AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೇಮದ ಊರಲಿ’ ಚಿತ್ರಕ್ಕೆ ನೇರವಾಗಿ ಎಫೆಕ್ಟ್ ಕೊಟ್ಟ ‘ಜೈಲರ್ 2’; ಕಲೆಕ್ಷನ್ ಎಷ್ಟು ಡೌನ್ ಆಯ್ತು?

ಅಕ್ಟೋಬರ್ ಹದಿನೈದರಂದು ಬಿಡುಗಡೆಯಾದ ಜೈಲರ್ ಎರಡು ಚಿತ್ರದ ಭರ್ಜರಿ ಅಬ್ಬರದಿಂದಾಗಿ ಕನ್ನಡದ ಯಶಸ್ವಿ ಪ್ರೇಮದ ಊರಲಿ ಸಿನಿಮಾ ಪ್ರದರ್ಶನಗಳ ಸಂಖ್ಯೆ ಹಾಗೂ ಕಲೆಕ್ಷನ್ ಕುಸಿದಿದೆ. ಮುಂಬರುವ ವೀಕೆಂಡ್‌ಗಳಲ್ಲಿ ಈ ಸವಾಲನ್ನು ಸಿನಿಮಾ ಹೇಗೆ ಎದುರಿಸಲಿದೆ ಎಂಬ ಕುತೂಹಲ ಮೂಡಿದೆ. ಆ ಬಗ್ಗೆ ಇಲ್ಲಿದೆ ವಿವರ.

'ಪ್ರೇಮದ ಊರಲಿ' ಚಿತ್ರಕ್ಕೆ ನೇರವಾಗಿ ಎಫೆಕ್ಟ್ ಕೊಟ್ಟ ‘ಜೈಲರ್ 2’; ಕಲೆಕ್ಷನ್ ಎಷ್ಟು ಡೌನ್ ಆಯ್ತು?
ಜೈಲರ್ 2-ಪ್ರೇಮದ ಊರಲಿ
ರಾಜೇಶ್ ದುಗ್ಗುಮನೆ
|

Updated on: Oct 16, 2026 | 4:08 PM

Share

ಮುಖ್ಯಾಂಶಗಳು

  • 21ನೇ ದಿನಕ್ಕೆ ಕುಸಿದ 'ಪ್ರೇಮದ ಊರಲಿ' ಚಿತ್ರದ ಶೋ ಹಾಗೂ ಕಲೆಕ್ಷನ್
  • ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಹಿನ್ನಡೆ
  • 1,300ರಿಂದ 945ಕ್ಕೆ ಇಳಿಕೆಯಾದ ಪ್ರದರ್ಶನಗಳು

ಕನ್ನಡ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದ ‘ಪ್ರೇಮದ ಊರಲಿ’ ಚಿತ್ರದ ಓಟಕ್ಕೆ ಕಣ್ಣುಬಿದ್ದಂತಿದೆ. ಅಕ್ಟೋಬರ್ 15ರಂದು ಬಹುನಿರೀಕ್ಷಿತ ‘ಜೈಲರ್ 2’ ಚಿತ್ರ ರಿಲೀಸ್ ಆಗಿರುವುದೇ ‘ಪ್ರೇಮದ ಊರಲಿ’ ಚಿತ್ರಕ್ಕೆ ದೊಡ್ಡ ಹೊಡೆತ ನೀಡಿದೆ. ಹೊಸ ಸಿನಿಮಾದ ಹವಾ ಜೋರಾಗಿದ್ದು ‘ಪ್ರೇಮದ ಊರಲಿ’ ಚಿತ್ರದ ಶೋಗಳ ಸಂಖ್ಯೆ ಹಾಗೂ ಕಲೆಕ್ಷನ್ ಎರಡೂ ಗಣನೀಯವಾಗಿ ಕುಸಿದಿವೆ. ವೀಕೆಂಡ್​ನಲ್ಲಿ ಸಿನಿಮಾ ಮತ್ತೆ ಚೇತರಿಸಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

21ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ವಿವರ:

ಶೋಗಳ ಕಡಿತ: ‘ಜೈಲರ್ 2’ ಎಂಟ್ರಿಯಿಂದಾಗಿ ‘ಪ್ರೇಮದ ಊರಲಿ’ ಚಿತ್ರಕ್ಕೆ ದೊರೆಯುತ್ತಿದ್ದ ಪ್ರದರ್ಶನಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದ್ದು, 21ನೇ ದಿನದಂದು ಕೇವಲ 945 ಶೋಗಳು ಮಾತ್ರ ಸಿಕ್ಕಿವೆ. 20ನೇ ದಿನಕ್ಕೇ 1,372 ಶೋಗಳು ಸಿಕ್ಕಿದ್ದವು.

ದೈನಂದಿನ ಗಳಿಕೆ: ಶೋಗಳ ಸಂಖ್ಯೆ ಇಳಿಕೆಯಾದ ನೇರ ಪರಿಣಾಮ ಕಲೆಕ್ಷನ್ ಮೇಲೆ ಬೀರಿದ್ದು, 21ನೇ ದಿನದಂದು ಚಿತ್ರ ಕೇವಲ 3.15 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಅಷ್ಟೇ ಮಾಡಿದೆ. 20ನೇ ದಿನ 4.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಒಟ್ಟು ಗಳಿಕೆ: ಏನೇ ಅಡೆತಡೆಗಳಿದ್ದರೂ, ಇದುವರೆಗೆ ಚಿತ್ರವು ಒಟ್ಟಾರೆಯಾಗಿ ಭಾರತದಲ್ಲಿ 65.37 ಕೋಟಿ ರೂಪಾಯಿ ನೆಟ್ ಹಾಗೂ 76.36 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ವಿಶ್ವ ಮಟ್ಟದಲ್ಲೂ ಗಳಿಕೆ

ಇದನ್ನೂ ಓದಿ: ‘ಪ್ರೇಮದ ಊರಲಿ’ ಚಿತ್ರತಂಡವ ಭೇಟಿಯಾಗಿ ಅಭಿನಂದಿಸಿದ ಯಶ್-ರಾಧಿಕಾ: ಚಿತ್ರಗಳು

ಭಾರತದಲ್ಲಿ ಈ ಸಿನಿಮಾ ಗೆಲುವು ಕಂಡ ಬಳಿಕ

‘ಜೈಲರ್ 2’ ಬಿಡುಗಡೆಯ ಬಿರುಗಾಳಿಗೆ ‘ಪ್ರೇಮದ ಊರಲಿ’ ಚಿತ್ರದ ಮೂರನೇ ವಾರದ ಕೊನೆಯ ದಿನ ದೊಡ್ಡ ಹಿನ್ನಡೆಯನ್ನು ಎದುರಿಸಬೇಕಾಗಿ ಬಂದಿದೆ. ಮುಂಬರುವ ದಿನಗಳಲ್ಲಿ ಚಿತ್ರವು ಈ ಸ್ಪರ್ಧೆಯನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ಜೈಲರ್ 2’ ಗಳಿಕೆ:

‘ಜೈಲರ್ 2’ ಸಿನಿಮಾ 120 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾಗೆ ಎಲ್ಲ ಕಡೆಗಳಿಂದ ಪಾಸಿಟಿವ್ ವಿಮರ್ಶೆ ಸಿಕ್ಕಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More