‘ಫೈರ್‌ ಫ್ಲೈ’ ಚಿತ್ರದ ‘ಹುಷಾರು ಲೇ ಹುಷಾರು’ ಹಾಡು ಬಿಡುಗಡೆ ಮಾಡಿದ ಧ್ರುವ ಸರ್ಜಾ

‘ಫೈರ್‌ ಫ್ಲೈ’ ಸಿನಿಮಾ ತಂಡಕ್ಕೆ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರು ಸಾಥ್ ನೀಡಿದ್ದಾರೆ. ‘ಹುಷಾರು ಲೇ ಹುಷಾರು..’ ಎಂಬ ಹಾಡನ್ನು ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ವಂಶಿ, ರಚನಾ ಇಂದರ್ ನಟನೆಯ ಈ ಸಿನಿಮಾವನ್ನು ನಿವೇದಿತಾ ಶಿವರಾಜ್​ಕುಮಾರ್ ನಿರ್ಮಾಣ ಮಾಡಿದ್ದಾರೆ.

‘ಫೈರ್‌ ಫ್ಲೈ’ ಚಿತ್ರದ ‘ಹುಷಾರು ಲೇ ಹುಷಾರು’ ಹಾಡು ಬಿಡುಗಡೆ ಮಾಡಿದ ಧ್ರುವ ಸರ್ಜಾ
Dhruva Sarja, Vamshi

Updated on: Apr 21, 2025 | 9:02 PM

‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ (Niveditha Shivarajkumar) ಅವರು ನಿರ್ಮಾಪಕಿಯಾಗಿ ಆ್ಯಕ್ಟೀವ್ ಆಗಿದ್ದಾರೆ. ಅವರು ನಿರ್ಮಾಣ ಮಾಡಿರುವ ‘ಫೈರ್ ಫ್ಲೈ’ (Firefly) ಸಿನಿಮಾ ಈಗಾಗಲೇ ಕೌತುಕ ಮೂಡಿಸಿದೆ. ಈ ಚಿತ್ರ ಏಪ್ರಿಲ್ 24ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ರಿಲೀಸ್​ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಗಾಗಿ ಚಿತ್ರತಂಡ ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ‘ಫೈರ್ ಫ್ಲೈ’ ಚಿತ್ರದಿಂದ ಈಗ ಮತ್ತೊಂದು ಹೊಸ ಹಾಡು ಬಿಡುಗಡೆ ಆಗಿದೆ.

ವಿಶೇಷ ಎಂದರೆ, ‘ಹುಷಾರು ಲೇ ಹುಷಾರು..’ ಎಂಬ ಈ ಹಾಡನ್ನು ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರು ಬಿಡುಗಡೆ ಮಾಡಿದ್ದಾರೆ. ಸಾಂಗ್ ರಿಲೀಸ್ ಮಾಡಿದ ಬಳಿಕ ಅವರು ಚಿತ್ರತಂಡ ಶುಭ ಹಾರೈಸಿದ್ದಾರೆ. ಸಿನಿಮಾದ ಕಥಾನಾಯಕ ವಿಕ್ಕಿಯನ್ನು ಗುಣಗಾನ ಮಾಡುವ ಸಾಂಗ್ ಇದಾಗಿದೆ. ‘ಆನಂದ್ ಆಡಿಯೋ’ ಮೂಲಕ ಈ ಹಾಡು ಬಿಡುಗಡೆ ಆಗಿದೆ.

‘ಹುಷಾರು ಲೇ ಹುಷಾರು..’ ಗೀತೆಯಲ್ಲಿ ಡಾ. ರಾಜ್​ಕುಮಾರ್ ನಟನೆಯ ಸಿನಿಮಾಗಳ ಸಂಭಾಷಣೆಗಳನ್ನು ಬಳಸಿರುವುದು ವಿಶೇಷ. ಧನಂಜಯ್‌ ರಂಜನ್‌ ಅವರು ಈ ಹಾಡನ್ನು ಬರೆದಿದ್ದಾರೆ. ದೀಪಕ್ ಬ್ಲೂ ಹಾಗೂ ಕಾರ್ತಿಕ್ ಚೆನ್ನೋಜಿ ರಾವ್ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಚರಣ್‌ ರಾಜ್‌ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

‘ಫೈರ್ ಫ್ಲೈ’ ಸಿನಿಮಾದ ಪಾತ್ರವರ್ಗದಲ್ಲಿ ಪ್ರತಿಭಾವಂತ ಕಲಾವಿದರು ಇದ್ದಾರೆ. ವಂಶಿ ಅವರು ಹೀರೋ ಆಗಿ ನಟಿಸಿದ್ದಾರೆ. ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ನಿರ್ದೇಶನದಲ್ಲಿ ಇದು ಅವರ ಮೊದಲ ಸಿನಿಮಾ. ವಂಶಿ ಜೊತೆ ರಚನಾ ಇಂದರ್, ಸುಧಾರಾಣಿ, ಅಚ್ಯುತ್ ಕುಮಾರ್, ಶೀತಲ್ ಶೆಟ್ಟಿ‌, ಮೂಗು ಸುರೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಏಪ್ರಿಲ್ 24ರಂದು ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ಕಾಡುವ ಕಥೆ ಇದೆ ಎಂದು ಚಿತ್ರತಂಡ ಹೇಳಿದೆ.

ಪುತ್ರಿ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಕೂಡ ಅಭಿನಯಿಸಿದ್ದಾರೆ ಎಂಬುದು ಇನ್ನೊಂದು ವಿಶೇಷ. ಶಿವಣ್ಣ ಅವರು ಈ ಸಿನಿಮಾದಲ್ಲಿ ‘ದಿ ಕಿಂಗ್ಸ್ ಪಿಜ್ಜಾ ಬಾಯ್’ ಪಾತ್ರವನ್ನು ಮಾಡಿದ್ದಾರೆ. ಅವರ ಗೆಟಪ್ ಗಮನ ಸೆಳೆದಿದೆ. ಅಭಿಲಾಷ್ ಕಳತ್ತಿ ಅವರು ಛಾಯಾಗ್ರಹಣ ಮಾಡಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: ಅಪ್ಪನಿಂದ ಬಹಳ ಕಲಿತಿದ್ದೇನೆ ಎನ್ನುತ್ತಾರೆ ‘ಫೈರ್ ಫ್ಲೈ’ ಚಿತ್ರದ ನಿರ್ಮಾಪಕಿ ನಿವೇದಿತಾ ಶಿವರಾಜ್​ಕುಮಾರ್

ಸುರೇಶ್ ಆರ್ಮುಗಮ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ವರದರಾಜ್ ಕಾಮತ್ ಅವರ ಕಲಾ ನಿರ್ದೇಶನ, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ, ರಾಹುಲ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಈ ಸಿನಿಮಾಗಿದೆ. ಜಯರಾಮ್ ಶ್ರೀನಿವಾಸ್ ಮತ್ತು ಹ್ಯಾಪಿ ಹನುಮಂತ್ ಅವರು ಸಹ-ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.