ಸ್ವಾತಂತ್ರ್ಯ ಹೋರಾಟಗಾರರ ಪಾದಪೂಜೆ ಮಾಡಿದ ಚಿತ್ರಸಾಹಿತಿ ಕೆ.ಕಲ್ಯಾಣ್

75ನೇ ಸ್ವಾತಂತ್ರ್ಯೋತ್ಸವನ್ನ ಕುಂದಾನಗರಿಯಲ್ಲಿ  ಚಿತ್ರಸಾಹಿತಿ ಕೆ.ಕಲ್ಯಾಣ ವಿಶಿಷ್ಟವಾಗಿ ಆಚರಿಸಿದ್ದಾರೆ ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ.

ಸ್ವಾತಂತ್ರ್ಯ ಹೋರಾಟಗಾರರ ಪಾದಪೂಜೆ ಮಾಡಿದ ಚಿತ್ರಸಾಹಿತಿ ಕೆ.ಕಲ್ಯಾಣ್
ಆಜಾದಿ ಕಿ ಅಮೃತ್​ ಮಹೋತ್ಸವ್​
Follow us
TV9 Web
| Updated By: ಆಯೇಷಾ ಬಾನು

Updated on:Oct 29, 2021 | 3:18 PM

ದೇಶಾದ್ಯಂತ ಎಲ್ಲೇಲ್ಲೂ 75ನೇ  ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗಿದೆ. ಇನ್ನೂ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಎಷ್ಟು ನೆನೆದರೂ ಕಮ್ಮಿಯೇ. ಸ್ವಾತಂತ್ರ್ಯ ದಿನದಂದು ಈ ಎಲ್ಲರನ್ನ ಜ್ಞಾಪಿಸಿಕೊಳ್ಳುವುದರ ಜತೆಗೆ ಅವರನ್ನ ಆರಾಧಿಸುವ ಕೆಲಸ ಕೂಡ ಕೆಲವು ಕಡೆಗಳಲ್ಲಿ ನಡೆದಿದೆ. ಈ 75ನೇ ಸ್ವಾತಂತ್ರ್ಯೋತ್ಸವನ್ನ ಕುಂದಾನಗರಿಯಲ್ಲಿ  ಚಿತ್ರಸಾಹಿತಿ ಕೆ.ಕಲ್ಯಾಣ ವಿಶಿಷ್ಟವಾಗಿ ಆಚರಿಸಿದ್ದಾರೆ ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ.

ವಿಶಿಷ್ಟವಾಗಿ ಸ್ವಾತಂತ್ರ್ಯೋತ್ಸವ ಆಚರಣೆ

ಚಿತ್ರ ಸಾಹಿತಿ, ಕೆ.ಕಲ್ಯಾಣ್ ಯಾರಿಗೆ ಗೊತ್ತಿಲ್ಲ ಹೇಳಿ ಇವರು ಬರೆದ ಗೀತೆಗಳು ಒಂದೊಂದು ಇನ್ನೂ ಜನಮಾನಸದಲ್ಲಿ ಉಳಿದಿವೆ. ಇಂತಹ ಚಿತ್ರಸಾಹಿತಿ ಕೆ.ಕಲ್ಯಾಣ್​​ಗೂ ಹಾಗೂ ಕುಂದಾನಗರಿಗೂ ಒಂದು ಬಿಡಿಸಲಾರದ ನಂಟಿದೆ. ತನ್ನ ಪತ್ನಿಯ ತವರೂರಾದ ಬೆಳಗಾವಿಗೆ ಆಗಾಗಾ ಕೆ.ಕಲ್ಯಾಣ್ ಬರ್ತಿರುತ್ತಾರೆ, ತಮ್ಮ ದಾಂಪತ್ಯದಲ್ಲಿ ಬಿರುಕಾಗಿ ಮತ್ತೆ ಈ ಜೋಡಿ ಒಂದಾಗಿದ್ದು ಈ ಬೆಳಗಾವಿಯಲ್ಲೇ. ಹೆಂಡತಿ ತವರು ಮನೆಗೆ ಬಂದು ಹೋಗ್ತಿದ್ದ ಕೆ.ಕಲ್ಯಾಣ್ ಅವರು ಈ ಬಾರಿ ಒಬ್ಬಂಟಿಯಾಗಿ ಬಂದಿದ್ದರು. ಅದು ಸ್ವಾತಂತ್ರೋತ್ಸವ ದಿನವನ್ನ ವಿಭಿನ್ನವಾಗಿ ಆಚರಣೆ ಮಾಡಲು. ಹೌದು ಯಾವ ಸೆಲೆಬ್ರಿಟಿಗಳು ಮಾಡದ ಕೆಲಸವನ್ನ ಕೆ.ಕಲ್ಯಾಣ ಮಾಡಿದ್ದಾರೆ ಅದುವೇ ಸ್ವಾತಂತ್ರ್ಯ ಹೋರಾಟಗಾರರ ಪಾದೆ ಪೂಜೆ ಮಾಡುವುದರ ಮೂಲಕ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ…

