Rachita Ram: ರಚಿತಾ ರಾಮ್​ ಬರ್ತ್​ಡೇ ಸಂಭ್ರಮ; ‘ಡಿಂಪಲ್​ ಕ್ವೀನ್​’ ಮನೆ ಮುಂದೆ ಜಮಾಯಿಸಿದ ಫ್ಯಾನ್ಸ್​

Rachita Ram Birthday: ಕನ್ನಡ ಚಿತ್ರರಂಗದಲ್ಲಿ ರಚಿತಾ ರಾಮ್​ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಭರ್ಜರಿಯಾಗಿ ಆಚರಿಸುತ್ತಿದ್ದಾರೆ.

Rachita Ram: ರಚಿತಾ ರಾಮ್​ ಬರ್ತ್​ಡೇ ಸಂಭ್ರಮ; ‘ಡಿಂಪಲ್​ ಕ್ವೀನ್​’ ಮನೆ ಮುಂದೆ ಜಮಾಯಿಸಿದ ಫ್ಯಾನ್ಸ್​
Follow us
TV9 Web
| Updated By: ಮದನ್​ ಕುಮಾರ್​

Updated on:Oct 03, 2022 | 7:30 AM

ನಟಿ ರಚಿತಾ ರಾಮ್ (Rachita Ram) ಅವರಿಗೆ ಇಂದು (ಅ.3) ಹುಟ್ಟುಹಬ್ಬದ ಸಡಗರ. ಅವರ ಜನ್ಮದಿನಕ್ಕೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ವಿಶ್​ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಚಿತಾ ರಾಮ್​ ಅವರ ಮನೆ ಇದೆ. ನೆಚ್ಚಿನ ನಟಿಗೆ ಶುಭ ಕೋರಲು ಹಲವಾರು ಅಭಿಮಾನಿಗಳು ರಚಿತಾ ಮನೆ ಮುಂದೆ ಜಮಾಯಿಸಿದ್ದಾರೆ. ಬಗೆಬಗೆಯ ಕೇಕ್​, ಹಾರ, ಉಡುಗೊರೆಗಳನ್ನು ತಂದು ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು, ಅನೇಕ ಚಿತ್ರತಂಡಗಳು ಸಹ ‘ಡಿಂಪಲ್​ ಕ್ವೀನ್’ ಹುಟ್ಟುಹಬ್ಬಕ್ಕೆ (Rachita Ram Birthday) ಪೋಸ್ಟರ್​ಗಳನ್ನು ರಿಲೀಸ್​ ಮಾಡುತ್ತಿವೆ.

ಕನ್ನಡ ಚಿತ್ರರಂಗದಲ್ಲಿ ರಚಿತಾ ರಾಮ್​ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಅವರು ಭರ್ಜರಿಯಾಗಿ ಮಿಂಚಿದರು. ಸುದೀಪ್​, ಶಿವರಾಜ್​ಕುಮಾರ್​, ಪುನೀತ್ ರಾಜ್​ಕುಮಾರ್​, ಧ್ರುವ ಸರ್ಜಾ, ದುನಿಯಾ ವಿಜಯ್​, ಉಪೇಂದ್ರ ಮುಂತಾದ ಸ್ಟಾರ್​ ನಟರ ಜೊತೆ ಅಭಿನಯಿಸಿ ಫೇಮಸ್​ ಆದರು. ಈಗಲೂ ರಚಿತಾ ರಾಮ್​ ಕೈಯಲ್ಲಿ ಹಲವು ಆಫರ್​ಗಳಿವೆ.

ಇದನ್ನೂ ಓದಿ
Image
Rachita Ram: ‘ರಚಿತಾ ಎದೆಯಲ್ಲಿ ಮೋಸ ಇಲ್ಲ, ಅದಕ್ಕೆ ಇಷ್ಟು ವರ್ಷ ಇಂಡಸ್ಟ್ರಿಯಲ್ಲಿ ಇದ್ದಾರೆ’: ದುನಿಯಾ ವಿಜಯ್​
Image
‘ಪ್ರೀತಿ ತೋರಿಸೋ ನಮಗೆ ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡ್ದಾಗ ಬೇಜಾರಾಗತ್ತೆ’: ರಚಿತಾ ರಾಮ್​
Image
ಮತ್ತೆ ಬೋಲ್ಡ್​ ಅವತಾರ ತಾಳಿದ ರಚಿತಾ ರಾಮ್​; ಪಡ್ಡೆ ಹುಡುಗರ ಮನಸ್ಸು ಕದ್ದ ರಚ್ಚು
Image
ಅಭಿಷೇಕ್​ ಅಂಬರೀಷ್​​ ಮತ್ತು ರಚಿತಾ ರಾಮ್ ಜನ್ಮದಿನ; ಕಾಮನ್​ ಡಿಪಿ ರಿಲೀಸ್​ ಮಾಡಿದ ಸುಮಲತಾ

ರಚಿತಾ ರಾಮ್​ ಅವರು ಸ್ಯಾಂಡಲ್​ವುಡ್​ಗೆ ಬಂದು 9 ವರ್ಷ ಕಳೆದಿದೆ. ಇಂದಿಗೂ ಅವರ ಚಾರ್ಮ್​ ಕಮ್ಮಿ ಆಗಿಲ್ಲ. ಒಂದೇ ಬಗೆಯ ಪಾತ್ರಗಳಿಗೆ ‘ಡಿಂಪಲ್ ಕ್ವೀನ್​’ ಗಂಟುಬಿದ್ದಿಲ್ಲ. ಎಲ್ಲ ಬಗೆಯ ಪಾತ್ರಗಳಿಗೂ ಅವರು ತಮ್ಮನ್ನು ತಾವು ತೆರೆದುಕೊಂಡರು. ಇತ್ತೀಚೆಗೆ ತೆರೆಕಂಡ ‘ಮಾನ್ಸೂನ್​ ರಾಗ’ ಚಿತ್ರದಲ್ಲಿ ವೇಶ್ಯೆ ಪಾತ್ರ ಮಾಡಿ ಗಮನ ಸೆಳೆದರು.

ಹೊಸ ಹೀರೋ – ಸ್ಟಾರ್​ ಹೀರೋ ಎಂಬ ಯಾವುದೇ ಭೇದವಿಲ್ಲದೇ ಎಲ್ಲರ ಜೊತೆಗೂ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪರಭಾಷೆಗೂ ರಚಿತಾ ಕಾಲಿಟ್ಟಿದ್ದಾರೆ. ಟಾಲಿವುಡ್​ನಲ್ಲಿ ಅವರಿಗೆ ಬೇಡಿಕೆ ಇದೆ. ಕಿರುತೆರೆ ಕಾರ್ಯಕ್ರಮಗಳಿಗೆ ಜಡ್ಜ್​ ಆಗಿಯೂ ರಚಿತಾ ರಾಮ್​ ಕೆಲಸ ಮಾಡಿದ್ದಾರೆ. ‘ಮಜಾಭಾರತ’, ‘ಡ್ರಾಮಾ ಜ್ಯೂನಿಯರ್ಸ್​’ ಶೋಗಳಿಗೆ ಜಡ್ಜ್ ಆಗುವ ಮೂಲಕ ಆ ಕಾರ್ಯಕ್ರಮಗಳ ಮೆರುಗು ಹೆಚ್ಚಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Mon, 3 October 22