AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಱಪರ್​ ಚಂದನ್ ಬೊಂಬೆ ನಿವಿ ಮದುವೆ ಇಂದು: ಕಂಪ್ಲಿಟ್​ ಡೀಟೈಲ್ಸ್ ಇಲ್ಲಿದೆ

ಱಪರ್​ ಚಂದನ್​ ಶೆಟ್ಟಿ ಮತ್ತು ಚಂದನ್​ ಬೊಂಬೆ ನಿವೇದಿತ ಗೌಡ ಹೊಸ ಬಾಲಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇಂದು ಮೈಸೂರಿನಲ್ಲಿ ಈ ಜೋಡಿಯ ಆರತಕ್ಷತೆ ನಡೆಯಲಿದೆ. ಹಾಗಿದ್ರೆ, ಚಂದನ್​ ನಿವೇದಿತ ಮದುವೆಯ ವಿಶೇಷತೆಗಳೇನು ಅನ್ನೋದ್ರ ಕಂಪ್ಲಿಟ್​ ಡೀಟೈಲ್ಸ್​ ಈ ಸ್ಟೋರಿಯಲ್ಲಿದೆ. ಚಂದನ್ ಮತ್ತು ನಿವೇದಿತ ಗೌಡ ಸ್ಯಾಂಡಲ್​ವುಡ್​ನ ಕಿವ್ಟ್​ ಜೋಡಿ. ಬಿಗ್​ ಬಾಸ್ ಮನೆಯಲ್ಲಿ ಚಂದನ್​ಗೆ ಸಿಕ್ಕ ನಿವೇದಿತ, ಈಗ ಚಂದನ್​ ಬಾಳಿಗೆ ಬೆಳಕಾಗಿ, ಅವ್ರ ಕುಟುಂಬಕ್ಕೆ ಜೊತೆಯಾಗ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಸ್ನೇಹಿತರಾಗಿ, ನಂತ್ರ ಪ್ರೇಮಿಗಳಾಗಿ ಈಗ ಮದುವೆ ಅನ್ನೋ […]

ಱಪರ್​ ಚಂದನ್ ಬೊಂಬೆ ನಿವಿ ಮದುವೆ ಇಂದು: ಕಂಪ್ಲಿಟ್​ ಡೀಟೈಲ್ಸ್ ಇಲ್ಲಿದೆ
ಸಾಧು ಶ್ರೀನಾಥ್​
|

Updated on: Feb 25, 2020 | 12:19 PM

Share

ಱಪರ್​ ಚಂದನ್​ ಶೆಟ್ಟಿ ಮತ್ತು ಚಂದನ್​ ಬೊಂಬೆ ನಿವೇದಿತ ಗೌಡ ಹೊಸ ಬಾಲಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇಂದು ಮೈಸೂರಿನಲ್ಲಿ ಈ ಜೋಡಿಯ ಆರತಕ್ಷತೆ ನಡೆಯಲಿದೆ. ಹಾಗಿದ್ರೆ, ಚಂದನ್​ ನಿವೇದಿತ ಮದುವೆಯ ವಿಶೇಷತೆಗಳೇನು ಅನ್ನೋದ್ರ ಕಂಪ್ಲಿಟ್​ ಡೀಟೈಲ್ಸ್​ ಈ ಸ್ಟೋರಿಯಲ್ಲಿದೆ.

ಚಂದನ್ ಮತ್ತು ನಿವೇದಿತ ಗೌಡ ಸ್ಯಾಂಡಲ್​ವುಡ್​ನ ಕಿವ್ಟ್​ ಜೋಡಿ. ಬಿಗ್​ ಬಾಸ್ ಮನೆಯಲ್ಲಿ ಚಂದನ್​ಗೆ ಸಿಕ್ಕ ನಿವೇದಿತ, ಈಗ ಚಂದನ್​ ಬಾಳಿಗೆ ಬೆಳಕಾಗಿ, ಅವ್ರ ಕುಟುಂಬಕ್ಕೆ ಜೊತೆಯಾಗ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಸ್ನೇಹಿತರಾಗಿ, ನಂತ್ರ ಪ್ರೇಮಿಗಳಾಗಿ ಈಗ ಮದುವೆ ಅನ್ನೋ ಬಂಧಕ್ಕೆ ಇಬ್ಬರು ಸಾಕ್ಷಿ ಆಗ್ತಿದ್ದಾರೆ.

