‘ದಿ ಡೆವಿಲ್’ ಫಸ್ಟ್ ಹಾಫ್‌ನಲ್ಲಿ ದರ್ಶನ್ ಅಭಿಮಾನಿಗಳಿಗೆ ಇಷ್ಟ ಆಗುವಂಥದ್ದು ಏನೆಲ್ಲ ಇದೆ?
Devil First Half Review: 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ದಿ ಡೆವಿಲ್’ ಸಿನಿಮಾ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ದರ್ಶನ್ ಅಭಿಮಾನಿಗಳು ಎಲ್ಲ ಕಡೆಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಪ್ರಕಾಶ್ ವೀರ್ ನಿರ್ದೇಶನದ ಈ ಸಿನಿಮಾ ಮಾಸ್ ಆಗಿ ಮೂಡಿಬಂದಿದೆ. ಚಿತ್ರದ ಪ್ರತಿ ಫ್ರೇಮ್ ಕೂಡ ಅದ್ದೂರಿಯಾಗಿದೆ. ‘ದಿ ಡೆವಿಲ್’ ಚಿತ್ರದ ಫಸ್ಟ್ ಹಾಫ್ ಹೇಗಿದೆ ಎಂಬುದಕ್ಕೆ ಇಲ್ಲಿದೆ ಉತ್ತರ..

ಬಹಳ ಗ್ರ್ಯಾಂಡ್ ಆಗಿ ‘ದಿ ಡೆವಿಲ್’ ಸಿನಿಮಾ (The Devil Movie) ಬಿಡುಗಡೆ ಆಗಿದೆ. ಡಿಸೆಂಬರ್ 11ರಂದು ಮುಂಜಾನೆಯಿಂದಲೇ ಶೋ ಶುರು ಆಗಿದೆ. ಮೊದಲ ದಿನದ ಎಲ್ಲ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಹೌಸ್ಫುಲ್ ಆಗಿರುವುದು ಚಿತ್ರತಂಡಕ್ಕೆ ಸಂತಸ ಮೂಡಿಸಿದೆ. ದರ್ಶನ್ (Darshan Thoogudeepa) ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಅವರು ಇಲ್ಲದಿದ್ದರೂ ಕೂಡ ಅಭಿಮಾನಿಗಳು ‘ದಿ ಡೆವಿಲ್’ ಸಿನಿಮಾಗೆ ಭರ್ಜರಿ ಪ್ರಚಾರ ನೀಡಿ, ಸಂಭ್ರಮಿಸುತ್ತಿದ್ದಾರೆ. ಅಭಿಮಾನಿಗಳಿಗೆ ಇಷ್ಟ ಆಗುವ ರೀತಿಯಲ್ಲಿ ನಿರ್ದೇಶಕ ಪ್ರಕಾಶ್ ವೀರ್ ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ದರ್ಶನ್ ಜೊತೆ ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ವಿಜಯ್ ಗೌಡ, ಚಂದು ಗೌಡ, ಗಿಲ್ಲಿ ನಟ, ಶರ್ಮಿಳಾ ಮಾಂಡ್ರೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ದಿ ಡೆವಿಲ್’ ಸಿನಿಮಾದ ಫಸ್ಟ್ ಹಾಫ್ ವಿಮರ್ಶೆ ಇಲ್ಲಿದೆ..
- ರಾಜಕೀಯದ ಕಥಾಹಂದರ ಇರುವ ‘ದಿ ಡೆವಿಲ್’ ಸಿನಿಮಾ. ಮುಖ್ಯಮಂತ್ರಿ ಪಾತ್ರದಲ್ಲಿ ಮಹೇಶ್ ಮಂಜ್ರೇಕರ್. ದರ್ಶನ್ ಎಂಟ್ರಿ ಬಗ್ಗೆ ಕೌತುಕ.
- ದರ್ಶನ್ ಪಾತ್ರದ ಎಂಟ್ರಿಯೇ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡಿನ ಮೂಲಕ. ಈ ಮಾಸ್ ಹಾಡಿನ ಮೂಲಕ ಅಭಿಮಾನಿಗಳಿಗೆ ಮನರಂಜನೆ.
- ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ದರ್ಶನ್. ಒಬ್ಬ ಸಿಂಪಲ್ ಮ್ಯಾನ್. ಇನ್ನೊಬ್ಬ ಮನುಷ್ಯ ರೂಪದ ರಾಕ್ಷಸ. ದ್ವಿಪಾತ್ರದ ಕಾರಣದಿಂದ ಕಥೆಗೆ ಟ್ವಿಸ್ಟ್.
- ನೆಗೆಟಿವ್ ಶೇಡ್ ಪಾತ್ರದ ಆರಂಭದಲ್ಲೇ ಆ್ಯಕ್ಷನ್ ಆಬ್ಬರ ಇದೆ. ಇನ್ನೊಂದು ಪಾತ್ರದಲ್ಲಿ ಆ್ಯಕ್ಟರ್ ಆಗಿ ದರ್ಶನ್ ಅವರು ಕಾಣಿಸಿಕೊಂಡಿದ್ದಾರೆ.
- ಫಸ್ಟ್ ಹಾಫ್‌ನಲ್ಲಿ ನಟ ಅಚ್ಯುತ್ ಕುಮಾರ್ ಪಾತ್ರಕ್ಕೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಕಿಂಗ್ ಮೇಕರ್ ಆಗಿ ಆವರು ಕಾಣಿಸಿಕೊಂಡಿದ್ದಾರೆ.
- ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ ಅವರು ದಿ ಡೆವಿಲ್ ಸಿನಿಮಾದಲ್ಲಿ ಕಾಮಿಡಿ ಕಿಕ್ ನೀಡುತ್ತಾರೆ. ಹುಲಿ ಕಾರ್ತಿಕ್ ದರ್ಶನ್ ಜತೆ ಸೇರಿ ನಗಿಸುತ್ತಾರೆ.
- ಕೃಷ್ಣ – ರುಕ್ಮಿಣಿಯಾಗಿ ದರ್ಶನ್ ಮತ್ತು ರಚನಾ ರೈ ಅಭಿನಯಿಸಿದ್ದಾರೆ. ಪೊಲಿಟಿಕಲ್ ಕಹಾನಿ ನಡುವೆ ಲವ್ ಸ್ಟೋರಿ ಕೂಡ ಈ ಚಿತ್ರದಲ್ಲಿ ಇದೆ.
- ಇಂಟರ್‌ವಲ್ ವೇಳೆಗೆ ದೊಡ್ಡ ಟ್ವಿಸ್ಟ್ ಎದುರಾಗುತ್ತದೆ. ನೆಗೆಟಿವ್ ಮತ್ತು ಪಾಸಿಟಿವ್ ಪಾತ್ರಗಳ ಮುಖಾಮುಖಿ. ಮುಂದೇನು ಎಂಬ ಕೌತುಕ ನಿರ್ಮಾಣ.
- ಹೆಚ್ಚಿನ ಆ್ಯಕ್ಷನ್ ಬೇಕಾದರೆ ದ್ವಿತೀಯಾರ್ಧಕ್ಕೆ ಕಾಯಬೇಕು. ಪೊಲಿಟಿಕಲ್ ಕಹಾನಿ ಆದ್ದರಿಂದ ಮಾಸ್ ಜೊತೆಗೆ ಕ್ಲಾಸ್ ಆಗಿ ಮೂಡಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




