AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ronny Movie: ‘ಕಿರಣ್​ ರಾಜ್​ ಅವರ ಆ್ಯಕ್ಷನ್​ ಝಲಕ್​ ತೋರಿಸಲಿದೆ ರಾನಿ ಟೀಸರ್​’: ಕೌತುಕ ಮೂಡಿಸಿದ ನಿರ್ದೇಶಕ ಗುರುತೇಜ್​ ಶೆಟ್ಟಿ

Kiran Raj New Movie: ‘ರಾನಿ’ ಸಿನಿಮಾದ ಟೀಸರ್​ಗಾಗಿ ಕಿರಣ್​ ರಾಜ್​ ಅವರ ಅಭಿಮಾನಿಗಳು ಕಾದಿದ್ದಾರೆ. ಈ ಚಿತ್ರದ ನಿರ್ದೇಶಕ ಗುರುತೇಜ್​ ಶೆಟ್ಟಿ ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

Ronny Movie: ‘ಕಿರಣ್​ ರಾಜ್​ ಅವರ ಆ್ಯಕ್ಷನ್​ ಝಲಕ್​ ತೋರಿಸಲಿದೆ ರಾನಿ ಟೀಸರ್​’: ಕೌತುಕ ಮೂಡಿಸಿದ ನಿರ್ದೇಶಕ ಗುರುತೇಜ್​ ಶೆಟ್ಟಿ
ಕಿರಣ್​ ರಾಜ್​
ಮದನ್​ ಕುಮಾರ್​
|

Updated on: Jun 29, 2023 | 4:25 PM

Share

ಖ್ಯಾತ ನಟ ಕಿರಣ್​ ರಾಜ್​ (Kiran Raj) ಅವರು ಕಿರುತೆರೆ ಸೀರಿಯಲ್​ಗಳ ಮೂಲಕ ಫೇಮಸ್​. ಆದರೆ ಈಗ ಅವರು ಸಂಪೂರ್ಣವಾಗಿ ಸಿನಿಮಾಗಳ ಕಡೆಗೆ ತಮ್ಮ ಗಮನ ಹರಿಸಿದ್ದಾರೆ. ಈ ಹಿಂದೆ ‘ಬಡ್ಡೀಸ್​’ ಸಿನಿಮಾದಲ್ಲಿ ನಟಿಸಿದ್ದ ಅವರು ಈಗ ಅದೇ ತಂಡದ ಜೊತೆ ಸೇರಿಕೊಂಡು ‘ರಾನಿ’ ಸಿನಿಮಾ (Ronny Movie) ಮಾಡಿದ್ದಾರೆ. ಟೈಟಲ್​ ಲಾಂಚ್​ ಮೂಲಕ ಈ ಸಿನಿಮಾ ಸಖತ್​ ಸುದ್ದಿಯಾಗಿತ್ತು. ಕಿರಣ್​ ರಾಜ್​ ಅವರ ಜನ್ಮದಿನದ ಪ್ರಯುಕ್ತ (ಜುಲೈ 5) ಟೀಸರ್​ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಚಿತ್ರಕ್ಕೆ ಗುರುತೇಜ್​ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ‘ರಾನಿ’ ಚಿತ್ರದ ಟೀಸರ್ (Ronny Movie Teaser)​ ಹೇಗಿರಲಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಆ ಮೂಲಕ ಕೌತುಕ ಮೂಡಿಸಿದ್ದಾರೆ.

ಸೀರಿಯಲ್​ನಲ್ಲಿ ಲವರ್​ ಬಾಯ್​ ರೀತಿ ಕಾಣಿಸಿಕೊಂಡಿದ್ದ ಕಿರಣ್​ ರಾಜ್​ ಅವರಿಗೆ ‘ರಾನಿ’ ಸಿನಿಮಾದಲ್ಲಿ ಪಕ್ಕ ಮಾಸ್​ ಲುಕ್​ ನೀಡಲಾಗಿದೆ. ಅದರ ಹಿಂದಿನ ಕಾರಣವನ್ನು ತಿಳಿಸಿದ್ದಾರೆ ನಿರ್ದೇಶಕ ಗುರುತೇಜ್​ ಶೆಟ್ಟಿ. ‘ಈ ಹಿಂದೆ ನಾವು ಬಡ್ಡೀಸ್​ ಸಿನಿಮಾ ಮಾಡುವಾಗ ಕಿರಣ್​ ರಾಜ್​ ಅವರ ಬಗ್ಗೆ ನನಗೆ ಚೆನ್ನಾಗಿ ತಿಳಿಯಿತು. ಅವರೊಳಗೆ ಒಬ್ಬ ಮಾಸ್​ ಹೀರೋ ಇದ್ದಾನೆ ಎಂಬುದು ಅರ್ಥವಾಯಿತು. ಹಾಗಾಗಿ ರಾನಿ ಸಿನಿಮಾದಲ್ಲಿ ಅವರಿಗೆ ಮಾಸ್​ ಆದಂತಹ ಪಾತ್ರ ನೀಡಲಾಯಿತು. ಕೆಲಸದ ಬಗ್ಗೆ ಕಿರಣ್​ ರಾಜ್​ ಅವರಿಗೆ ಶ್ರದ್ಧೆ ಇದೆ. ಆ್ಯಕ್ಷನ್​ ಸನ್ನಿವೇಶಗಳನ್ನು ತುಂಬ ಬದ್ಧತೆಯಿಂದ ಮಾಡಿದ್ದಾರೆ. ಅದರ ಝಲಕ್​ ಈ ಟೀಸರ್​ನಲ್ಲಿ ಕಾಣಿಸುತ್ತದೆ’ ಎಂದು ಗುರುತೇಜ್​ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಗೆ ‘ಕನ್ನಡತಿ’ ಸೀರಿಯಲ್​ ನಟ ಕಿರಣ್​ ರಾಜ್​ ನೆರವಿನ ಹಸ್ತದಿಂದ ಬಂತು ಹೊಸ ಮೆರುಗು

