ ಭಿನ್ನವಾದ. ಶರತ್ ಲೋಹಿತಾಶ್ವ, ಶಿವಮಣಿ, ಶ್ರೀಧರ್, ಮಾಹಂತೇಶ್ ಮುಂತಾದ ಅನುಭವಿ ನಟರು ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ತಿಳಿಸಿದರು.

”ನಾನು ಎಂದಿಗೂ ಅಡುಗೆ ಮಾಡಿದವನಲ್ಲ. ಈ ಸಿನಿಮಾನಲ್ಲಿ ಮೊದಲ ಬಾರಿಗೆ ಶೆಫ್ ಪಾತ್ರದಲ್ಲಿ ನಟಿಸಿದ್ದೀನಿ. ಈ ಪಾತ್ರದಲ್ಲಿ ನಟಿಸಲೆಂದೇ ತರಬೇತಿ ಸಹ ಪಡೆದೆ. ಕ್ರೈಮ್ ಥ್ರಿಲ್ಲರ್ ಕತೆಯನ್ನು ಹೊಂದಿರುವ ಚಿತ್ರ ಆದರೂ, ನಿರ್ದೇಶಕರು ಕಥೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞ ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದರು ನಾಯಕ ಅನಿರುದ್ಧ್ ಜತಕರ್. ನಾನು ಈವರೆಗಿನ ನನ್ನ ವೃತ್ತಿ ಜೀವನದಲ್ಲಿ ಮಾಡಿರದ ರೀತಿಯ ಭಿನ್ನವಾದ ಪಾತ್ರದಲ್ಲಿ ನಟಿಸಿದ್ದೇನೆ. ಈ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ, ನನ್ನ ಪಾತ್ರ ನೋಡಿ ಕೆಲವರಿಗೆ ಆಶ್ಚರ್ಯ ಕೆಲವರಿಗೆ ಗಾಬರಿ ಸಹ ಆಗಬಹುದು ಎಂದರು ನಾಯಕಿ ನಿಧಿ ಸುಬ್ಬಯ್ಯ.

ಇದನ್ನೂ ಓದಿ: ಶೆಫ್ ಚಿದಂಬರ ಪಾತ್ರಕ್ಕಾಗಿ ಅಡುಗೆ ಕಲಿತ ಅನಿರುದ್ಧ್

ನಾಯಕಿ ರೆಚೆಲ್ ಡೇವಿಡ್ ಮಾತನಾಡಿ, ಅನು ಹೆಸರಿನ ಪಾತ್ರದಲ್ಲಿ ನಟಿಸಿದ್ದೀನಿ. ಸಿನಿಮಾದಲ್ಲಿ ನನ್ನ ಪಾತ್ರ ಹಾಗೂ ಸಿನಿಮಾದ ಕಥೆ ಎರಡೂ ಚೆನ್ನಾಗಿದೆ ಎಂದರು. ಸಿನಿಮಾದ ಕತೆಯನ್ನು ನಿರ್ದೇಶಕ ಎಂ ಆನಂದರಾಜ್ ರಚಿಸಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ. ಛಾಯಾಗ್ರಹಣವನ್ನು ಉದಯಲೀಲಾ ಮಾಡಿದ್ದಾರೆ. ವಿಜೇತ್ ಚಂದ್ರ ಎಡಿಟಿಂಗ್ ಮಾಡಿದ್ದಾರೆ. ಸಂಗೀತ ನಿರ್ದೇಶನವನ್ನು ರಿತ್ವಿಕ್ ಮುರಳಿಧರ್ ಮಾಡಿದ್ದಾರೆ. ಆಶಿಕ್ ಹುಸಗುಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ ಅವರ ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ಸಿನಿಮಾವನ್ನು ರೂಪ ಡಿ.ಎನ್ ಅವರು ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