AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ವಿಷಯಕ್ಕೆ ಜಮೀರ್-ಝೈದ್ ಮಧ್ಯೆ ಆಗಿದೆ ಸಾಕಷ್ಟು ಜಗಳ; ವಿವರಿಸಿದ ನಟ

ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾ ತೆರೆಕಂಡಿದೆ. ಸಿನಿಮಾ ರಂಗದ ಬಗ್ಗೆ ಅಪಾರ ಒಲವು ಹೊಂದಿರುವ ಝೈದ್, ತನ್ನ ತಂದೆ ಬಿಸ್ನೆಸ್ ಮಾಡುವಂತೆ ಹೇಳಿದಾಗ ನಡೆದ ಜಗಳದ ಬಗ್ಗೆ ಮಾತನಾಡಿದ್ದಾರೆ. ತಂದೆಯ ದುಡ್ಡಿನಲ್ಲಿ ಬದುಕಲು ಇಷ್ಟವಿಲ್ಲದ ಝೈದ್, ತಾನೇ ಎಲ್ಲವನ್ನೂ ನಿಭಾಯಿಸುವುದಾಗಿ ಹೇಳಿದ್ದಾರೆ.

ಆ ವಿಷಯಕ್ಕೆ ಜಮೀರ್-ಝೈದ್ ಮಧ್ಯೆ ಆಗಿದೆ ಸಾಕಷ್ಟು ಜಗಳ; ವಿವರಿಸಿದ ನಟ
ಝೈದ್-ಜಮೀರ್
ರಾಜೇಶ್ ದುಗ್ಗುಮನೆ
|

Updated on: Jan 23, 2026 | 7:35 AM

Share

ಸಚಿವ ಜಮೀರ್ ಅಹ್ಮದ್ ಖಾನ್ ಮಗ ಝೈದ್ ಖಾನ್ (Zaid Khan) ಅವರು ‘ಬನಾರಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಅವರು ‘ಕಲ್ಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು (ಜನವರಿ 23) ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಸಿನಿಮಾ ಸಖತ್ ರಾ ಆಗಿರೋದು ಇದಕ್ಕೆ ಕಾರಣ. ಈಗ ಝೈದ್ ಖಾನ್ ಅವರು ತಂದೆ ಜೊತೆ ಆಗೋ ಕಿರಿಕ್​​​ಗಳ ಬಗ್ಗೆ ಮಾತನಾಡಿದ್ದಾರೆ. ಒಂದು ವಿಷಯದಲ್ಲಿ ಇಬ್ಬರ ಮಧ್ಯೆ ಸಾಕಷ್ಟು ಜಗಳ ಆಗಿದೆಯಂತೆ.

ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳು ರಾಜಕೀಯದಲ್ಲೇ ಮುಂದುವರಿಯುವ ಪ್ರಯತ್ನ ಮಾಡುತ್ತಾರೆ. ಪಾಲಕರಿಗೂ ಇದೆ ಹಾರೈಕೆ ಇರುತ್ತದೆ. ಆದರೆ, ಜಮೀರ್​​ಗೆ ಇದು ಇಷ್ಟ ಇಲ್ಲ. ಸದ್ಯಕ್ಕೆ ಅವರು ಸಿನಿಮಾ ರಂಗದಲ್ಲಿ ನಟನಾಗಿ ಮಿಂಚುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಝೈದ್ ಖಾನ್ ಅವರು ತಂದೆಯ ಬಗ್ಗೆ ಮಾತನಾಡಿದ್ದಾರೆ.

