AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿ ರೋಸ್ಟ್ ಮಾಡೋಕೆ ಹೇಗೆ ಸಾಧ್ಯ? ಅಸಲಿ ಕಥೆ ಹೇಳಿದ ದಾನಿಶ್ ಸೇಠ್

ನಟ, ಕಾಮಿಡಿಯನ್ ದಾನಿಶ್ ಸೇಠ್ ತಮ್ಮ 'ಮಿಸ್ಟರ್ ನಾಗ್ಸ್' ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಆರ್‌ಸಿಬಿ ಇನ್ಸೈಡರ್ ಆಗಿ ವಿಡಿಯೋಗಳನ್ನು ಸಿದ್ಧಪಡಿಸುವ ಪ್ರಕ್ರಿಯೆ, ಸ್ಕ್ರಿಪ್ಟ್ ಸವಾಲು ಮತ್ತು ಮನರಂಜನೆಯೇ ತಮ್ಮ ಮುಖ್ಯ ಉದ್ದೇಶ ಎಂದು ವಿವರಿಸಿದ್ದಾರೆ. ಯಾರಿಗೂ ನೋವಾಗದಂತೆ ಕಾಮಿಡಿ ಮಾಡುವುದು ಉದ್ದೇಶ ಎಂದು ಹೇಳಿದ್ದಾರೆ.

ಕೊಹ್ಲಿ ರೋಸ್ಟ್ ಮಾಡೋಕೆ ಹೇಗೆ ಸಾಧ್ಯ? ಅಸಲಿ ಕಥೆ ಹೇಳಿದ ದಾನಿಶ್ ಸೇಠ್
ದಾನಿಶ್-ವಿರಾಟ್
ರಾಜೇಶ್ ದುಗ್ಗುಮನೆ
|

Updated on: Apr 13, 2026 | 1:18 PM

Share

ನಟ, ಸ್ಟ್ಯಾಂಡಪ್ ಕಾಮಿಡಿಯನ್ ದಾನಿಶ್ ಸೇಠ್ ಅವರ ಪರಿಚಯ ಅನೇಕರಿಗೆ ಇದೆ. ‘ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಚಿತ್ರ ಮಾಡಿ ಗಮನ ಸೆಳೆದ ಅವರು, ನಂತರ ‘ಫ್ರೆಂಚ್ ಬಿರಿಯಾನಿ’ ರೀತಿಯ ಚಿತ್ರಗಳನ್ನು ಮಾಡಿದರು. ಇದರ ಜೊತೆ ಅವರು ‘ಮಿಸ್ಟರ್ ನ್ಯಾಗ್ಸ್’ ಆಗಿ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆರ್​​ಸಿಬಿ ಇನ್​​ಸೈಡರ್ ಆಗಿ ಕಾಂಟೆಂಟ್​​ಗಳನ್ನು ಕ್ರಿಯೇಟ್ ಮಾಡುತ್ತಾರೆ. ಮಿಸ್ಟರ್ ನ್ಯಾಗ್ಸ್ ಆಗಿ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ವಿವರ ಇಲ್ಲಿದೆ.

ಈ ಪ್ರಕ್ರಿಯೆಯನ ಎಂಜಾಯ್ ಮಾಡ್ತೀನಿ..

ದಾನಿಶ್ ಅವರು ಪ್ರತಿ ಪಂದ್ಯದ ಬಳಿಕ ಒಂದು ವಿಶೇಷ ವಿಡಿಯೋ ಮಾಡುತ್ತಾರೆ. ಇದಕ್ಕೆ ಸಿದ್ಧತೆ ಹೇಗಿರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ‘ನಾನು ಇದನ್ನು ಮಾಡಲು ಆರಂಭಿಸಿ 13 ವರ್ಷಗಳೇ ಆಗಿವೆ. ಸ್ಕ್ರಿಪ್ಟ್ ಬರೆಯೋದು ಸ್ವಲ್ಪ ಚಾಲೆಂಜ್ ಎನಿಸುತ್ತದೆ. ಜೋಕ್ ಸರಿಯಾಗಿ ಜನರಿಗೆ ರೀಚ್ ಆಗಬೇಕು. ಅಂದಾಗ ಮಾತ್ರ ನಮ್ಮ ಪ್ರಯತ್ನ ಯಶಸ್ಸು ಕಾಣುತ್ತದೆ. ನಾನು ವಿಗ್ ಹಾಗೂ ಮೀಸೆ ಹಾಕಿದಾಗ ನ್ಯಾಗ್ಸ್ ಆಗಿ ಬದಲಾಗಿಬಿಡುತ್ತೇನೆ. ನನ್ನದೇ ಟೀಂ ಇದೆ. ಮ್ಯಾಚ್ ನೋಡಿ ಪಾಯಿಂಟ್ಸ್ ಮಾಡ್ಕೋತೀವಿ. ನಾನು ಈ ಪ್ರಕ್ರಿಯೆಯನ್ನು ತುಂಬಾನೇ ಎಂಜಾಯ್ ಮಾಡ್ತೀನಿ’ ಎಂದಿದ್ದಾರೆ ದಾನಿಶ್.

