‘ಗಂಡನಾಗಿ ನನಗೆ ಮಡದಿಯ ಮೇಲೆ ಹೆಮ್ಮೆ’; ಪತ್ನಿ ಪರಿಮಳಾ ಸಾಧನೆ ಬಗ್ಗೆ ಹಮ್ಮೆ ವ್ಯಕ್ತಪಡಿಸಿದ ಜಗ್ಗೇಶ್

ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ 1984ರ ಮಾ.22ರಂದು ಜಗ್ಗೇಶ್​ ಮತ್ತು ಪರಿಮಳಾ ರಿಜಿಸ್ಟರ್​ ಮ್ಯಾರೇಜ್​ ಆದರು. ಮದುವೆ ಸಂದರ್ಭದಲ್ಲಿ ಜಗ್ಗೇಶ್ ಅವರು ಪರಿಮಳಾಗೆ ಶಿಕ್ಷಣ ಕೊಡಿಸುವ ಭರವಸೆ ನೀಡಿದ್ದರಂತೆ.

‘ಗಂಡನಾಗಿ ನನಗೆ ಮಡದಿಯ ಮೇಲೆ ಹೆಮ್ಮೆ’; ಪತ್ನಿ ಪರಿಮಳಾ ಸಾಧನೆ ಬಗ್ಗೆ ಹಮ್ಮೆ ವ್ಯಕ್ತಪಡಿಸಿದ ಜಗ್ಗೇಶ್
ಪರಿಮಳಾ-ಜಗ್ಗೇಶ್
Follow us
| Updated By: ರಾಜೇಶ್ ದುಗ್ಗುಮನೆ

Updated on:Nov 16, 2022 | 3:18 PM

ನಟ ಜಗ್ಗೇಶ್ (Jaggesh) ಹಾಗೂ ಪರಿಮಳಾ ಅವರ ದಾಂಪತ್ಯಕ್ಕೆ 4 ದಶಕ ತುಂಬುವುದರಲ್ಲಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಬರುತ್ತಿದ್ದಾರೆ. ಜಗ್ಗೇಶ್ ಆಗಿನ್ನೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರಲಿಲ್ಲ. ಆಗಲೇ ಜಗ್ಗೇಶ್ ಹಾಗೂ ಪರಿಮಳಾ ಮದುವೆ ನಡೆದಿತ್ತು. ಪತ್ನಿಗೆ ನೀಡಿದ್ದ ಒಂದು ಭರವಸೆಯನ್ನು ಜಗ್ಗೇಶ್ ಈಡೇರಿಸಿದ್ದರು. ಈಗ ಪತ್ನಿ ಮಾಡಿದ ಸಾಧನೆ ಬಗ್ಗೆ ಜಗ್ಗೇಶ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.

ಜಗ್ಗೇಶ್​ ಮತ್ತು ಪರಿಮಳಾ ಅವರದ್ದು ಲವ್​ ಮ್ಯಾರೇಜ್​. ತುಂಬ ಚಿಕ್ಕ ವಯಸ್ಸಿನಲ್ಲಿಯೇ ಜಗ್ಗೇಶ್ ಪ್ರೀತಿಯಲ್ಲಿ ಬಿದ್ದಿದ್ದರು. ಆಗ ಪರಿಮಳಾ ಅವರಿಗೆ ಕೇವಲ 14 ವರ್ಷ. ಜಗ್ಗೇಶ್​ ಅವರಿಗೆ 19ರ ಪ್ರಾಯ. ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ 1984ರ ಮಾ.22ರಂದು ಜಗ್ಗೇಶ್​ ಮತ್ತು ಪರಿಮಳಾ ರಿಜಿಸ್ಟರ್​ ಮ್ಯಾರೇಜ್​ ಆದರು. ಆದರೆ, ಇದಕ್ಕೆ ಪರಿಮಳಾ ಕುಟುಂಬದವರಿಂದಲೇ ಅಡ್ಡಿ ಎದುರಾಗಿತ್ತು. ಮದುವೆ ಸಂದರ್ಭದಲ್ಲಿ ಜಗ್ಗೇಶ್ ಅವರು ಪರಿಮಳಾಗೆ ಶಿಕ್ಷಣ ಕೊಡಿಸುವ ಭರವಸೆ ನೀಡಿದ್ದರಂತೆ.