‘ಕೆಲಸ ಎಂಬುದು ಬಂದರೆ ನಾನು ರಾಕ್ಷಸ. ನನ್ನ ನೂರರಷ್ಟು ಶ್ರಮ ಹಾಕುತ್ತೇನೆ . ಆದರೆ, ಕೆಲಸ ಇಲ್ಲ ಎಂದರೆ ನಾನು ಬೆಡ್ ಮೇಲೆ ಇರುತ್ತೇನೆ. ಯಾವಾಗಲೂ ಸುದ್ದಿಯಲ್ಲಿರಬೇಕು, ಕಾಣಿಸಿಕೊಳ್ಳುತ್ತಾ ಇರಬೇಕು ಎಂಬುದು ನಂಗೆ ಇಲ್ಲ. ನನಗೆ ನನ್ನದೇ ಆದ ಖಾಸಗಿ ಜೀವನ ಇದೆ’ ಎಂದಿದ್ದಾರೆ ಝದ್ ಖಾನ್.

ಇದನ್ನೂ ಓದಿ: ‘ನನ್ನ ಸಿನಿಮಾ ಯಾಕೆ ಕೊಲ್ತೀರ?’ ದುನಿಯಾ ವಿಜಿಯ ಪ್ರಶ್ನಿಸಿದ ಝೈದ್ ಖಾನ್, ಉತ್ತರ ಏನಿತ್ತು?

‘ಸಿನಿಮಾ ಇಂಡಸ್ಟ್ರಿಗೆ ನಾನು ಪ್ಯಾಷನ್​​ಗೆ ಬಂದಿದ್ದು. ನನ್ನ ಮನೆಯ ಬಿಸ್ನೆಸ್​​​ನ ನಡೆಸಿಕೊಂಡು ಹೋಗುವ ಜವಾಬ್ದಾರಿ ನನಗೆ ಇದೆ. ತಂದೆ ದುಡ್ಡು ಕೊಡ್ತಾರೆ ಎಂದು ಬದುಕೋದು ಜೀವನ ಅಲ್ಲ’ ಎಂದಿದ್ದಾರೆ ಅವರು. ‘ಸಿನಿಮಾ ಕರಿಯರ್​​ಗೆ ಹೋಗೋವಾಗ ತಂದೆ ಬಿಸ್ನೆಸ್ ಮಾಡುವಂತೆ ಸೂಚಿಸಿದ್ದರು. ದುಡ್ಡು ಬೇಕಿದ್ರೂ ಕೊಡ್ತೀನಿ ಎಂದರು. ನಾನು ರಾಜಕೀಯಕ್ಕೆ ಬರೋದು ಅವರಿಗೆ ಇಷ್ಟ ಇಲ್ಲ. ಬಿಸ್ನೆಸ್ ಮಾಡಬೇಕು ಎಂಬ ವಿಷಯಕ್ಕೆ ನನ್ನ ತಂದೆ ಹಾಗೂ ನನ್ನ ಮಧ್ಯೆ ಸಾಕಷ್ಟು ಜಗಳ ಆಗಿದೆ’ ಎಂದು ಝೈದ್ ಖಾನ್ ವಿವರಿಸಿದ್ದಾರೆ.

ತಂದೆಯ ಜೊತೆಗಿನ ಜಗಳದ ಬಗ್ಗೆ ವಿಡಿಯೋ ಅಂತ್ಯದಲ್ಲಿ ಝೈದ್ ಮಾತನಾಡಿದ್ದಾರೆ

ಝೈದ್ ಖಾನ್ ಅವರು ಚಿತ್ರರಂಗಕ್ಕೆ ಬರುತ್ತಾರೆ ಎಂದಾಗ ಅವರೇ ಎಲ್ಲವನ್ನೂ ಪ್ಲ್ಯಾನ್ ಮಾಡಿಕೊಂಡು ಬಂದರು. ಅವರಿಗೆ ತಂದೆಯ ಬೆಂಬಲ ಅಷ್ಟಾಗಿ ಸಿಕ್ಕಿಲ್ಲವಂತೆ. ತಂದೆ ಕೂಡ ಅವರ ಸಿನಿಮಾ ಕಾರ್ಯಕ್ರಮಗಳಿಗೆ ಬರೋದು ಕಡಿಮೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಸಿಹಿ ಸುದ್ದಿ
ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಸಿಹಿ ಸುದ್ದಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