ಸ್ವಾತಂತ್ರ್ಯ ಹೋರಾಟಗಾರರ ಪಾದ ಪೂಜೆ  

ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಿಸಲಾಯಿತು. ಆಜಾದಿ ಕಾ ಅಮೃತ್ ಮಹೋತ್ಸವ ಧ್ಯೇಯವಾಕ್ಯದಡಿ ದೇಶಾದ್ಯಂತ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಗಿದೆ. ಈ ಸ್ವಾತಂತ್ರ್ಯ ದಿನದ ಸಂಭ್ರಮಕ್ಕೆ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವೇ ಕಾರಣ. ಇಂದು ನಮ್ಮೊಡನೆ ಬೆರಳೆಣಿಕೆಯಷ್ಟು ಸ್ವಾತಂತ್ರ್ಯ ಯೋಧರು ಮಾತ್ರ ಇದ್ದು ಅವರನ್ನು ಗೌರವಿಸುವ ಕೆಲಸವನ್ನು ಆಯಾ ಸರ್ಕಾರ, ಆಯಾ ಜಿಲ್ಲಾಡಳಿತ, ಕೆಲ ಸಂಘ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಹಲವರು ಮಾಡುತ್ತಿದ್ದಾರೆ. ಇನ್ನೂ ಕುಂದಾನಗರಿಗೆ ಪ್ರೇಮಕವಿ ಕೆ.ಕಲ್ಯಾಣ್ ಆಗಮಿಸಿದ್ರು. ಬೆಳಗಾವಿ ಅಳಿಯ ಆಗಿರುವ ಕೆ.ಕಲ್ಯಾಣ್ ಆಗಾಗ ಬೆಳಗಾವಿಗೆ ಬರುತ್ತಿರುತ್ತಾರೆ. ಅದೇ ರೀತಿ ಸ್ವಾತಂತ್ರೋತ್ಸವ ಅಂಗವಾಗಿ ಬೆಳಗಾವಿಗೆ ಆಗಮಿಸಿದ್ದ ಕೆ.ಕಲ್ಯಾಣ್ ವಿಶಿಷ್ಟವಾಗಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಬೆಳಗಾವಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ರಾಜೇಂದ್ರ ಕಲಘಟಗಿ ನಿವಾಸಕ್ಕೆ ಭೇಟಿ ನೀಡಿ ಪಾದಪೂಜೆ ನೆರವೇರಿಸಿದ್ದಾರೆ.

