ಸಿಡ್ನಿಯ ಮೋದಿ ಶೋನಲ್ಲಿ ಕರಾವಳಿಯ ನಾದ, ವೇದಿಕೆ ಮೇಲೆ ವರಾಹ ರೂಪಂ

Narendra Modi: ಸಿಡ್ನಿಯಲ್ಲಿ ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಮೋದಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಾಂತಾರ ಸಿನಿಮಾದ ವರಾಹ ರೂಪಂ ಹಾಗೂ ತುಳುನಾಡಿನ ಜನಪ್ರಿಯ ಹಾಡು ವಾ ಪೊರ್ಲುಯಾಗೆ ನೃತ್ಯ ಪ್ರದರ್ಶಿಸಲಾಯಿತು.

ಸಿಡ್ನಿಯ ಮೋದಿ ಶೋನಲ್ಲಿ ಕರಾವಳಿಯ ನಾದ, ವೇದಿಕೆ ಮೇಲೆ ವರಾಹ ರೂಪಂ
ವರಾಹ ರೂಪಂ
Follow us
ಮಂಜುನಾಥ ಸಿ.
|

Updated on:May 23, 2023 | 4:59 PM

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ (Qudos Bank Arena) ಅನಿವಾಸಿ ಭಾರತೀಯರನ್ನುದ್ದೇಶಿಸಿ (NRI) ಭಾಷಣ ಮಾಡಿದ್ದಾರೆ. ಮೋದಿಯ ಕಾರ್ಯಕ್ರಮ ನಿಮಿತ್ತ ಅದ್ಧೂರಿ ಮನೊರಂಜನೆ ಕಾರ್ಯಕ್ರಮವನ್ನೂ ಸಹ ಆಯೋಜಿಸಲಾಗಿತ್ತು. ಮೋದಿ ವೇದಿಕೆ ಎರುವ ಮೊದಲು ಸುಮಾರು ಒಂದೂವರೆ ಗಂಟೆಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತದ ಹಲವು ರಾಜ್ಯಗಳನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಕರಾವಳಿಯನ್ನು ಪ್ರತಿನಿಧಿಸುವ ವರಾಹ ರೂಪಂ (Varaha Roopam) ಹಾಗೂ ವಾ ಪೊರ್ಲುಯಾ (Va Porluya) ಹಾಡುಗಳಿಗೆ ನೃತ್ಯ ಪ್ರಾತ್ಯಕ್ಷಿತೆ ನೀಡಲಾಯಿತು.

ಕಾಂತಾರ (Kantara) ಸಿನಿಮಾದ ಗುಳಿಗ ವೇಷದ ಜೊತೆಗೆ ಯಕ್ಷಗಾನ ವೇಷಧಾರಿಗಳು ಹಾಗೂ ಕೆಲವು ಮಹಿಳೆಯರು ವರಾಹ ರೂಪಂ ಹಾಗೂ ವಾ ಪೊರ್ಲು ಯಾ ಹಾಡಿಗೆ ಜನಪದ ಹಾಗೂ ಭರತ ನಾಟ್ಯ ಮಾದರಿಗಳಲ್ಲಿ ನೃತ್ಯ ಮಾಡಿದರು. ವರಾಹ ರೂಪಂ ಹಾಡು ಬಂದಾಗ ಜೋರು ಕರತಾಡನ ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಹೊಮ್ಮಿತು. ವಾಪೊರ್ಲುಯಾ ಹಾಗೂ ವರಾಹ ರೂಪಂ ಎರಡೂ ಹಾಡುಗಳು ಕಂತಾರ ಸಿನಿಮಾದಲ್ಲಿವೆ. ಆದರೆ ವಾ ಪೊರ್ಲುಯಾ ಹಾಡು 17 ವರ್ಷದ ಹಿಂದೆಯೇ ಮೈಮ್ ರಾಮ್ ದಾಸ್ ಹಾಡಿದ್ದರು. ಇದು ತುಳು ನಾಡಿನ ಜನಪ್ರಿಯ ಹಾಡು, ಹಾಡು ಬರೆದವರು ಕವಿ ಶಶಿರಾಜ್ ಕಾವೋರು.

ಭಾರತದ ಹಲವು ರಾಜ್ಯಗಳ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಆಯಾ ರಾಜ್ಯಗಳ ಸಾಂಸ್ಕೃತಿಕ ನೃತ್ಯಗಳನ್ನು ವೇದಿಕೆ ಮೇಲೆ ಪ್ರದರ್ಶಿಸಲಾಯಿತು. ತೆಲುಗು ರಾಜ್ಯಗಳ ಪರವಾಗಿ ಆರ್​ಆರ್​ಆರ್ ಸಿನಿಮಾದ ನಾಟು ನಾಟು ಹಾಡನ್ನು ಪ್ರದರ್ಶಿಸಲಾಯಿತು. ಇದಕ್ಕೆ ಭಾರಿ ಕರತಾಡನ ವ್ಯಕ್ತವಾಯಿತು. ನಾಟು ನಾಟು ಜೊತೆಗೆ ತೆಲುಗಿನ ಲವ್ ಸ್ಟೋರಿ ಸಿನಿಮಾದ ಸಾರಂಗ ದರಿಯಾ ಹಾಡಿಗೆ ಸಹ ನೃತ್ಯ ಮಾಡಲಾಯಿತು.