‘ಮಡದಿ ಪರಿಮಳಾ ಎಸ್​ಎಸ್​ಎಲ್​ಸಿ ಓದುವಾಗ ನನ್ನ ಮದುವೆ ಆದದ್ದು. ಪರಿಮಳ ನನ್ನ ಕೇಳಿಕೊಂಡಿದ್ದು ಓದಿಸು ಎಂದು. ನಾನು ಮಾತು ಕೊಟ್ಟೆ. ಎಲ್ಲಿಯವರೆಗೆ ಓದುತ್ತೀಯೋ, ಅಲ್ಲಿಯವರೆಗೆ ಓದಿಸುವೆ ಎಂದು ಭರವಸೆ ಕೊಟ್ಟಿದೆ. 1985ರ ಸಮಯ. ಕಾಸು, ಕೆಲಸ ಇಲ್ಲದ ದಿನಗಳು ಅವು. ಅವಳ ವಿದ್ಯಾಭ್ಯಾಸಕ್ಕೆ ಹೇಗೆ ಹಣ ಹೊಂದಿಕೆ ಮಾಡುವುದು ಎಂಬ ಚಿಂತೆ ಇತ್ತು’ ಎಂದು ಬರಹ ಆರಂಭಿಸಿದ್ದಾರೆ ಜಗ್ಗೇಶ್.

ಇದನ್ನೂ ಓದಿ
Image
Kantara: ‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರೇ ಮಾಡ್ಸಿದ್ದು’; ವಿದೇಶದಲ್ಲಿ ‘ಕಾಂತಾರ’ ನೋಡಿ ಜಗ್ಗೇಶ್​ ಪ್ರತಿಕ್ರಿಯೆ
Image
‘20ನೇ ವಯಸ್ಸಿಗೆ ಅಂತರ್ಜಾತಿ ವಿವಾಹ ಆಗಿದ್ದಕ್ಕೆ 10 ವರ್ಷ ಕುಟುಂಬದಿಂದ ದೂರ ಇದ್ದೆ’- ಜಗ್ಗೇಶ್
Image
ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ನಟ ಜಗ್ಗೇಶ್​-ಪರಿಮಳಾ ಮದುವೆಗೆ ಈಗ 38 ವರ್ಷ; ಇಲ್ಲಿದೆ ಅಚ್ಚರಿಯ ಸ್ಟೋರಿ

ಇದನ್ನೂ ಓದಿ: Totapuri: ‘ತೋತಾಪುರಿ’ ರಿಲೀಸ್​ ದಿನವೇ ಚಂಡಿಕಾ ಹೋಮ ಮಾಡಿಸಿದ ಜಗ್ಗೇಶ್​-ಪರಿಮಳಾ ದಂಪತಿ

‘ಪಿಯುಸಿಯಲ್ಲಿ ಮೆರಿಟ್ ಪಡೆದು BE ARCಗೆ ಬಿಎಂಎಸ್​​ನಲ್ಲಿ ಸೀಟ್​ ಪಡೆದೇ ಬಿಟ್ಟಳು. ಅಲ್ಲಿಂದ ಇಲ್ಲಿಯವರೆಗೂ ನ್ಯೂಟ್ರಿಷಿಯನ್​ನಲ್ಲೇ 5 ಪ್ರಮಾಣಪತ್ರ ಪಡೆದು ತನ್ನದೆ ಸ್ವಂತ ಸಂಸ್ಥೆ ನಡೆಸುತ್ತಿದ್ದಾಳೆ. ಪ್ರಪ್ರಥಮವಾಗಿ ವಿದೇಶ ನೆಲದಲ್ಲಿ ತನ್ನ ಪ್ರತಿಭೆ ಅನಾವರಣ ಮಾಡುವ ಅದೃಷ್ಟ ಅವಳ ಪ್ರತಿಭೆಗೆ ಒದಗಿ ಬಂದಿದೆ. ಗಂಡನಾಗಿ ನನಗೆ ಮಡದಿಯ ಮೇಲೆ ಹೆಮ್ಮೆ. ನಿಮ್ಮ ಶುಭಹಾರೈಕೆಯು ಇರಲಿ. ಶುಭದಿನ’ ಎಂದು ಜಗ್ಗೇಶ್ ತಮ್ಮ ಬರಹ ಕೊನೆಗೊಳಿಸಿದ್ದಾರೆ. ಪರಿಮಳಾಗೆ ಎಲ್ಲರಿಂದಲೂ ಶುಭಾಶಯ ಬರುತ್ತಿದೆ.

Published On - 3:17 pm, Wed, 16 November 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