‘ಟೀಸರ್​ನಲ್ಲಿ ಕಥೆಯ ಒಂದು ಸಣ್ಣ ಎಳೆ ಇರಲಿದೆ. ಸಾಹಸ ಸನ್ನಿವೇಶಗಳ ಝಲಕ್​ ಕಾಣಿಸಲಿದೆ. ಸಿನಿಮಾದ ಅದ್ದೂರಿತನ ಮತ್ತು ಗುಣಮಟ್ಟ ಯಾವ ರೀತಿ ಇದೆ ಎಂಬುದು ಕೂಡ ಇದರಲ್ಲಿ ಗೊತ್ತಾಗಲಿದೆ. ಈ ಸಿನಿಮಾದಲ್ಲಿ ಒಟ್ಟು 6 ಫೈಟಿಂಗ್​ ದೃಶ್ಯಗಳು ಇವೆ. ಯಾವುದರಲ್ಲೂ ಕಿರಣ್​ ರಾಜ್ ಅವರು ಡ್ಯೂಪ್​ ಬಳಸಿಲ್ಲ. ಸ್ವತಃ ಅವರೇ ಫೈಟ್​ ಮಾಡಿದ್ದಾರೆ. ಈ ಚಿತ್ರದ ತಯಾರಿಗಾಗಿ ಅವರು ಒಂದು ವರ್ಷ ಸಂಪೂರ್ಣ ಮೀಸಲಿಟ್ಟಿದ್ದರು. ರಾನಿ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಕಿರಣ್​ ರಾಜ್​ ಅವರು ಓರ್ವ ಮಾಸ್​ ಹೀರೋ ಆಗಿ ಗುರುತಿಸಿಕೊಳ್ಳುತ್ತಾರೆ’ ಎಂಬುದು ನಿರ್ದೇಶಕರ ಮಾತುಗಳು.

ಇದನ್ನೂ ಓದಿ: Kiran Raj: ‘ಕನ್ನಡತಿ’ ಸೀರಿಯಲ್​ ನಟ ಕಿರಣ್​ ರಾಜ್​ ಈಗ ‘ಶೇರ್​’; ಸೆಟ್ಟೇರಿತು ಹೊಸ ಸಿನಿಮಾ

‘ರಾನಿ’ ಚಿತ್ರಕ್ಕೆ 75 ದಿನಗಳ ಕಾಲ ಶೂಟಿಂಗ್​ ಮಾಡಲಾಗಿದೆ. ಇನ್ನು 10 ದಿನಗಳ ಚಿತ್ರೀಕರಣ ಬಾಕಿ ಇದೆ. ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಸಾಗುತ್ತಿವೆ. ಈ ವರ್ಷ ಡಿಸೆಂಬರ್​ ಅಥವಾ ಮುಂಬರುವ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯ ನಿರತವಾಗಿದೆ. ಪೋಸ್ಟರ್​ಗಳ ಮೂಲಕ ಈ ಸಿನಿಮಾ ಹೈಪ್​ ಹೆಚ್ಚಿಸಿದೆ. ಸಮೀಕ್ಷಾ, ಅಪೂರ್ವಾ, ರಾಧ್ಯಾ ಉಗ್ರಂ ರವಿ, ಮೈಕೋ ನಾಗರಾಜ್, ರವಿಶಂಕರ್, ಉಗ್ರಂ ಮಂಜು, ಬಿ. ಸುರೇಶ, ಮಂಡ್ಯ ರಮೇಶ್, ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಧರ್ಮಣ್ಣ ಕಡೂರು ಮುಂತಾದವರು ‘ರಾನಿ’ ಚಿತ್ರದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?