AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ: ಚಾಪ್ಟರ್ 1’ ಜೊತೆ ಕೈಜೋಡಿಸಿದ ಖ್ಯಾತ ಗಾಯಕ

Kantara Chapter 1: ಹೊಂಬಾಳೆ ನಿರ್ಮಿಸಿ ರಿಷ್ ಶೆಟ್ಟಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಆರಂಭ ಆಗಿದೆ. ಇದೀಗ ಭಾರತದ ಸ್ಟಾರ್ ಸಿಂಗರ್ ಒಬ್ಬರು ‘ಕಾಂತಾರ: ಚಾಪ್ಟರ್ 1’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಯಾರು ಆ ಖ್ಯಾತ ಗಾಯಕ?

‘ಕಾಂತಾರ: ಚಾಪ್ಟರ್ 1’ ಜೊತೆ ಕೈಜೋಡಿಸಿದ ಖ್ಯಾತ ಗಾಯಕ
Kantara Chapter 1
ಮಂಜುನಾಥ ಸಿ.
|

Updated on: Sep 11, 2025 | 5:44 PM

Share

‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ನಿಧಾನವಾಗಿ ಪ್ರಾರಂಭ ಮಾಡುತ್ತಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಸಂಬಂಧಿಸಿದಂತೆ ಯಾವುದೇ ಅಪ್​​ಡೇಟ್​​ಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಆದರೆ ಇದೀಗ ಒಂದೊಂದಾಗಿ ಅಪ್​​​ಡೇಟ್​​ಗಳು ಹೊರಗೆ ಬರುತ್ತಿವೆ. ಇತ್ತೀಚೆಗಷ್ಟೆ ಸಿನಿಮಾದ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿರುವ ವಿಷಯವನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದೀಗ ಭಾರತದ ಖ್ಯಾತ ನಟ ಮತ್ತು ಗಾಯಕರಾಗಿರುವ ಗುರುತಿಸಿಕೊಂಡಿರುವ ಅಂತರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಯೊಬ್ಬರು ಸಿನಿಮಾಕ್ಕಾಗಿ ಹಾಡು ಹಾಡಿರುವ ವಿಷಯ ಹೊರ ಬಿದ್ದಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ಹಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿರುವುದು ಗೊತ್ತೇ ಇದೆ. ಇದೀಗ ಭಾರತದ ಖ್ಯಾತ ಕಲಾವಿದ ವಿದೇಶಗಳಲ್ಲಿಯೂ ಬಹಳ ಹೆಸರು ಮಾಡಿರುವ ದಿಲ್ಜೀತ್ ದೊಸ್ಸಾಂಜ್ ಅವರು ‘ಕಾಂತಾರ’ ಸಿನಿಮಾಕ್ಕಾಗಿ ಹಾಡು ಹಾಡಲಿದ್ದಾರೆ. ದಿಲ್ಜೀತ್ ದುಸ್ಸಾಂಜ್, ಖ್ಯಾತ ನಟರಾಗಿರುವ ಜೊತೆಗೆ ಅದ್ಭುತವಾದ ಹಾಡುಗಾರರು ಸಹ. ಅವರ ಲೈವ್ ಕಾನ್ಸರ್ಟ್​​ಗಳಿಗೆ ಲಕ್ಷಗಳ ಸಂಖ್ಯೆಯಲ್ಲಿ ಜನ ಬರುತ್ತಾರೆ. ಅವರ ಶೋನ ಟಿಕೆಟ್​​ಗಳು ಬಿಸಿ ದೋಸೆಯಂತೆ ಮಾರಾಟ ಆಗುತ್ತವೆ. ಭಾರತದ ನಂಬರ್ 1 ಲೈವ್ ಕಾನ್ಸರ್ಟ್ ಗಾಯಕ ಎನಿಸಿಕೊಂಡಿದ್ದಾರೆ ದಿಲ್ಜೀತ್ ದೊಸ್ಸಾಂಜ್.

