ನಟ ಧ್ರುವ ಸರ್ಜಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅದ್ದೂರಿ, ಬಹದ್ದೂರ್, ಭರ್ಜರಿ, ಪೊಗರು ಸಿನಿಮಾಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಇಂದು (ಅಕ್ಟೋಬರ್ 6) ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮ. ಧ್ರುವ ಹುಟ್ಟುಹಬ್ಬದ ಗಿಫ್ಟ್ ಆಗಿ ಮಾರ್ಟಿನ್ ಪೋಸ್ಟರ್ ರಿಲೀಸ್ ಆಗಿದೆ. ಐದು ಭಾಷೆಯಲ್ಲಿ ಮಾರ್ಟಿನ್ ಪೋಸ್ಟರ್ ರಿಲೀಸ್ ಮಾಡಿದ ಚಿತ್ರತಂಡ ಆ ಮೂಲಕ ವಿಶೇಷವಾಗಿ ನಟ ಧ್ರುವ ಸರ್ಜಾ ಅವರಿಗೆ ಶುಭ ಹಾರೈಸಿದೆ. ಇನ್ನು ಸೆಲೆಬ್ರಿಟಿಗಳು, ಅಭಿಮಾನಿಗಳು,ಸ್ನೇಹಿತರಿಂದ ಧ್ರುವ ಸರ್ಜಾ ಅವರಿಗೆ ಬರ್ತ್ಡೇ ವಿಶ್ ಹರಿದುಬರುತ್ತಿದೆ.
ಧ್ರುವ ಸರ್ಜಾ ಹುಟ್ಟುಹಬ್ಬದ ದಿನವನ್ನು ದೊಡ್ಡದಾಗಿ ಸೆಲೆಬ್ರೇಟ್ ಮಾಡಬೇಕು ಎಂಬ ಆಸೆ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಆದರೆ ಆ ಬಗ್ಗೆ ಧ್ರುವ ಸರ್ಜಾ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಾರಿ ಜನ್ಮದಿನ ಆಚರಿಸಿಕೊಳ್ಳದೇ ಇರಲು ಅವರು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಅವರು ತಮ್ಮ ತೀರ್ಮಾನ ಏನೆಂಬುದನ್ನು ಈಗಾಗಲೇ ತಿಳಿಸಿದ್ದಾರೆ.
ಅಣ್ಣ ಚಿರು ಅಗಲಿಕೆಯ ನೋವು ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆಗಿನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ನಟ ಧ್ರುವ ಸರ್ಜಾ ಬ್ರೇಕ್ ಹಾಕಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಈ ಬಗ್ಗೆ ಸಂದೇಶ ರವಾನಿಸಿದ್ದಾರೆ.
ಸಿಂಪಲ್ ಆಗಿ ಬರ್ತ್ ಡೇ ಸೆಲೆಬ್ರೆಶನ್ ಪ್ಲಾನ್ ಮಾಡಿರುವ ಧ್ರುವ ಸರ್ಜಾ, ಸದ್ಯ ಬೆಂಗಳೂರಿನಲ್ಲಿಲ್ಲ ವೈಜಾಗ್ನಲ್ಲಿ ಶೂಟಿಂಗ್ನಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಬರ್ತ್ ಡೇಗೆ ಆಗಮಿಸದಂತೆ ಮನವಿ ಮಾಡಿದ್ದಾರೆ. ಪ್ರತೀ ವರ್ಷ ಅಕ್ಟೋಬರ್ 6 ರಂದು ಧ್ರುವ ಮನೆ ಮುಂದೆ ಅಭಿಮಾನಿಗಳ ಜಾತ್ರೆ ನೆರವೇರುತ್ತಿತ್ತು. ಆದರೆ ಈ ಬಾರಿ ಅದಕ್ಕೆ ಅವಕಾಶ ಇಲ್ಲದಂತಾಗಿದೆ. ಅದ್ದೂರಿ ಸಿನಿಮಾ ಮೂಲಕ ಗಾಂಧೀನಗರಕ್ಕೆ ಎಂಟ್ರಿ ಕೊಟ್ಟಿದ್ದ ಧ್ರುವ ಇತ್ತೀಚೆಗೆ ಪೊಗರುನಲ್ಲಿ ಕಮಾಲ್ ಮಾಡಿದ್ದರು.
ಇದನ್ನೂ ಓದಿ:
Dhruva Sarja: ‘ನಾನೇನು ದೊಡ್ಡ ಸೆಲೆಬ್ರಿಟಿ ಅಲ್ಲ’: ಬರ್ತ್ಡೇ ಬಗ್ಗೆ ಮುಖ್ಯ ನಿರ್ಧಾರ ಪ್ರಕಟಿಸಿದ ಧ್ರುವ ಸರ್ಜಾ
ಓಟಿಟಿ ಮೇಲೆ ಹೆಚ್ಚಿತು ಸಿನಿ ಮಂದಿಯ ಪ್ರೀತಿ; ಬಹುನಿರೀಕ್ಷಿತ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್
Published On - 8:04 am, Wed, 6 October 21