Singri Gowda: ಸೆಂಚುರಿ ಗೌಡ ನಿಧನ; ‘ತಿಥಿ’ ನಟ ಗಡ್ಡಪ್ಪ ಸಾವಿನ ಬೆನ್ನಲ್ಲೇ ಸಿಂಗ್ರಿ ಗೌಡ ನಿಧನ
Century Gowda Death: 'ತಿಥಿ' ಸಿನಿಮಾ ಖ್ಯಾತಿಯ ಗಡ್ಡಪ್ಪ (ನವೆಂಬರ್ 12) ಮತ್ತು ಸೆಂಚುರಿ ಗೌಡ (ಜನವರಿ 4) ನಿಧನರಾಗಿದ್ದಾರೆ. 100 ವರ್ಷಕ್ಕೂ ಹೆಚ್ಚು ವಯಸ್ಸಿನವರಾಗಿದ್ದ ಸೆಂಚುರಿ ಗೌಡ ಅನಾರೋಗ್ಯದಿಂದ ಬಳಲುತ್ತಿದ್ದರು. ಗಡ್ಡಪ್ಪ ಅವರ ಸಾವಿನ ಕೇವಲ ಒಂದೂವರೆ ತಿಂಗಳ ನಂತರ ಸೆಂಚುರಿ ಗೌಡ ಅಗಲಿದ್ದಾರೆ.

‘ತಿಥಿ’ ಸಿನಿಮಾ (Thithi Movie) ಖ್ಯಾತಿ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಅವರು 2025r ನವೆಂಬರ್ 12ರಂದು ನಿಧನ ಹೊಂದಿದ್ದರು. ಈ ಸಿನಿಮಾದಲ್ಲಿ ಸೆಂಚುರಿ ಗೌಡ ಪಾತ್ರ ಮಾಡಿದ್ದ ಸಿಂಗ್ರಿ ಗೌಡ ಕೂಡ ಈಗ ನಿಧನರಾಗಿದ್ದಾರೆ. ಅವರಿಗೆ ನೂರು ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜನವರಿ 4ರ ರಾತ್ರಿ ಅವರು ಕೊನೆಯುಸಿರು ಎಳೆದರು.
ಸೆಂಚುರಿ ಗೌಡರು ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲಿನವರು. ‘ತಿಥಿ’ ಸಿನಿಮಾದಲ್ಲಿ ಅವರು ಮಾಡಿದ ಸೆಂಚುರಿ ಗೌಡ ಪಾತ್ರ ಗಮನ ಸೆಳೆದಿತ್ತು. ಈ ಸಿನಿಮಾ ಕೊಂಚ ಜನಪ್ರಿಯತೆ ನೀಡಿತ್ತು. ಇದರಿಂದ ಬೇರೆ ಸಿನಿಮಾ ಆಫರ್ಗಳು ಬಂದವು. ‘ತಿಥಿ’ ಸಿನಿಮಾ (2015) ರಿಲೀಸ್ ಆಗಿ ಹಿಟ್ ಆದಾಗ, ಆ ಊರಿಗೆ ಬರುತ್ತಿದ್ದ ಕೆಲವರು ಸಿಂಗ್ರಿಗೌಡ ಅವರನ್ನು ಭೇಟಿ ಆಗಿ, ಫೋಟೋ ತೆಗೆಸಿಕೊಂಡು ಹೋಗುತ್ತಿದ್ದರು.
‘ತಿಥಿ’ ಸಿನಿಮಾ ನಿರ್ದೇಶಕರು ಸಿಂಗ್ರಿಗೌಡ ಅವರನ್ನು ಆಯ್ಕೆ ಮಾಡಿದ್ದೇ ಒಂದು ಅಚ್ಚರಿಯ ಘಟನೆ. ಸಿಂಗ್ರಿಗೌಡ ಅಣ್ಣ ಸತ್ತು ಹೋಗಿದ್ದರಂತೆ. ಅವರ ತಿಥಿಗೆ ‘ತಿಥಿ’ ಸಿನಿಮಾ ನಿರ್ದೇಶಕರು ಬಂದಿದ್ದರು. ಈ ವೇಳೆ ಸಿನಿಮಾ ಸೆಂಚುರಿ ಗೌಡ ಇಷ್ಟ ಆಗಿ ಸಿನಿಮಾ ಆಫರ್ ಕೊಟ್ಟರು. ಸಿನಿಮಾದಲ್ಲಿ ಸೆಂಚುರಿ ಗೌಡ ಪಾತ್ರ ಮಾಡಿದ್ದರು. ಈ ಚಿತ್ರಕ್ಕಾಗಿ ಅವರಿಗೆ 20 ಸಾವಿರ ಸಂಭಾವನೆ ಸಿಕ್ಕಿತ್ತು ಎನ್ನಾಗಿದೆ. ಅನೇಕ ಚಿತ್ರಗಳಲ್ಲಿ ಸಿಂಗ್ರಿಗೌಡ ನಟಿಸಿದ್ದಾರೆ. ಕೆಲವು ಸಿನಿಮಾ ತಂಡದವರು ಹಣ ಕೊಡದೆ ಅವರಿಗೆ ಮೋಸ ಮಾಡಿದ್ದಾರಂತೆ.
ಇದನ್ನೂ ಓದಿ: ‘ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನ; 89ನೇ ವಯಸ್ಸಿಗೆ ಕೊನೆಯುಸಿರು
ಗಡ್ಡಪ್ಪ ನಿಧನ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಗಡ್ಡಪ್ಪ ಅವರು ಕಳೆದ ವರ್ಷ ನವೆಂಬರ್ 12ರಂದು ನಿಧನ ಹೊಂದಿದ್ದರು. ಇವರು ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದವರು. ಗಡ್ಡಪ್ಪ ಅವರಿಗೆ ಕೆಲ ವರ್ಷಗಳ ಹಿಂದೆ ಪಾರ್ಶ್ವ ವಾಯು ಆಗಿತ್ತು. ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ. ಚಿಕಿತ್ಸೆಗೂ ಅವರ ಬಳಿ ಹಣ ಇರಲಿಲ್ಲ. ಇಷ್ಟೇ ಅಲ್ಲದೆ ಹೃದಯ ಕಾಯಿಲೆ, ಕೆಮ್ಮು ಮತ್ತು ಉಬ್ಬಸ, ಶ್ರವಣದೋಷ ಮತ್ತು ಇತರ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದವು. ಅವರು ನಿಧನ ಹೊಂದಿ ಕೇವಲ ಒಂದೂವರೆ ತಿಂಗಳಿಗೆ ಸೆಂಚುರಿ ಗೌಡ ನಿಧನ ಹೊಂದಿದ್ದು ನಿಜಕ್ಕೂ ಬೇಸರದ ವಿಷಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:10 am, Mon, 5 January 26




