AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dileep Raj: ‘ಮಹಾನ್ ಕಲಾವಿದ’ನಾದ ದಿಲೀಪ್ ರಾಜ್; ಇದು ‘ಹಿಟ್ಲರ್​ ಕಲ್ಯಾಣ’ ನಾಯಕನ ಹೊಸ ಸಿನಿಮಾ

Mahan Kalavida: ದಿಲೀಪ್ ರಾಜ್​ ನಟನೆಯ ಈ ಚಿತ್ರಕ್ಕೆ ಮೊದಲಿಗೆ ‘ಕಲಾವಿದ’ ಅಂತ ಹೆಸರಿಡಲಾಗಿತ್ತು. ರವಿಚಂದ್ರನ್​ ಅವರಿಂದ ಸಲಹೆ ಪಡೆದ ಬಳಿಕ ‘ಮಹಾನ್​ ಕಲಾವಿದ’ ಎಂದು ಬದಲಾಯಿಸಲಾಯಿತು.

Dileep Raj: ‘ಮಹಾನ್ ಕಲಾವಿದ’ನಾದ ದಿಲೀಪ್ ರಾಜ್; ಇದು ‘ಹಿಟ್ಲರ್​ ಕಲ್ಯಾಣ’ ನಾಯಕನ ಹೊಸ ಸಿನಿಮಾ
ಜಾಹ್ನವಿ, ದಿಲೀಪ್​ ರಾಜ್​, ಪಲ್ಲವಿ
TV9 Web
| Updated By: ಮದನ್​ ಕುಮಾರ್​|

Updated on:Sep 17, 2022 | 8:39 PM

Share

ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ದಿಲೀಪ್​ ರಾಜ್​ (Dileep Raj) ಫೇಮಸ್​. ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಪ್ರಸ್ತುತ ಪ್ರಸಾರ ಆಗುತ್ತಿರುವ ‘ಹಿಟ್ಲರ್​ ಕಲ್ಯಾಣ’ (Hitler Kalyana) ಸೀರಿಯಲ್​ನಲ್ಲಿ ಅವರಿಗೆ ಮುಖ್ಯ ಪಾತ್ರವಿದೆ. ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಧಾರಾವಾಹಿ ಜೊತೆಗೆ ದಿಲೀಪ್​ ರಾಜ್​ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ‘ಮಹಾನ್​ ಕಲಾವಿದ’ (Mahan Kalavida) ಎಂದು ಶೀರ್ಷಿಕೆ ಇಡಲಾಗಿದೆ. ಬಹಳ ದಿನಗಳ ನಂತರ ಮತ್ತೆ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಅವರಿಗೆ ಖುಷಿ ಇದೆ. ‘ನಿರ್ದೇಶಕ ಅಭಯ್ ಚಂದ್ರ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಕಲಾವಿದ ಮಾಡುವ ನಟನೆ‌ ಮೊದಲು ನಿರ್ದೇಶಕರಿಗೆ ಮೆಚ್ಚುಗೆ ಆಗಬೇಕು. ನನ್ನ ನಟನೆ ಬಗ್ಗೆ ನಿರ್ದೇಶಕರು ಹೇಳಬೇಕು. ಈ ಚಿತ್ರದ ಮೇಲೆ ನನಗೆ ಕಾತರ ಇದೆ’ ಎಂದು ದಿಲೀಪ್ ರಾಜ್ ಹೇಳಿದ್ದಾರೆ.

ಇತ್ತೀಚೆಗೆ ‘ಮಹಾನ್​ ಕಲಾವಿದ’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಹಿರಿಯ ಪತ್ರಕರ್ತರಾದ ದಿ. ಸುರೇಶ್​ ಚಂದ್ರ ಅವರ ಪುತ್ರನಾದ ಅಭಯ್ ಚಂದ್ರ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಸಂಗೀತ ಕೂಡ ನೀಡಿದ್ದಾರೆ. ಇದು ಅವರ ಎರಡನೇ ಸಿನಿಮಾ. ಚಿತ್ರದ ಬಗ್ಗೆ ಅವರು​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

