AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wheel Chair Romeo Movie: ಮೇ 27ಕ್ಕೆ ರಿಲೀಸ್ ಆಗುತ್ತಿದೆ ‘ವೀಲ್ ಚೇರ್ ರೋಮಿಯೋ’; ಈ ಚಿತ್ರದ ಕತೆ ಸಿಕ್ಕಿದ್ದು ಹೇಗೆ? ಇಲ್ಲಿದೆ ಅಚ್ಚರಿಯ ವಿಚಾರ

Ram Chetan | Mayuri Kyatari: ‘ವೀಲ್ ಚೇರ್ ರೋಮಿಯೋ’ ಟ್ರೇಲರ್ ಆಂಡ್ ಸಾಂಗ್ಸ್​ಗಳನ್ನು ನೋಡಿ, ಕಥೆಯ ಗಟ್ಟಿತನಕ್ಕೆ ಆಶ್ಚರ್ಯಚಕಿತರಾಗದವರಿಲ್ಲ. ಅಷ್ಟು ಭಿನ್ನವಾಗಿದೆ ವೀಲ್ ಚೇರ್ ರೋಮಿಯೋ ಕಥಾನಕ. ಆದರೆ ಈ ಕಥೆ ಹುಟ್ಟಿದ್ದು ಹೇಗೆ ಎಂಬ ಕುತೂಹಲದ ಪ್ರಶ್ನೆಗಳಂತು ನಿಮ್ಮಲ್ಲಿ ಆಗಾಗ ಹೊಗೆಯಾಡುತ್ತಿರುತ್ತದೆ. ಅದಕ್ಕೆ ನಿರ್ದೇಶಕ ನಟರಾಜ್ ಅವರೇ ಉತ್ತರ ನೀಡಿದ್ದಾರೆ.

Wheel Chair Romeo Movie: ಮೇ 27ಕ್ಕೆ ರಿಲೀಸ್ ಆಗುತ್ತಿದೆ ‘ವೀಲ್ ಚೇರ್ ರೋಮಿಯೋ’; ಈ ಚಿತ್ರದ ಕತೆ ಸಿಕ್ಕಿದ್ದು ಹೇಗೆ? ಇಲ್ಲಿದೆ ಅಚ್ಚರಿಯ ವಿಚಾರ
‘ವೀಲ್​ಚೇರ್ ರೋಮಿಯೋ’ ಚಿತ್ರೀಕರಣದ ಸಂದರ್ಭದಲ್ಲಿ ತೆಗೆದ ಚಿತ್ರ
TV9 Web
| Edited By: |