ಇದೀಗ ಇವರು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕಾಗಿ ವಿಶೇಷವಾದ ಹಾಡೊಂದನ್ನು ಹಾಡಲಿದ್ದಾರೆ. ದಿಲ್ಜೀತ್ ದೊಸ್ಸಾಂಜ್ ತಮ್ಮ ಹಾಡುಗಳ ಮೂಲಕ ಪಂಜಾಬಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸಹ ಕರಾವಳಿ ಸಂಸ್ಕೃತಿಯನ್ನು ಎತ್ತಿ ತೋರಿಸುವ ಸಿನಿಮಾ ಆಗಿದ್ದು ಇದೇ ಕಾರಣಕ್ಕೆ ದಿಲ್ಜೀತ್ ದೊಸ್ಸಾಂಜ್, ‘ಕಾಂತಾರ 1’ಗಾಗಿ ಹಾಡು ಹಾಡುತ್ತಿರುವುದು ಬಹಳ ವಿಶೇಷ ಎನಿಸಿಕೊಳ್ಳುತ್ತಿದೆ.

ಇದನ್ನೂ ಓದಿ:ಕಾಂತಾರ ಸುಂದರಿ ರುಕ್ಮಿಣಿ ವಸಂತ್ ನಗುವಿಗೆ ಮನಸೋತ ಫ್ಯಾನ್ಸ್

ನಾಳೆ ಅಂದರೆ ಸೆಪ್ಟೆಂಬರ್ 12 ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕಾಗಿ ದಿಲ್ಜೀತ್ ದುಸ್ಸಾಂಜ್ ಹಾಡು ಹಾಡಲಿದ್ದು, ಹಾಡನ್ನು ಮುಂಬೈನ ವೈಆರ್​​ಎಫ್ ಸ್ಟುಡಿಯೋನಲ್ಲಿ ರೆಕಾರ್ಡ್ ಮಾಡಲಾಗುತ್ತಿದೆ. ಹಾಡು ರೆಕಾರ್ಡ್ ಮಾಡುವ ವೇಳೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಜೊತೆಗೆ ನಿರ್ದೇಶಕ ರಿಷಬ್ ಶೆಟ್ಟಿ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ.

‘ಕಾಂತಾರ: ಚಾಪ್ಟರ್ 1’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಇದೀಗ ದಿಲ್ಜೀತ್ ದೊಸ್ಸಾಂಜ್ ಹಿಂದಿ ಹಾಡು ಮಾತ್ರವೇ ಹಾಡಲಿದ್ದಾರೆಯೇ ಅಥವಾ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿಯೂ ಹಾಡು ಹಾಡಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ. ದಿಲ್ಜೀತ್ ದೊಸ್ಸಾಂಜ್ ಭಾರಿ ಜನಪ್ರಿಯ ಗಾಯಕರಾಗಿದ್ದು, ಅವರಿಂದ ಹಾಡು ಹಾಡಿಸುವುದು ಮತ್ತು ಅದರ ವಿಡಿಯೋ ಮಾಡಿ ಪ್ರಚಾರಕ್ಕೆ ಬಳಸುವ ಟ್ರೆಂಡ್ ಬಾಲಿವುಡ್​​ನಲ್ಲಿದೆ. ‘ಕಾಂತಾರ’ ಚಿತ್ರತಂಡವೂ ಸಹ ದಿಲ್ಜೀತ್ ಅವರ ವಿಡಿಯೋ ಮಾಡಿ ಅದನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದ್ದು, ಸಿನಿಮಾದ ವಿತರಣೆ ಹಕ್ಕು ಮಾರಾಟ ಚಾಲ್ತಿಯಲ್ಲಿದೆ. ಕೇರಳ ಮತ್ತು ಆಂಧ್ರ ಪ್ರದೇಶಗಳಲ್ಲಿ ಈಗಾಗಲೇ ವಿತರಕರನ್ನು ಹೊಂಬಾಳೆ ಫಿಲಮ್ಸ್ ಅಂತಿಮಗೊಳಿಸಿದೆ. ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ದುಬೈ, ಅಮೆರಿಕ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಇನ್ನೂ ಕೆಲ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