Azadi Ka Amrit Mahotsav

ಆಜಾದಿ ಕಿ ಅಮೃತ್​ ಮಹೋತ್ಸವ್​

ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ

ಬೆಳಗಾವಿಯ ಚನ್ನಮ್ಮ ನಗರದಲ್ಲಿರುವ ಶತಾಯುಷಿ ರಾಜೇಂದ್ರ ಕಲಘಟಗಿ ನಿವಾಸಕ್ಕೆ ಭೇಟಿ ನೀಡಿದ ಕೆ‌.ಕಲ್ಯಾಣ್ ಅವರ ಆರೋಗ್ಯ ವಿಚಾರಿಸಿದರು. ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿಗೆ 100 ವರ್ಷ 9 ತಿಂಗಳಾದರೂ ಸಹ ಯುವಕರಂತೆ ಲವಲವಿಕೆಯಿಂದ ಓಡಾಡೋದನ್ನು ಕಂಡು ಅಚ್ಚರಿಗೊಂಡರು‌. ಇದೇ ವೇಳೆ ಹಾಲಿನಿಂದ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿಯವರ ಪಾದ ತೊಳೆದು ಪೂಜೆ ಮಾಡಿ ಪುಷ್ಪಾರ್ಚನೆ ಮಾಡಿ ಭಕ್ತಿಪೂರ್ವಕವಾಗಿ ನಮಿಸಿದರು.  ಇನ್ನೂ 100 ವರ್ಷ 9 ತಿಂಗಳು ವಯಸ್ಸಿನ ರಾಜೇಂದ್ರ ಕಲಘಟಗಿಯವರು ನಿತ್ಯ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದೇಳ್ತಾರಂತೆ. ತಪ್ಪದೇ ಯೋಗ, ಕಪಾಲಬಾತಿ, ಅನುಲೋಮ, ವಿಲೋಮ ಮಾಡಿ ಕೆಲ ಕಾಲ ವಾಕಿಂಗ್ ಮಾಡ್ತಾರೆ. ವಯೋಸಹಜ ಕಾಯಿಲೆ ಇರೋದ್ರಿಂದ ಪ್ರತಿದಿನ ಹದಿನಾರು ಮಾತ್ರೆಗಳನ್ನು ಸೇವಿಸುತ್ತೇನೆ. ನನಗೆ ಅಸ್ತಮಾ, ಶುಗರ್ ಇದ್ರೂ ಸಹ ಯೋಗ ವ್ಯಾಯಾಮ ಮಾಡುವುದರಿಂದ ಯಾವುದೇ ಆರೋಗ್ಯ ಸಮಸ್ಯೆಯಿಲ್ಲವಂತೆ. 1942 ರಲ್ಲಿ ಮಹಾತ್ಮಾ ಗಾಂಧೀಜಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷವಾಕ್ಯದಡಿ ಚಲೇಜಾವ್ ಚಳವಳಿಗೆ ಕರೆ ನೀಡಿದಾಗ ರಾಜೇಂದ್ರ ಕಲಘಟಗಿಯರಿಗೆ ಕೇವಲ ಇಪ್ಪತ್ತೆರೆಡು ವಯಸ್ಸಿತ್ತಂತೆ. ಆಗ ಸ್ನೇಹಿತರ ಜತೆಗೂಡಿ ಪೋಸ್ಟ್ ಬಾಕ್ಸ್‌ಗೆ ಬೆಂಕಿ ಹಚ್ಚುವುದು. ರೈಲು ಹಳಿ ಕಿತ್ತೆಸೆಯುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರಂತೆ. ಮುಂಬೈನಿಂದ ಬರುತ್ತಿದ್ದ ದಿನಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವಾಗ ಬ್ರಿಟಿಷರು ಬಂಧಿಸಿ ಏಳು ತಿಂಗಳು ಜೈಲಿಗೆ ಹಾಕಿದ್ದಾಗಿನ ಹೋರಾಟದ ದಿನಗಳನ್ನು ರಾಜೇಂದ್ರ ಕಲಘಟಗಿ ಮೆಲುಕು ಹಾಕಿದ್ರು…