Updated on:May 24, 2022 | 1:20 PM

Share

ಜಿಯಾಗ್ರಫಿ ಚಾನೆಲ್​ನ ಎಪಿಸೋಡ್ ಒಂದರಲ್ಲಿ ಸಿಕ್ಕಿದ ಕಥೆಯೇ ವೀಲ್ ಚೇರ್ ರೋಮಿಯೋ..! ಇದನ್ನು ಕೇಳಿ ನಿಮಗೆ ಒಮ್ಮೆಲೆ ಶಾಕ್ ಆಗಿರಬಹುದು. ಯಾಕಂದ್ರೆ ‘ವೀಲ್ ಚೇರ್ ರೋಮಿಯೋ’ (Wheel Chair Romeo Movie) ಟ್ರೇಲರ್ ಆಂಡ್ ಸಾಂಗ್ಸ್​ಗಳನ್ನು ನೋಡಿ, ಕಥೆಯ ಗಟ್ಟಿತನಕ್ಕೆ ಆಶ್ಚರ್ಯಚಕಿತರಾಗದವರಿಲ್ಲ. ಅಷ್ಟು ಭಿನ್ನವಾಗಿದೆ ವೀಲ್ ಚೇರ್ ರೋಮಿಯೋ ಕಥಾನಕ. ಆದರೆ ಈ ಕಥೆ ಹುಟ್ಟಿದ್ದು ಹೇಗೆ ಎಂಬ ಕುತೂಹಲದ ಪ್ರಶ್ನೆಗಳಂತು ನಿಮ್ಮಲ್ಲಿ ಆಗಾಗ ಹೊಗೆಯಾಡುತ್ತಿರುತ್ತದೆ. ಅದಕ್ಕೆ ನಿರ್ದೇಶಕ ನಟರಾಜ್ (Nataraj) ಅವರೇ ಉತ್ತರ ನೀಡಿದ್ದಾರೆ. ಸಿನಿಮಾಗಳ ಕಥೆ ಹುಟ್ಟುವುದೇ ರೋಮಾಂಚಕ. ಎಲ್ಲೋ ಕುಳಿತಾಗ, ಏನೋ ನೋಡಿದಾಗ, ತಮ್ಮ ಸುತ್ತಮುತ್ತಲಿನ ಅನುಭವ ಕಥೆಯಾದಾಗ ಕತೆ ಹುಟ್ಟಲು ಅನೇಕ ಕಾರಣಗಳು ಸಿಗುತ್ತವೆ. ಅದೇ ರೀತಿ ವೀಲ್ ಚೇರ್ ರೋಮಿಯೋ ಕಥೆ ಹುಟ್ಟಿದ್ದು ಆ ಒಂದು ಎಪಿಸೋಡ್ ನೋಡುವಾಗ ಎಂಬುದು ವಿಶೇಷ. ಯಾವುದದು? ಮುಂದೆ ಓದಿ.

ನ್ಯಾಷನಲ್ ಜಿಯೋಗ್ರಫಿ ಚಾನೆಲ್ ನೋಡುಗರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಅಷ್ಟು ಆಸಕ್ತಿದಾಯಕ ವಿಚಾರಗಳು ಸಿಗುತ್ತವೆ. ಬೆರಗುಗಣ್ಣಿನಿಂದಲೇ ನೋಡುವಂತ ಎಪಿಸೋಡಿನಲ್ಲಿ, ಆಸ್ಟ್ರೇಲಿಯಾದ ತಂದೆಯೊಬ್ಬ ಮಗನನ್ನು ವೇಶ್ಯಾ ಗೃಹಕ್ಕೆ ಕರೆದೊಯ್ಯುವ ಸನ್ನಿವೇಶಗಳಿದ್ದವಂತೆ. ಅದನ್ನು ಭಾರತೀಯ ಸಮಾಜ ಒಪ್ಪಿಕೊಳ್ಳುವುದಿರಲಿ, ಅರಗಿಸಿಕೊಳ್ಳುವುದೂ ಕಷ್ಟವಿದೆ. ಆದರೆ ನಿರ್ದೇಶಕ ನಟರಾಜ್ ಅವರಿಗೆ ಅದೊಂದು ಎಳೆ ನಾನಾ ದಿಕ್ಕಿನಲ್ಲಿ ಆಲೋಚನೆಗೆ ಹಚ್ಚಿತ್ತು.

Mayuri Kyatari in Wheelchair Romeo

‘ವೀಲ್​ಚೇರ್ ರೋಮಿಯೋ’ ಚಿತ್ರದಲ್ಲಿ ಮಯೂರಿ ಕ್ಯಾತರಿ

ಅದರ ಚುಂಗು ಹಿಡಿದು ಹೊರಟು, ಒಂದಷ್ಟು ಕಾಲ ಆಲೋಚಿಸಿ ಒಂದು ಚೆಂದದ ಕಥೆಗೆ ಜೀವ ಕೊಡಲಾರಂಭಿಸಿದ್ದರು. ಅದರ ಫಲವಾಗಿ ಜೀವ ತಳೆದಿದ್ದು ವೀಲ್‌ಚೇರ್ ರೋಮಿಯೋ ಕಥೆ. ವೀಲ್ ಚೇರ್ ರೋಮಿಯೋ ಕಣ್ಣಿಲ್ಲ ವೇಶ್ಯೆ ಮೇಲೆ ವೀಲ್ ಚೇರ್ ನಲ್ಲೇ ಜೀವನ ಸವೆಸಿದ ಹುಡುಗನಿಗೆ ಪ್ರೀತಿಯಾಗುತ್ತೆ. ಇಷ್ಟು ಗಂಭೀರ ಎಳೆಯಿರುವ ಚಿತ್ರ ನಿರ್ದೇಶಕರ ಯೋಚನೆಗೆ ತಕ್ಕಂತೆ ಮೂಡಿ ಬಂದಿದೆ. ಇದೇ 27ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ.

