AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ರ ಕಾಲೆಳೆಯುತ್ತೆ ಕಾಲ’; ಚಂದನ್​ ಶೆಟ್ಟಿ ಜೊತೆ ರಾಗಿಣಿ ದ್ವಿವೇದಿ ‘ಟುನ್​​ ಟುನ್​..​​’ ಗಾನ ಬಜಾನ

Chandan Shetty New Song: ಚಂದನ್ ಶೆಟ್ಟಿ ಅವರೇ ‘ಟುನ್​ ಟುನ್​..’ ಹಾಡನ್ನು ಬರೆದಿದ್ದಾರೆ. ಮಂಗ್ಲಿ ಹಾಗೂ ಚಂದನ್ ಶೆಟ್ಟಿ ಜೊತೆಯಾಗಿ ಈ ಗೀತೆಗೆ ಧ್ವನಿ ನೀಡಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

‘ಎಲ್ರ ಕಾಲೆಳೆಯುತ್ತೆ ಕಾಲ’; ಚಂದನ್​ ಶೆಟ್ಟಿ ಜೊತೆ ರಾಗಿಣಿ ದ್ವಿವೇದಿ ‘ಟುನ್​​ ಟುನ್​..​​’ ಗಾನ ಬಜಾನ
ಚಂದನ್ ಶೆಟ್ಟಿ, ರಾಗಿಣಿ ದ್ವಿವೇದಿ
ಮದನ್​ ಕುಮಾರ್​
|

Updated on: Apr 12, 2023 | 7:05 PM

Share

ಚಂದನ್​ ಶೆಟ್ಟಿ (Chandan Shetty) ಅವರು ಗಾಯಕನಾಗಿ ಹಾಗೂ ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ಹೀರೋ ಆಗಿ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಅವರು ನಟಿಸಿರುವ ‘ಎಲ್ರ ಕಾಲೆಳೆಯುತ್ತೆ ಕಾಲ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಹೊಸ ಹಾಡು ರಿಲೀಸ್​ ಆಗಿದೆ. ‘ಟುನ್​ ಟುನ್​..’ ಎಂಬ ಈ ಹಾಡಿನಲ್ಲಿ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಹೆಜ್ಜೆ ಹಾಕಿದ್ದಾರೆ ಎಂಬುದು ವಿಶೇಷ. ಅಂದಹಾಗೆ, ಇದು ಪ್ರೊಮೋಷನಲ್​ ಸಾಂಗ್​. ಯೂಟ್ಯೂಬ್​ನಲ್ಲಿ ಈಗಾಗಲೇ 12 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡು ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಅನಂದ್​ ಆಡಿಯೋ ಮೂಲಕ ‘ಟುನ್​ ಟುನ್​..’ ಗೀತೆ (Tun Tun Kannada song) ರಿಲೀಸ್​ ಆಗಿದೆ. ರಾಗಿಣಿ ದ್ವಿವೇದಿ ಅವರು ಗ್ಲಾಮರಸ್​ ಆಗಿ ಕಾಣಿಸಿಕೊಂಡು ಸಖತ್ತಾಗಿ ಡ್ಯಾನ್ಸ್​ ಮಾಡಿದ್ದಾರೆ.

ಚಂದನ್ ಶೆಟ್ಟಿ ಅವರೇ ‘ಟುನ್​ ಟುನ್​..’ ಹಾಡನ್ನು ಬರೆದಿದ್ದಾರೆ. ಮಂಗ್ಲಿ ಹಾಗೂ ಚಂದನ್ ಶೆಟ್ಟಿ ಜೊತೆಯಾಗಿ ಈ ಗೀತೆಗೆ ಧ್ವನಿ ನೀಡಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರಕ್ಕೆ ಪ್ರವೀಣ್-ಪ್ರದೀಪ್ ಸಂಗೀತ ನಿರ್ದೇಶಕರು. ಆದರೆ ‘ಟುನ್​ ಟುನ್​..’ ಹಾಡಿಗೆ ಮಾತ್ರ ಚಂದನ್ ಶೆಟ್ಟಿ ಅವರೇ ಸಂಗೀತ ನೀಡಿದ್ದಾರೆ.