ಸ್ವಾತಂತ್ರತ್ಯದ ಕುರಿತು ಪ್ರೇಮಕವಿಯ ಅರ್ಥಪೂರ್ಣ ಮಾತುಗಳು

ಚಿತ್ರಸಾಹಿತಿ ಕೆ.ಕಲ್ಯಾಣ್ ಮಾತನಾಡಿ, ‘ಸ್ವಾಮೀಜಿ ಸಾಧು ಸನ್ಯಾಸಿಗಳು ಯತಿಗಳ ಪಾದಪೂಜೆ ಸೀಮಿತವಾಗಿರುತ್ತೆ. ನಮ್ಮ ದೇಶದ ಗಡಿಯನ್ನು ಕಾದ್ರೆ ಮಾತ್ರ ದೇಶದ ಒಳಗಿರೋರು ಪಾದಪೂಜೆ ಮಾಡಿಸಿಕೊಳ್ಳಲು ಸಾಧ್ಯ. ಗಡಿಯಲ್ಲಿ ಪ್ರಾಣತ್ಯಾಗ ಮಾಡಿದವರು ಹಾಗೂ ಸ್ವಾತಂತ್ರ್ಯಕ್ಕಾಗಿ ಮನೆಮಠ ತ್ಯಾಗ ಮಾಡಿ ಜೈಲಿನಲ್ಲಿದ್ದು ಹೋರಾಡಿದ ಮಹನೀಯರಿಗೆ ಪಾದಪೂಜೆ ಮಾಡಿದ್ರೆ ಅದಕ್ಕೆ ನಿಜವಾದ ಅರ್ಥ ಇರುತ್ತೆ. ನಮ್ಮ ಕಣ್ಣು ಮುಂದೆ ಇರುವ ದೇವರು ಇವರು, ಮಹಾತ್ಮ ಗಾಂಧೀಜಿ ಜೊತೆ ಒಡನಾಟ ಇದ್ದವರು ನಮ್ಮ ಮಧ್ಯೆ ಇರೋದು ನಮ್ಮ ಸೌಭಾಗ್ಯ ಎಂದ್ರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಸ್ವಾತಂತ್ರ್ಯ ತರಲು ರಾಜೇಂದ್ರ ಕಲಘಟಗಿಯವರದ್ದು ಸಿಂಹಪಾಲು ಇದೆ. ಹೀಗಾಗಿ ಇವರ ಪಾದಪೂಜೆ ಮಾಡೋದು ಸೂಕ್ತ ಅನಿಸಿತು ಹೀಗಾಗಿ ಬಂದು ಪಾದೆ ಪೂಜೆ ಮಾಡಿದ್ದೇನೆ’ ಎಂದರು.

ಯುವಜನಾಂಕಕ್ಕೆ ಉತ್ತಮ ಸಂದೇಶ

ತಮ್ಮ ಬಿಜಿ ಸೆಡ್ಯೂಲ್ ನಲ್ಲೂ ಬೆಂಗಳೂರಿನಿಂದ ಬೆಳಗಾವಿಗೆ ಬಂದು ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಅವರಿಗೆ ಗೌರವ ನೀಡಿರುವುದು ಕಲ್ಯಾಣ ಅವರ ದೊಡ್ಡಗುಣ ಮತ್ತು ಇಂದಿನ ಯುವ ಜನರಿಗೆ ಒಳ್ಳೆಯ ಸಂದೇಶ ಕೂಡ ರವಾನಿಸಿದ್ದಾರೆ. ದೇಶಕ್ಕೆ ಬಂದಿರುವ ಸ್ವಾತಂತ್ರ್ಯ ಇಂದಿನ ಪೀಳಿಗೆಯ ಸದ್ಭಳಕೆ ಮಾಡಿಕೊಳ್ಳಬೇಕು ಜತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನ ನೆನೆಯುವುದು ಎಷ್ಟು ಮುಖ್ಯ ಎಂಬುದನ್ನ ತಿಳಿಸಿ ಜಾಗೃತಿ ಮೂಡಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ಒಟ್ಟಾರೆಯಾಗಿ ಪ್ರೇಮಕವಿ ಕೆ‌.ಕಲ್ಯಾಣ್ ಸ್ವಾತಂತ್ರ್ಯ ಹೋರಾಟಗಾರರಿಗೆ ಪಾದಪೂಜೆ ನೆರವೇರಿಸುವ ಮೂಲಕ ವಿಶಿಷ್ಟವಾಗಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದು ಅವರ ದೇಶಭಕ್ತಿ ದೇಶಪ್ರೇಮ ಕ್ಕೆ ಸಾಕ್ಷಿ ಅಂತಿದ್ದಾರೆ ಅಭಿಮಾನಿಗಳು. ಕೆ‌.ಕಲ್ಯಾಣ ಕಾರ್ಯಕ್ಕೆ ಕುಂದಾನಗರಿ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ: ಸಹದೇವ​ ಮಾನೆ 

ಇದನ್ನೂ ಓದಿ: ಮದುವೆ ಬಗ್ಗೆ ಇರುವ ಕನಸಿನ ಬಗ್ಗೆ ಹೇಳಿಕೊಂಡ ಮಂಜು ಪಾವಗಡ 

Azadi Ka Amrit Mahotsav

ಆಜಾದಿ ಕಿ ಅಮೃತ್​ ಮಹೋತ್ಸವ್​

Published On - 9:18 pm, Mon, 16 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