AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮನೆ ಬಳಿ ಬರಬೇಡಿ’: ಹುಟ್ಟುಹಬ್ಬದ ದಿನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ನಟಿ ಆಶಿಕಾ ರಂಗನಾಥ್​

Ashika Ranganath Birthday: ‘ಕ್ಷಮಿಸಿ, ಈ ಬಾರಿಯ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ನನಗೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಪ್ಲ್ಯಾನ್​ ಮಾಡೋಣ’ ಎಂದು ಆಶಿಕಾ ರಂಗನಾಥ್​ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

‘ಮನೆ ಬಳಿ ಬರಬೇಡಿ’: ಹುಟ್ಟುಹಬ್ಬದ ದಿನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ನಟಿ ಆಶಿಕಾ ರಂಗನಾಥ್​
ಆಶಿಕಾ ರಂಗನಾಥ್​
ಮದನ್​ ಕುಮಾರ್​
|

Updated on: Aug 05, 2023 | 9:36 AM

Share

ನಟಿ ಆಶಿಕಾ ರಂಗನಾಥ್​ (Ashika Ranganath) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕನ್ನಡ ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸ್ಟಾರ್​ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ನಟನೆಯಿಂದಲೂ, ಗ್ಲಾಮರ್​ನಿಂದಲೂ ಸೆಳೆಯುವ ಆಶಿಕಾ ರಂಗನಾಥ್​ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಇಂದು (ಆಗಸ್ಟ್​ 5) ಅವರಿಗೆ ಜನ್ಮದಿನದ (Ashika Ranganath Birthday) ಸಂಭ್ರಮ. ಈ ಪ್ರಯುಕ್ತ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. ಸೆಲೆಬ್ರಿಟಿಗಳ ಜನ್ಮದಿನದ ಸಮಯದಲ್ಲಿ ಅವರ ಮನೆ ಎದುರು ಅಭಿಮಾನಿಗಳು ಜಮಾಯಿಸುವುದು ಸಹಜ. ಆದರೆ ಈ ವರ್ಷ ತಮ್ಮ ಮನೆ ಬಳಿ ಯಾರೂ ಬರಬೇಡಿ ಎಂದು ಆಶಿಕಾ ರಂಗನಾಥ್​ ಅವರು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ತಿಳಿಸಿದ್ದಾರೆ.

ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಆಶಿಕಾ ರಂಗನಾಥ್​ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ‘ಎಲ್ಲರಿಗೂ ಹಾಯ್​.. ಇದನ್ನು ನಾನು ತುಂಬು ಹೃದಯದ ಪ್ರೀತಿ ಮತ್ತು ನಗುವಿನಿಂದ ತಿಳಿಯುತ್ತಿದ್ದೇನೆ. ಈ ಬಾರಿ ನಾನು ಮನೆಯಲ್ಲಿ ಜನ್ಮದಿನ ಆಚರಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮೊಂದಿಗೆ ಬರ್ತ್​ಡೇ ಸೆಲೆಬ್ರೇಟ್​ ಮಾಡುವುದನ್ನು ನಾನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮೊಂದಿಗೆ ಸೆಲೆಬ್ರೇಟ್​ ಮಾಡಬೇಕು ಎಂಬುದೇ ನನ್ನ ಆಸೆ ಆಗಿತ್ತು. ಕಳೆದ ವರ್ಷ ನಿಮ್ಮ ಜೊತೆಗಿನ ಬರ್ತ್​ಡೇ ಸೆಲೆಬ್ರೇಷನ್​ ತುಂಬ ಚೆನ್ನಾಗಿತ್ತು. ಅದಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಆಶಿಕಾ ರಂಗನಾಥ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ashika Ranganath: ಕೊಡವ ಶೈಲಿಯಲ್ಲಿ ಸೀರೆಯುಟ್ಟು ಗೆಳತಿಯ ಮದುವೆಯಲ್ಲಿ ಆಶಿಕಾ ರಂಗನಾಥ್​​​​

‘ಕ್ಷಮಿಸಿ, ಈ ಬಾರಿ ನಿಮ್ಮ ಜೊತೆ ಇರಲು ನನಗೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಪ್ಲ್ಯಾನ್​ ಮಾಡೋಣ. ಈ ಬಾರಿ ನಮ್ಮ ಮನೆಗೆ ಬಂದು ಸುಮ್ಮನೆ ಕಾಯಬೇಡಿ. ಅಲ್ಲಿ ನಾನು ನಿಮಗೆ ಸಿಗುವುದಿಲ್ಲ. ಅದರ ಬದಲು ವರ್ಚುವಲ್​ ಆಗಿ ಸಂಪರ್ಕದಲ್ಲಿ ಇರೋಣ. ತುಂಬ ಅದ್ಭುತಬವಾದ ಅಭಿಮಾನಿಗಳಾಗಿ ನನ್ನೊಂದಿಗೆ ಇರುವುದಕ್ಕೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹವು ನನಗೆ ಖುಷಿ ನೀಡುತ್ತದೆ ಹಾಗೂ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಲು ಶಕ್ತಿ ನೀಡುತ್ತದೆ. ನಿಮ್ಮೊಂದಿಗೆ ಸೆಲೆಬ್ರೇಟ್​ ಮಾಡಲು ಕಾಯುತ್ತಿದ್ದೇನೆ’ ಎಂದು ಆಶಿಕಾ ರಂಗನಾಥ್​ ಅವರು ಬರಹ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಪರಭಾಷೆಯಲ್ಲೂ ಆಶಿಕಾ ರಂಗನಾಥ್​ಗೆ ಭಾರಿ ಬೇಡಿಕೆ

ಆಶಿಕಾ ರಂಗನಾಥ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2016ರಲ್ಲಿ ತೆರೆಕಂಡ ‘ಕ್ರೇಜಿ ಬಾಯ್​’ ಸಿನಿಮಾ ಮೂಲಕ. ಬಳಿಕ ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಸಿಗಲು ಆರಂಭ ಆದವು. ‘ಮುಗುಳುನಗೆ’ ಸಿನಿಮಾದಲ್ಲಿ ಗಣೇಶ್​ ಜೊತೆ ನಾಯಕಿಯಾಗಿ ನಟಿಸಿದರು. ‘ಮಾಸ್​ ಲೀಡರ್​’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿತು. ಶರಣ್​ ಜೊತೆ ಅವರು ನಟಿಸಿದ ‘ರ‍್ಯಾಂಬೋ 2’ ಚಿತ್ರದ ‘ಚುಟು ಚುಟು ಅಂತೈತಿ..’ ಹಾಡಿಗೆ ಸಿಕ್ಕ ಜನಪ್ರಿಯತೆ ಅಷ್ಟಿಷ್ಟಲ್ಲ. ‘ಪಿಆರ್​ಕೆ ಪ್ರೊಡಕ್ಷನ್ಸ್​’ ನಿರ್ಮಾಣದ ‘ಒ2’ ಸಿನಿಮಾದಲ್ಲೂ ಆಶಿಕಾ ನಟಿಸಿದ್ದು, ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್