ಕೇರಳ ರಾಜ್ಯದವರು ಕಳರಿಪಯಟ್ಟು, ಕೂಚುಪ್ಪುಡಿ ಸೇರಿದಂತೆ ತಮ್ಮ ರಾಜ್ಯದ ಭಿನ್ನ ಸಂಸ್ಕೃತಿಯನ್ನು ಪ್ರದರ್ಶಿಸುವ ನೃತ್ಯಗಳನ್ನು ಪ್ರದರ್ಶಿಸಿದರು. ರಾಜಸ್ಥಾನ, ಅಸ್ಸಾಂ, ಪಶ್ಚಿಮ ಬಂಗಾಳ ಇನ್ನೂ ಹಲವು ರಾಜ್ಯಗಳವರು ತಮ್ಮ ತಮ್ಮ ರಾಜ್ಯದ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿ ನೆರೆದವರ ಮನರಂಜಿಸಿದರು. ಕೆಲವು ವರದಿಗಳ ಪ್ರಕಾರ, ಮೋದಿಯವರ ಈ ಕಾರ್ಯಕ್ರಮದಲ್ಲಿ ಸುಮಾರು 20,000 ಜನ ಸೇರಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ:Kantara: ‘ವರಾಹ ರೂಪಂ..’ ಹಾಡಿನ ವಿವಾದ: ನಟ ಪೃಥ್ವಿರಾಜ್​ ಸುಕುಮಾರನ್​​ ಮೇಲಿನ ಎಫ್​ಐಆರ್​ಗೆ ಕೋರ್ಟ್​ ತಡೆ

ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದ ಬಳಿಕ ವೇದಿಕೆ ಏರಿ ಮಾತನಾಡಿದ ಮೋದಿ, ”ನಮ್ಮ ಜೀವನಶೈಲಿ ವಿಭಿನ್ನವಾಗಿರಬಹುದು ಆದರೆ ಈಗ ಯೋಗ ಕೂಡ ನಮ್ಮನ್ನು ಬೆಸೆದಿದೆ. ನಾವು ಕ್ರಿಕೆಟ್‌ ನಿಂದಾಗಿ ದೀರ್ಘಕಾಲ ಸಂಪರ್ಕ ಹೊಂದಿದ್ದೇವೆ. ಆದರೆ ಈಗ ಟೆನಿಸ್ ಮತ್ತು ಸಿನಿಮಾ ಕೂಡಾ ನಮ್ಮನ್ನು ಪರಸ್ಪರ ಬೆಸೆಯುವ ಕೊಂಡಿಗಳಾಗಿವೆ. ನಾವು ವಿಭಿನ್ನ ರೀತಿಯಲ್ಲಿ ಆಹಾರವನ್ನು ತಯಾರಿಸುತ್ತೇವೆ, ಈಗ ಮಾಸ್ಟರ್​​ಶೆಫ್ ನಮ್ಮನ್ನು ಪರಸ್ಪರ ಬೆಸೆಯುತ್ತದೆ. ನಾನು 2014ರಲ್ಲಿ ಇಲ್ಲಿಗೆ ಬಂದಾಗ, ಭಾರತೀಯ ಪ್ರಧಾನಿಗಾಗಿ ನೀವು 28 ವರ್ಷಗಳವರೆಗೆ ಕಾಯಬೇಕಾಗಿಲ್ಲ ಎಂದು ನಾನು ನಿಮಗೆ ಭರವಸೆ ನೀಡಿದ್ದೆ. ಹಾಗಾಗಿ, ನಾನು ಮತ್ತೊಮ್ಮೆ ಸಿಡ್ನಿಯಲ್ಲಿದ್ದೇನೆ ಎಂದಿದ್ದಾರೆ. ಭಾರತ ಮೂಲದ ಸಮೀರ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಂಬಂಧ ಗಟ್ಟಿಯಾಗಿದೆ. 2 ದೇಶಗಳ ಸಂಬಂಧ ಗಟ್ಟಿಯಾಗಿರಲು ಭಾರತೀಯರು ಕಾರಣ. ಜೈಪುರದ ಜಿಲೇಬಿ, ಸ್ವೀಟ್​ಗಳು ಆಸ್ಟ್ರೇಲಿಯಾದಲ್ಲೂ ಸಿಗುತ್ತದೆ. ಇಂದು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ, ಇಡೀ ಜಗತ್ತಿನಾದ್ಯಂತ ಭಾರತದ ಟ್ಯಾಲೆಂಟ್​ ಫ್ಯಾಕ್ಟರಿ ಇದೆ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Tue, 23 May 23

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್