ಮನರಂಜನೆ ಕೊಡೋದೊಂದೇ ಉದ್ದೇಶ..

ಆರ್​ಸಿಬಿ ಗೆಲ್ಲಲಿ, ಸೋಲಲಿ ನ್ಯಾಗ್ಸ್ ಕಡೆಯಿಂದ ಬರುವ ಕಂಟೆಂಟ್ ಸಖತ್ ಫನ್ ಆಗಿರುತ್ತದೆ. ಇನ್ನು, ಆರ್​​ಸಿಬಿ ಗೆದ್ದು ಬೇರೆ ತಂಡ ಸೋತಾಗಲೂ ದಾನಿಶ್ ಅವರು ಯಾರಿಗೂ ಬೇಸರ ಆಗದಂತೆ ಹಲವು ವಿಡಿಯೋಗಳನ್ನು ಮಾಡಿದ್ದಾರೆ. ಈ ಪ್ರಕ್ರಿಯೆ ಬಗ್ಗೆ ಅವರು ವಿವರಣೆ ನೀಡಿದ್ದಾರೆ. ‘ನಾನು ಕಾಮಿಡಿಯನ್ ಆಗಿ ಎಲ್ಲವನ್ನೂ ಭಿನ್ನವಾಗಿ ನೋಡುತ್ತೇನೆ. ಹೀಗಾಗಿ, ಹೊಸ ಆ್ಯಂಗಲ್ ಸಿಗಬಹುದು. ಇನ್ನು ಪ್ರತಿ ಕಂಟೆಂಟ್ ಬರೆಯುವಾಗ ಬೇರೆ ತಂಡಕ್ಕೆ ನೋವಾಗದಂತೆ ಅದನ್ನು ಬರೆಯುತ್ತೇವೆ. ಬೇರೆ ತಂಡದವರು ಏನಾದರೂ ಸಾಧನೆ ಮಾಡಿದರೆ ಅದನ್ನು ಹೊಗಳುವ ಕೆಲಸವನ್ನು ನಾವು ಮಾಡುತ್ತೇವೆ. ವೈಯಕ್ತಿಕ ಟೀಕೆಗಳನ್ನು ಎಂದಿಗೂ ಮಾಡಲ್ಲ’ ಎನ್ನುತ್ತಾರೆ ದಾನಿಶ್. ಪ್ರತಿ ವಿಡಿಯೋ ರೆಡಿ ಆದ ಬಳಿಕ ಅದನ್ನು ಅನೇಕರು ವೀಕ್ಷಿಸುತ್ತಾರಂತೆ. ಹೀಗಾಗಿ, ಯಾರಿಗೂ ನೋವಾಗದಂತೆ ನೋಡಿಕೊಳ್ಳುವ ಉದ್ದೇಶ ನಮ್ಮದು ಎನ್ನುತ್ತಾರೆ ಅವರು.