‘ಮೊದಲಿಗೆ ಈ ಕಥೆಯನ್ನು ಸಿದ್ಧಪಡಿಸಿಕೊಂಡು ಕಲಾವಿದ ಅಂತ ಹೆಸರು ಇಟ್ಟಿದ್ದೆ. ಈ ವಿಷಯವನ್ನು ರವಿಚಂದ್ರನ್ ಅವರಿಗೆ ತಿಳಿಸಿದಾಗ ಬರೀ ‘ಕಲಾವಿದ’ ಅಂತ ಬೇಡ, ಏನಾದರೂ ಸೇರಿಸು ಎಂದು ಸಲಹೆ ನೀಡಿದರು. ಆಗ ‘ಮಹಾನ್ ಕಲಾವಿದ’ ಎಂದು ಶೀರ್ಷಿಕೆ ಬದಲಾಯಿಸಿದೆವು. ಕಲಾವಿದನ ಬದುಕು ಬವಣೆಗಳನ್ನು ತೋರಿಸುವ ಕಥಾಹಂದರ ಈ ಚಿತ್ರದಲ್ಲಿ ಇದೆ. ನಾನು ಈ ಪಾತ್ರ ಬರೆಯುವಾಗ ದಿಲೀಪ್ ರಾಜ್ ಅವರೇ ಸೂಕ್ತ ಎನಿಸಿತು. ಅವರು ಕೂಡ ಒಪ್ಪಿಕೊಂಡರು’ ಎಂದಿದ್ದಾರೆ ಅಭಯ್​ ಚಂದ್ರ.

ಇದನ್ನೂ ಓದಿ
Image
‘ಮಾಯಾಮೃಗ’ ಧಾರಾವಾಹಿಗೆ ಸೀಕ್ವೆಲ್​; ಈ ಬಾರಿ ಟಿ.ಎನ್​. ಸೀತಾರಾಮ್ ಹೇಳ ಹೊರಟಿರುವ ವಿಚಾರಗಳೇನು?
Image
‘ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್​ ಪಾತ್ರಕ್ಕೆ ಆಫರ್ ಬಂದಿದ್ದು ನಿಜ, ಆದರೆ…’: ಅನೂಪ್ ಭಂಡಾರಿ ಸ್ಪಷ್ಟನೆ
Image
Anirudh Jatkar: ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಸಿಕ್ಕ ಸಂಬಳದ ಬಗ್ಗೆ ನೇರವಾಗಿ ಮಾತನಾಡಿದ ಅನಿರುದ್ಧ್​
Image
‘ನಾನು ಮತ್ತೆ ಆ ಧಾರಾವಾಹಿ ಮಾಡಲ್ಲ’; ತೆಲುಗು ಸೀರಿಯಲ್​ನಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡ ಚಂದನ್ ಕುಮಾರ್

‘ಮಹಾನ್​ ಕಲಾವಿದ’ ಸಿನಿಮಾದಲ್ಲಿ ಇಬ್ಬರು ನಾಯಕಿಯರು. ಜಾಹ್ನವಿ ರಾಯಲ ಹಾಗೂ ಪಲ್ಲವಿ ರಾಜು ಆ ಪಾತ್ರಗಳನ್ನು ನಿಭಾಯಿಸಿದ್ದಾರೆ. ದಿಲೀಪ್ ರಾಜ್ ಅವರ ಪತ್ನಿ ಪಾತ್ರದಲ್ಲಿ ಜಾಹ್ನವಿ ರಾಯಲ ನಟಿಸುತ್ತಿದ್ದಾರೆ. ತಮಗೂ ಒಳ್ಳೆಯ ಪಾತ್ರ ಸಿಕ್ಕಿದೆ ಎಂಬ ಖುಷಿ ಪಲ್ಲವಿ ರಾಜು ಅವರಿಗಿದೆ.

(ಸುದ್ದಿಗೋಷ್ಠಿಯಲ್ಲಿ ‘ಮಹಾನ್​ ಕಲಾವಿದ’ ಚಿತ್ರತಂಡ)

ಮೂಲತಃ ಹಾಸನದವರಾದ ಭರತ್ ಬಿ. ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಅವರು ಮಂಡ್ಯ ನಿವಾಸಿ. ಕಿರಣ್ ಗಜ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ‌.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:54 pm, Sat, 17 September 22

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್