ನಿವೇದಿತ, ಚಂದನ್ ಮದುವೆ ಇಂದು ಮತ್ತು ನಾಳೆ ಮೈಸೂರಿನಲ್ಲಿ ನಡೆಯಲಿದೆ. ಮೈಸೂರಿನ ನ್ಯೂ ಸ್ಪೆಕ್ಟ್ರಾ ಕನ್ವೆಷನ್​ ಹಾಲ್​ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಇಂದು ಸಂಜೆ 7 ಗಂಟೆಯ ನಂತ್ರ ಆರತಕ್ಷತೆ ಕಾರ್ಯಮ ನಡೆಯಲಿದೆ. ಮತ್ತು ಫೆಬ್ರವರಿ 26 ಅಂದ್ರೆ ನಾಳೆ ಬೆಳಗ್ಗೆ ಮುಹೂರ್ಥ ಜರುಗಲಿದೆ.

ನಾಳೆ ಬೆಳಿಗ್ಗೆ ಎಂಟು ಹದಿನೈದರಿಂದ ಒಂಭತ್ತು ಗಂಟೆಯ ನಡುವಿನ ಶುಭಮೀನಾ ಲಗ್ನದಲ್ಲಿ ಕಲ್ಯಾಣ ಮುಹೂರ್ಥವನ್ನ ನಿಗಧಿ ಪಡಿಸಲಾಗಿದೆ. ದಸರ ಸಂಭ್ರಮದಲ್ಲಿ ನಿವೇದಿತಾಗೆ ಚಂದನ್​ ಪ್ರಪೋಸ್​ ಮಾಡಿದ್ರು. ನಂತ್ರ ಮೈಸೂರಿನಲ್ಲಿ ಮದುವೆ ನಿಶ್ವಿತಾರ್ಥವನ್ನು ಮಾಡಿಕೊಂಡ್ರು. ಈಗ ಮದುವೆಯನ್ನೂ ಕೂಡ ಮೈಸೂರಿನಲ್ಲೇ ಮಾಡಿಕೊಳ್ತಿದೆ ಈ ಜೋಡಿ.

ಚಂದನ್ ಮತ್ತು ನಿವೇದಿತ ಏನೇ ಮಾಡಿದ್ರು, ಅದ್ರಲ್ಲಿ ವಿಭಿನ್ನತೆಯನ್ನ ಹುಡುಕುವವರು. ಅಂತೆಯೆ ಇವ್ರ ಮದುವೆ ಆಮಂತ್ರಣ ಪತ್ರ ಕೂಡ ವಿಭಿನ್ನವಾಗೇ ಇತ್ತು. ಎರಡು ವಿನ್ಯಾಸಗಳಲ್ಲಿ ಪತ್ರಿಕೆಗಳನ್ನ ಮಾಡಿಸಲಾಗಿತ್ತು. ಇದೆಷ್ಟೇ ಅಲ್ಲಾ ಪ್ರೀವೆಡ್ಡಿಂಗ್ ಫೊಟೋ ಶೂಟ್​ಗಾಗಿ ಈ ಜೋಡಿ ತಮ್ಮದೇ ಆದ ಹಾಡೊಂದನ್ನ ಕಂಪೋಸ್​ ಮಾಡಿದೆ. ಗೆಟ್ ಹೈ ಅನ್ನೋ ಈ ಹಾಡಿನ ಟೀಸರ್ ರಿಲೀಸ್ ಆಗಿದೆ. ಇಂದು ಸಂಜೆ ವೇಳೆ ಪೂರ್ತಿ ಹಾಡನ್ನ ರಿಲೀಸ್ ಮಾಡೋ ಪ್ಲ್ಯಾನ್​ನಲ್ಲಿದ್ದಾರೆ ಚಂದನ್ ನಿವಿ.

ಗುರುಹಿರಿಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಈ ಚಂದನ್ ಮತ್ತು ನಿವೇದಿತ ಕಲ್ಯಾಣ ಅದ್ದೂರಿಯಾಗಿ ಜರುಗಲಿದೆ. ಈ ನವ ಜೋಡಿಯ ಮದುವೆಗೆ ಸಿನಿಮಾರಂಗದ ಮತ್ತು ರಾಜಕೀಯ ಗಣ್ಯರು ಸಾಕ್ಷಿ ಆಗಲಿದ್ದಾರೆ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