ನಮ್ಮದೇ ಗ್ರೇಟ್ ಎನ್ನಲ್ಲ

ಪ್ರತಿ ಐಪಿಎಲ್ ಫ್ರಾಂಚೈಸಿಗಳು ಸೋಶಿಯಲ್ ಮೀಡಿಯಾ ಹೊಂದಿದ್ದಾರೆ. ಭಿನ್ನ ಕಂಟೆಂಟ್​​ಗಳನ್ನು ನೀಡುತ್ತಾರೆ. ಇವುಗಳಿಗೆ ಹೋಲಿಕೆ ಮಾಡಿದರೆ ಆರ್​​ಸಿಬಿ ಒಂದು ಹಂತ ಮೇಲಿದೆ ಎನಿಸುತ್ತದೆ. ಆದರೆ, ಇದನ್ನು ದಾನಿಶ್ ಒಪ್ಪೋದಿಲ್ಲ. ‘ನಾವು ಫ್ಯಾನ್​ ಎಂಗೇಜ್​​ಮೆಂಟ್​​ಗೋಸ್ಕರ್ ಮಾಡೋದು. ತಂಡದ ಜೊತೆಗೆ ಹಾಗೂ ಅಭಿಮಾನಿಗಳ ನಡುವೆ ನಾವು ಸೇತುವೆ ಆಗುತ್ತೇವೆ ಅಷ್ಟೇ. ಇದು ದೊಡ್ಡ ಜವಾಬ್ದಾರಿ. ಯಾರಿಗೂ ನೋವು ಮಾಡುವ ಉದ್ದೇಶ ಇಲ್ಲ. ನಾನು ಹೆಚ್ಚೆಚ್ಚು ಪುಸ್ತಕಗಳನ್ನು ಓದುತ್ತೇನೆ. ಆ ಜ್ಞಾನವನ್ನು ವಿಡಿಯೋಗಳನ್ನು ಬೆರೆಸುತ್ತೇನೆ’ ಎನ್ನುತ್ತಾರೆ ದಾನಿಶ್.

ನಾನು ದಾನಿಶ್​ ಆಗಲ್ಲ, ನ್ಯಾಗ್ಸ್ ಆಗಿ ಜೋಕ್ ಮಾಡ್ತೀನಿ..

‘ದಾನಿಶ್ ಆಗಿ ನಾನು ಯಾವಾಗಲೂ ಅವರ ಬಳಿ ಈ ರೀತಿ ಜೋಕ್ ಮಾಡಿಲ್ಲ. ನಾನು ಜೋಕ್ ಮಾಡಿದ್ದು ನ್ಯಾಗ್ಸ್ ಆಗಿ. ಬಾಂಡ್ ಬೆಳೆದು 13 ವರ್ಷಗಳು ಕಳೆದಿವೆ. ನಾನು ಜೋಕ್ ಮಾಡಿದ್ರೆ ಅವರಿಗೂ ಇಷ್ಟ ಆಗುತ್ತೆ, ಜನರಿಗೂ ಇಷ್ಟ ಆಗುತ್ತೆ. ಅವರು ಬ್ಯಾಟ್ ಹಿಡಿದು ಮಾತ್ರ ಚಾಂಪಿಯನ್ ಅಲ್ಲ, ಜೀವನದಲ್ಲೂ ಚಾಂಪಿಯನ್. ನಾನು ಕಾಮಿಡಿ ಮಾಡಿದಾಗ ನನ್ನ ಬಳಿ ಯಾಕೆ ಹೀಗೆ ಮಾತಾಡ್ತೀರಿ ಎಂದು ಕೇಳುವ ಅವಕಾಶ ಅವರಿಗೆ ಇತ್ತು. ಅವರು ಎಂದಿಗೂ ಹಾಗೆ ಮಾಡಿಲ್ಲ. ಅವರು ರಿಯಲ್ ಚಾಂಪಿಯನ್. ಅವರಿಂದ ಕಲಿಯೋದು ತುಂಬಾನೇ ಇದೆ’ ಎನ್ನುತ್ತಾರೆ ದಾನಿಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಚಹಾಲ್ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ ಉಲ್ಲು ನಟಿ ತಾನಿಯಾ
ಚಹಾಲ್ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ ಉಲ್ಲು ನಟಿ ತಾನಿಯಾ
ಡಿಕೆಡಿ ಟ್ರೋಫಿ ಎತ್ತಿದ್ದ ಸಿದ್ದೇಗೌಡ-ದೀಶಲ್; ಸಿಕ್ಕ ಹಣ ಎಷ್ಟು?
ಡಿಕೆಡಿ ಟ್ರೋಫಿ ಎತ್ತಿದ್ದ ಸಿದ್ದೇಗೌಡ-ದೀಶಲ್; ಸಿಕ್ಕ ಹಣ ಎಷ್ಟು?
VIDEO: ದಿಢೀರ್ ಚೆಂಡು ಬದಲಿಸಿದ ಅಂಪೈರ್​: ಟಿಮ್ ಡೇವಿಡ್​ಗೆ ಡೌಟ್..!
VIDEO: ದಿಢೀರ್ ಚೆಂಡು ಬದಲಿಸಿದ ಅಂಪೈರ್​: ಟಿಮ್ ಡೇವಿಡ್​ಗೆ ಡೌಟ್..!
ಊಟದ ಬಳಿಕ ನೀವೇ ತಟ್ಟೆ ತೆಗೆಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?
ಊಟದ ಬಳಿಕ ನೀವೇ ತಟ್ಟೆ ತೆಗೆಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?