Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಟ್​ ಲ್ಯಾಗ್ ಕೇಸ್; ವಿಚಾರಣೆ ವೇಳೆ ಆ ಒಂದು ಪ್ರಶ್ನೆಗೆ ಸಿಟ್ಟಾದ್ರಾ ದರ್ಶನ್?

ಕೇಳಿರೋ ಪ್ರಶ್ನೆಗಳಲ್ಲಿ ಕೆಲ ಪ್ರಶ್ನೆಗಳಿಗೆ ಸೆಲೆಬ್ರಿಟಿಗಳು ಮೌನ ತಾಳಿದ್ದಾರೆ. ಅರ್ಧದಷ್ಟು ಪ್ರಶ್ನೆಗಳಿಗೆ ಉತ್ತರ ಕೊಟ್ಟು, ಇನ್ನರ್ಧ ಪ್ರಶ್ನೆಗಳಿಗೆ ಯಾವುದೇ ರಿಯಾಕ್ಷನ್ ನೀಡಿಲ್ಲ ಎಂದು ತಿಳಿದು ಬಂದಿದೆ.

ಜೆಟ್​ ಲ್ಯಾಗ್ ಕೇಸ್; ವಿಚಾರಣೆ ವೇಳೆ ಆ ಒಂದು ಪ್ರಶ್ನೆಗೆ ಸಿಟ್ಟಾದ್ರಾ ದರ್ಶನ್?
ದರ್ಶನ್​
Follow us
ರಾಚಪ್ಪಾಜಿ ನಾಯ್ಕ್
| Updated By: ರಾಜೇಶ್ ದುಗ್ಗುಮನೆ

Updated on: Jan 15, 2024 | 10:11 AM

‘ಕಾಟೇರ’ ಸಿನಿಮಾ (Kaatera Movie) ಸೆಲೆಬ್ರಿಟಿ ಶೋ ಮುಗಿದ ಬಳಿಕ ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಜೆಟ್ ​ಲ್ಯಾಗ್​ ಪಬ್​ನಲ್ಲಿ ಸೆಲೆಬ್ರಿಟಿಗಳು ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಸೆಲೆಬ್ರಿಟಿಗಳನ್ನು ಕರೆದು ವಿಚಾರಣೆ ಕೂಡ ಮಾಡಲಾಗಿತ್ತು. ಈಗ ಸುಬ್ರಹ್ಮಣ್ಯ ನಗರ ಪೊಲೀಸರು ಪ್ರಕರಣದ ತನಿಖಾ ವರದಿ ತಯಾರು ಮಾಡಿದ್ದಾರೆ. ಕಮಿಷನರ್ ದಯಾನಂದ್ ಸೂಚನೆ ಮೇರೆಗೆ ಮಲ್ಲೇಶ್ವರದ ಎಸಿಪಿ ಈ ವರದಿ ಸಿದ್ಧ ಮಾಡಿದ್ದಾರೆ. ಮಂಗಳವಾರ (ಜನವರಿ 16) ತನಿಖಾ ವರದಿ ಸಲ್ಲಿಕೆ ಆಗಲಿದೆ.

ಕೇಳಿರೋ ಪ್ರಶ್ನೆಗಳಲ್ಲಿ ಕೆಲ ಪ್ರಶ್ನೆಗಳಿಗೆ ಸೆಲೆಬ್ರಿಟಿಗಳು ಮೌನ ತಾಳಿದ್ದಾರೆ. ಅರ್ಧದಷ್ಟು ಪ್ರಶ್ನೆಗಳಿಗೆ ಉತ್ತರ ಕೊಟ್ಟು, ಇನ್ನರ್ಧ ಪ್ರಶ್ನೆಗಳಿಗೆ ಯಾವುದೇ ರಿಯಾಕ್ಷನ್ ನೀಡಿಲ್ಲ ಎಂದು ತಿಳಿದು ಬಂದಿದೆ. ಮಾದಕವಸ್ತು ಬಳಕೆ ಬಗ್ಗೆಯೂ ಸ್ಟಾರ್​ಗಳಿಗೆ ಪೊಲೀಸರು ಪ್ರಶ್ನೆ ಮಾಡಿದ್ದರು. ಪಾರ್ಟಿಯಲ್ಲಿ ಮಾದಕ ವಸ್ತು ಬಳಸಿರಬಹುದು ಎಂಬ ಶಂಕೆ ಮೂಡಿರುವುದರಿಂದ ಈ ಪ್ರಶ್ನೆ ಕೇಳಲಾಗಿದೆ.

‘ಗಾಂಜಾ ಬಳಕೆ ಆಗಿತ್ತೇ’ ಎಂದು ದರ್ಶನ್​ಗೆ ಪೊಲೀಸರು ಪ್ರಶ್ನೆ ಮಾಡಿದ್ದರಂತೆ. ಈ ಪ್ರಶ್ನೆಗೆ ದರ್ಶನ್ ಗರಂ ಆಗಿದ್ದರು ಎನ್ನಲಾಗಿದೆ. ‘ಗಾಂಜಾ ಬಗ್ಗೆ ಏಕೆ ಕೇಳುತ್ತಿದ್ದೀರಿ? ಯಾವುದಾದ್ರೂ ಮಾಧ್ಯಮದಲ್ಲಿ ಆ ಬಗ್ಗೆ ಬಂದಿದೆಯೇ’ ಎಂದು ದರ್ಶನ್ ಮರು ಪ್ರಶ್ನೆ ಹಾಕಿದ್ದಾರೆ ಎನ್ನಲಾಗಿದೆ. ಜೊತೆಗೆ ಯಾವುದೇ ಮಾದಕ ವಸ್ತು ಸೇವನೆ ಆಗಿಲ್ಲ ಎಂದು ದರ್ಶನ್ ಉತ್ತರಿಸಿದ್ದಾರೆ.

ಇದನ್ನೂ ಓದಿ:ದರ್ಶನ್ ಅಭಿಮಾನಿಯೆಂದು ಹೇಳಿಕೊಂಡವನಿಂದ ಯುವಕನ ಮೇಲೆ ದೌರ್ಜನ್ಯ 

‘ಊಟ ಮಾಡಿ ಕೆಲ ಹೊತ್ತು ಸಿನಿಮಾದ ಮಾತುಕತೆ ಹಿನ್ನೆಲೆ ಲೇಟಾಗಿದೆ’ ಎಂದು ಸೆಲೆಬ್ರಿಟಿಗಳು ಉತ್ತರಿಸಿದ್ದಾರೆ. ‘ಎಲ್ಲರನ್ನೂ ನಾನೇ ಕರೆದಿದ್ದು. ಪಬ್ ಹೊರಗೆ ದರ್ಶನ್ ಬರುವಾಗ ಜನ ಸೇರಿದ್ದರು. ಹೀಗಾಗಿ ಒಂದಷ್ಟು ತೊಂದರೆಯಾಯ್ತು. ಎಲ್ಲಿಯೂ ಕಾನೂನಿನ ನಿಯಮ ಉಲ್ಲಂಘನೆ ಆಗಿಲ್ಲ’ ಎಂದು ರಾಕ್​ಲೈನ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅಂತಿಮ ವರದಿಯಲ್ಲಿ ಈ ಎಲ್ಲಾ ವಿಚಾರಗಳು ಇರಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