ಇದನ್ನೂ ಓದಿ
Image
Bhool Bhulaiyaa 2 Box Office Collection: ಬಾಕ್ಸಾಫೀಸ್​ನಲ್ಲಿ ಮುಂದುವರೆದ ‘ಭೂಲ್ ಭುಲಯ್ಯ 2’ ಓಟ; ನಾಲ್ಕನೇ ದಿನದ ಕಲೆಕ್ಷನ್ ಎಷ್ಟು?
Image
Ragini Dwivedi Birthday: ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ರಾಗಿಣಿ; ‘ತುಪ್ಪದ ಬೆಡಗಿ’ಯ ಗ್ಲಾಮರಸ್ ಫೋಟೋಗಳು ಇಲ್ಲಿವೆ
Image
ಟ್ರೇಲರ್​ನಿಂದ ನಿರೀಕ್ಷೆ ಮೂಡಿಸಿದ ‘ಮನಸ್ಮಿತ’ ಸಿನಿಮಾ; ಅತುಲ್​ ಕುಲಕರ್ಣಿ ಜೊತೆ ಹೊಸ ಕಲಾವಿದರ ಸಂಗಮ
Image
ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಮಿಂಚಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳಿಂದ ಸಿಕ್ತು ಮಿಲಿಯನ್​ ಲೈಕ್ಸ್​
Wheel Chair Romeo stills (1)

‘ವೀಲ್​ಚೇರ್ ರೋಮಿಯೋ’ ಚಿತ್ರದ ಒಂದು ದೃಶ್ಯ

ಕೇಳುವುದಕ್ಕೆ ಇಷ್ಟೊಂದು ಆಶ್ಚರ್ಯ ಕಾಡಿದರೆ ಇನ್ನು‌ಸಿನಿಮಾ ನೋಡುವಾಗ ಎಷ್ಟೆಲ್ಲಾ ಮನಸ್ಸು ಭಾರವಾಗುವ ಸನ್ನಿವೇಶ ಸಿಗಬಹುದು ಎಂಬುದನ್ನು ಥಿಂಕ್ ಮಾಡಿ. ಇಷ್ಟೆಲ್ಲಾ ಭಾವಪರವಶ ಮಾಡುವಂತ ವೀಲ್ ಚೇರ್ ರೋಮಿಯೋನಾ ರೋಮ್ಯಾಂಟಿಕ್ ಕಥೆಯನ್ನು ಥಿಯೇಟರ್ ನಲ್ಲಿಯೇ ನೋಡಿದರೆ ಮಜಾ ಸಿಗುವುದು ಗ್ಯಾರಂಟಿ.

‘ವೀಲ್​ಚೇರ್ ರೋಮಿಯೋ’ ಡೈಲಾಗ್​ ಟ್ರೇಲರ್ ಇಲ್ಲಿದೆ:

‘ವೀಲ್​ಚೇರ್ ರೋಮಿಯೋ’ ಚಿತ್ರದಲ್ಲಿ ರಾಮ್​ ಚೇತನ್, ಮಯೂರಿ ಕ್ಯಾತರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ ಸೇರಿದಂತೆ ಖ್ಯಾತ ಕಲಾವಿದರ ದಂಡೇ ಚಿತ್ರದಲ್ಲಿದೆ. ಈಗಾಗಲೇ ಹಾಡು ಹಾಗೂ ಟ್ರೇಲರ್ ಮೂಲಕ ಮನಗೆದ್ದಿರುವ ಚಿತ್ರ ಮೇ 27ರಂದು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:12 pm, Tue, 24 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್