Elra Kaaleliyatte Kaala Movie Team

‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರತಂಡ

ರಾಗಿಣಿ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಚಂದನ್​ ಶೆಟ್ಟಿ ಮಾತನಾಡಿದ್ದಾರೆ. ‘ನಾನು ಕೆಂಪೇಗೌಡ ಸಿನಿಮಾದಿಂದಲೂ ರಾಗಿಣಿ ಅವರ ಅಭಿಮಾನಿ. ಈಗ ಅವರ ಜೊತೆ ಹಾಡೊಂದರಲ್ಲಿ ನಟಿಸಿರುವುದು ಖುಷಿ ಆಗಿದೆ. ಹಾಡು ಹಾಗೂ ಚಿತ್ರ ಎಲ್ಲರ ಮನ ಗೆಲ್ಲಲಿದೆ. ಇದು ನಾನು ಹೀರೋ ಆಗಿ ನಟಿಸಿರುವ ಮೊದಲ ಚಿತ್ರ. ಎಲ್ಲರ ಪ್ರೋತ್ಸಾಹ ಬೇಕು’ ಎಂದಿದ್ದಾರೆ ಚಂದನ್ ಶೆಟ್ಟಿ. ಇನ್ನು, ರಾಗಿಣಿ ಅವರು ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ‘ಈ ಹಾಡು ಚೆನ್ನಾಗಿದೆ. ಚಂದನ್ ಶೆಟ್ಟಿ ಪ್ರತಿಭಾವಂತ. ಅವರು ಸಂಗೀತ ನೀಡಿ, ಹಾಡುವ ಹಾಡುಗಳು ನನಗೆ ಇಷ್ಟ. ಬಹಳ ದಿನಗಳಿಂದ ಅವರ ಜೊತೆ ನಟಿಸುವ ಕುರಿತು ಮಾತುಕತೆ ನಡೆಯುತ್ತಿತ್ತು. ಈಗ ಈ ಚಿತ್ರದ ಪ್ರಮೋಷನ್ ಸಾಂಗ್​ನಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ’ ಎಂದಿದ್ದಾರೆ ರಾಗಿಣಿ ದ್ವಿವೇದಿ.

ಇದನ್ನೂ ಓದಿ
Image
‘ಸಾರಿ ಕರ್ಮ ರಿಟರ್ನ್ಸ್​’: 11 ವರ್ಷದಲ್ಲಿ ರಾಗಿಣಿ ದ್ವಿವೇದಿ ತೆಗೆದುಕೊಂಡ ರಿಸ್ಕ್​ ಏನು?
Image
‘ನಿಮ್ಮ ದೇಹವನ್ನು ನೀವು ಪ್ರೀತಿಸಿ’; ನಟಿ ರಾಗಿಣಿ ವಿಶೇಷ ಮನವಿ
Image
ರಾಗಿಣಿ ದ್ವಿವೇದಿ ಯುಗಾದಿ ಸ್ಪೆಷಲ್​; ಹಬ್ಬದ ಸಂಭ್ರಮದಲ್ಲಿ ಸೀರೆ ಧರಿಸಿ ಮಿಂಚಿದ ‘ತುಪ್ಪದ ಬೆಡಗಿ’
Image
ತಮಿಳು ಸಿನಿಮಾದಲ್ಲಿ ರಾಗಿಣಿ ದ್ವಿವೇದಿ; ತುಪ್ಪದ ಬೆಡಗಿಯ ಹೊಸ ಚಿತ್ರಕ್ಕೆ ಶೂಟಿಂಗ್ ಶುರು

ಇದನ್ನೂ ಓದಿ: Ragini Dwivedi: ಗನ್​ ಹಿಡಿದು ನಿಂತ ರಾಗಿಣಿ ದ್ವಿವೇದಿ; ‘ಬಿಂಗೊ’ ಚಿತ್ರದಲ್ಲಿ ತುಪ್ಪದ ಬೆಡಗಿಗೆ ಖಡಕ್​ ಲುಕ್​

ರೆಟ್ರೋ ಕಾಲಘಟ್ಟದ ಕಥೆಯನ್ನು ಈ ಸಿನಿಮಾ ಹೊಂದಿದೆ. ಗೋವಿಂದರಾಜು ಅವರು ಬಂಡವಾಳ ಹೂಡಿದ್ದಾರೆ. ಸುಜಯ್ ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ತಾವು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಸಿನಿಮಾ ಮೂಡಿಬಂದಿದೆ ಎಂಬ ಸಂತೋಷ ನಿರ್ಮಾಪಕರಿಗಿದೆ. ಅರ್ಚನಾ ಕೊಟ್ಟಿಗೆ, ರಜನಿಕಾಂತ್, ರಾಕೇಶ್ ಪೂಜಾರಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್