ಜನಾರ್ದನ ರೆಡ್ಡಿ ಮಗ ಕಿರೀಟಿ ಬರ್ತ್​​ಡೇ ದಿನವೇ ಅನಾವರಣ ಆಗಲಿದೆ ಚೊಚ್ಚಲ ಸಿನಿಮಾದ ಟೈಟಲ್

‘ವಾರಾಹಿ ಫಿಲ್ಮ್​ ಪ್ರೊಡಕ್ಷನ್’ ಸಂಸ್ಥೆ ಕಿರೀಟಿಯನ್ನು ಲಾಂಚ್ ಮಾಡುತ್ತಿದೆ. ರಾಧಾ ಕೃಷ್ಣ ನಿರ್ದೇಶನದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಜನಾರ್ದನ ರೆಡ್ಡಿ ಮಗ ಕಿರೀಟಿ ಬರ್ತ್​​ಡೇ ದಿನವೇ ಅನಾವರಣ ಆಗಲಿದೆ ಚೊಚ್ಚಲ ಸಿನಿಮಾದ ಟೈಟಲ್
ಕಿರೀಟಿ
TV9kannada Web Team

| Edited By: Rajesh Duggumane

Sep 27, 2022 | 9:44 PM

ಮಾಜಿ ಸಚಿವ ಜನಾರ್ದನ ​ರೆಡ್ಡಿ (Janardhan Reddy) ಮಗ ಕಿರೀಟಿ ರೆಡ್ಡಿ (Kireeti Reddy) ಚಿತ್ರರಂಗಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಈ ವರ್ಷ ಮಾರ್ಚ್​ 4ರಂದು ಅದ್ದೂರಿ ಕಾರ್ಯಕ್ರಮದ ಮೂಲಕ ಸಿನಿಮಾದ ಮುಹೂರ್ತ ನೆರವೇರಿಸಲಾಗಿತ್ತು. ಆದರೆ, ಸಿನಿಮಾಗೆ ಟೈಟಲ್ ಅನಾವರಣ ಆಗಿರಲಿಲ್ಲ. ಈಗ ಚಿತ್ರದ ಟೈಟಲ್ ಅನಾವರಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 29ರಂದು ಚಿತ್ರದ ಶೀರ್ಷಿಕೆ ರಿವೀಲ್ ಆಗಲಿದೆ. ಈ ಚಿತ್ರಕ್ಕೆ ಯಾವ ರೀತಿಯ ಟೈಟಲ್ ಇಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

‘ವಾರಾಹಿ ಫಿಲ್ಮ್​ ಪ್ರೊಡಕ್ಷನ್’ ಸಂಸ್ಥೆ ಕಿರೀಟಿಯನ್ನು ಲಾಂಚ್ ಮಾಡುತ್ತಿದೆ. ರಾಧಾ ಕೃಷ್ಣ ನಿರ್ದೇಶನದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮೊದಲು ಅವರನ್ನು ಪರಿಚಯಿಸಲು ವಿಡಿಯೋ ಒಂದನ್ನು ರಿಲೀಸ್ ಮಾಡಲಾಗಿತ್ತು. ವಿಡಿಯೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು.

ಕಿರೀಟಿ ನಟಿಸುತ್ತಿರುವ ಚೊಚ್ಚಲ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆದರೆ, ಇಲ್ಲಿವರೆಗೂ ಸಿನಿಮಾದ ಟೈಟಲ್ ಅನಾವರಣ ಆಗಿರಲಿಲ್ಲ. ಸೆಪ್ಟೆಂಬರ್ 29 ಕಿರೀಟಿ ಬರ್ತ್​​ಡೇ. ಈ ಹಿನ್ನೆಲೆಯಲ್ಲಿ ಸಿನಿಮಾದ ಟೈಟಲ್ ಲಾಂಚ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಸಂಜೆ 6.39ಕ್ಕೆ ಟೈಟಲ್ ಲಾಂಚ್ ಆಗಲಿದೆ.

ವಾರಾಹಿ ಸಂಸ್ಥೆಯ 15ನೇ ಸಿನಿಮಾ ಇದಾಗಿದೆ. ‘ಈಗ’ ಸಿನಿಮಾ ನಿರ್ಮಾಣ ಮಾಡಿದ್ದ ಸಾಯಿ ಕೋರ್ರಾಪಾಟಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್, ಜೆನಿಲಿಯಾ, ಶ್ರೀಲೀಲಾ ಸೇರಿ ಅನೇಕರು ನಟಿಸುತ್ತಿದ್ದಾರೆ. ಚಿತ್ರದ ತಾಂತ್ರಿಕ ವರ್ಗ ಕೂಡ ಶ್ರೀಮಂತವಾಗಿದೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಲಿದ್ದಾರೆ. ‘ಬಾಹುಬಲಿ’ ಸಿನಿಮಾ ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ. ಆರ್ಟ್ ಡೈರೆಕ್ಟರ್ ಆಗಿ ರವೀಂದರ್, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.ಈ ಚಿತ್ರ ಅದ್ದೂರಿಯಾಗಿ ಮೂಡಿ ಬರುತ್ತಿದೆ.

ಇದನ್ನೂ ಓದಿ: ಜನಾರ್ದನ​ ರೆಡ್ಡಿ ಪುತ್ರ ಕಿರೀಟಿ ಸಿನಿಮಾ ಶೂಟಿಂಗ್​ ಸೆಟ್​ಗೆ ಭೇಟಿ ನೀಡಿದ ಶಿವಣ್ಣ; ಇಲ್ಲಿದೆ ವಿಡಿಯೋ

ಇದನ್ನೂ ಓದಿ

ಚಿಕ್ಕ ವಯಸ್ಸಿನಲ್ಲೇ ಕಿರೀಟಿ ರೆಡ್ಡಿಗೆ ಸಿನಿಮಾರಂಗದ ಮೇಲೆ ಆಸಕ್ತಿ ಬೆಳೆದಿತ್ತು. ‘ಜಾಕಿ’ ಚಿತ್ರ ತೆರೆಕಂಡಾಗ ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಸಿನಿಮಾ ನೋಡುವ ಅವಕಾಶ ಕಿರೀಟಿಗೆ ಲಭ್ಯವಾಗಿತ್ತು. ಪುನೀತ್ ಕೂಡ ಆಗ ಕಿರೀಟಿಗೆ ಸಾಕಷ್ಟು ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದರು. ಈಗ ಅವರು ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada