Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಬ್ಜ’ ಚಿತ್ರಕ್ಕೆ ಹಾಕಿದ ದುಡ್ಡು ವಾಪಸ್ ಬರೋದು ಯಾವಾಗ? ಎಲ್ಲವನ್ನೂ ವಿವರಿಸಿದ ಚಂದ್ರು

Kabzaa Movie: ‘ಕೆಜಿಎಫ್​ 2’, ‘ಕಾಂತಾರ’ ಮೊದಲಾದ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡಿತ್ತು. ಈಗ ‘ಕಬ್ಜ’ ಕೂಡ ಒಳ್ಳೆಯ ಲಾಭ ಮಾಡುತ್ತಿದೆ.

‘ಕಬ್ಜ’ ಚಿತ್ರಕ್ಕೆ ಹಾಕಿದ ದುಡ್ಡು ವಾಪಸ್ ಬರೋದು ಯಾವಾಗ? ಎಲ್ಲವನ್ನೂ ವಿವರಿಸಿದ ಚಂದ್ರು
ಸುದೀಪ್​, ಉಪೇಂದ್ರ, ಶಿವಣ್ಣ
Follow us
ರಾಜೇಶ್ ದುಗ್ಗುಮನೆ
|

Updated on: Mar 20, 2023 | 7:15 AM

ನಿರ್ದೇಶಕ ಆರ್​. ಚಂದ್ರು (R Chandru) ಅವರು ‘ಕಬ್ಜ’ ಮೂಲಕ ನಿರ್ಮಾಪಕನಾಗಿ, ನಿರ್ದೇಶಕನಾಗಿ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಎರಡೇ ದಿನಕ್ಕೆ ಸಿನಿಮಾ 100 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಭಾನುವಾರದ (ಮಾರ್ಚ್ 19) ಕಲೆಕ್ಷನ್ ಎಷ್ಟಾಗಲಿದೆ ಅನ್ನೋದು ಸದ್ಯದ ಕುತೂಹಲ. ‘ಕಬ್ಜ’ (Kabzaa Movie) ತಂಡ ಭಾನುವಾರ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಈ ವೇಳೆ ಆರ್​. ಚಂದ್ರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದ ಬಿಸ್ನೆಸ್ ಕುರಿತು ಅವರು ಹೇಳಿಕೊಂಡಿದ್ದಾರೆ.

‘ಕೆಜಿಎಫ್​ 2’, ‘ಕಾಂತಾರ’ ಮೊದಲಾದ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡಿತ್ತು. ಈಗ ‘ಕಬ್ಜ’ ಕೂಡ ಒಳ್ಳೆಯ ಲಾಭ ಮಾಡುತ್ತಿದೆ. ಉಪೇಂದ್ರ, ಸುದೀಪ್ ಹಾಗೂ ಶಿವಣ್ಣ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ನೂರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಂಡಿದೆ. ವಿಶೇಷ ಎಂದರೆ ಸಿನಿಮಾ ರಿಲೀಸ್​ಗೂ ಮೊದಲೇ ಆರ್​. ಚಂದ್ರು ಸಿನಿಮಾ ಲಾಭದಲ್ಲಿದೆ. ಈ ಮಾತನ್ನು ಅವರು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕಬ್ಜ ಸಿನಿಮಾದ ಚಿತ್ರೀಕರಣದ ಸಂದರ್ಭ ಎದುರಾದ ಕಷ್ಟಗಳ ನೆನೆದು ಕಣ್ಣೀರು ಹಾಕಿದ ಆರ್.ಚಂದ್ರು

ಕಲರ್ಸ್ ಕನ್ನಡ ವಾಹಿನಿ ‘ಕಬ್ಜ’ ಟಿವಿ ಹಕ್ಕನ್ನು ಪಡೆದುಕೊಂಡಿದೆ. ಒಟಿಟಿ ವೇದಿಕೆ ಅಮೇಜಾನ್ ಪ್ರೈಮ್ ವಿಡಿಯೋ ‘ಕಬ್ಜ’ ಪ್ರಸಾರ ಹಕ್ಕನ್ನು ಖರೀದಿಸಿದೆ. ಖರೀದಿ ಮಾಡುವುದಕ್ಕೂ ಮೊದಲು ‘ಕಬ್ಜ’ ಚಿತ್ರವನ್ನು ಅವರುಗಳು ನೋಡಿದ್ದಾರೆ. ಈ ಕಾರಣಕ್ಕೆ ದೊಡ್ಡ ಮೊತ್ತಕ್ಕೆ ಸಿನಿಮಾ ಖರೀದಿ ಮಾಡಿದ್ದಾರಂತೆ.

ಇದನ್ನೂ ಓದಿ: Kabzaa Collection: 100 ಕೋಟಿ ರೂಪಾಯಿ ಬಾಚಿದ ‘ಕಬ್ಜ’; 2ನೇ ದಿನಕ್ಕೆ ಕಮಾಲ್​ ಮಾಡಿದ ಉಪ್ಪಿ-ಆರ್​. ಚಂದ್ರು ಸಿನಿಮಾ

‘ಥಿಯೇಟರ್ ಮಾಲೀಕರು ಮುಂಚೆ ಹಣ ಕೊಟ್ಟು ಸಿನಿಮಾ ತೆಗೆದುಕೊಂಡು ಹೋಗಿದ್ದಾರೆ. ಇನ್ನು, ಟಿವಿ ಹಾಗೂ ಒಟಿಟಿಯವರಿಗೆ ಮೊದಲೇ ಸಿನಿಮಾ ತೋರಿಸಿ ಇದು ನನ್ನ ಚಿತ್ರ ಎಂದಿದ್ದೆ. ಅವರು ಒಳ್ಳೆಯ ಬೆಲೆಕೊಟ್ಟು ಸಿನಿಮಾ ಖರೀದಿ ಮಾಡಿದ್ದಾರೆ. ನಾನು ಹಾಕಿರುವ ಹಣಕ್ಕೆ ಅವತ್ತೇ ಗೆದ್ದೆ. ಹೂಡಿಕೆ ಮಾಡಿರುವ ಹಣ ಬಂದಿದೆ’ ಎಂದಿದ್ದಾರೆ ಆರ್​. ಚಂದ್ರು. ಈ ಮೂಲಕ ಕಲೆಕ್ಷನ್ ಮೂಲಕ ಬರುವ ಹಣವೆಲ್ಲವೂ ಲಾಭ ಎಂದಿದ್ದಾರೆ ನಿರ್ದೇಶಕರು.

ಇದನ್ನೂ ಓದಿ: Kabzaa Movie: ‘ಕಬ್ಜ’ ಚಿತ್ರದ ಕಲೆಕ್ಷನ್ ಯಾವ ಭಾಷೆಯಲ್ಲಿ ಎಷ್ಟೆಷ್ಟು? ಇಲ್ಲಿದೆ ಪೂರ್ತಿ ವಿವರ  

‘ಕಬ್ಜ’ ಯಶಸ್ಸು ಕನ್ನಡ ಚಿತ್ರರಂಗಕ್ಕೆ ದೊಡ್ಡ ಬೂಸ್ಟ್ ನೀಡಿದೆ. ಈ ಚಿತ್ರದಲ್ಲಿ ದೊಡ್ಡ ಪಾತ್ರವರ್ಗ ಇದೆ. ಸಿನಿಮಾದ ಮೇಕಿಂಗ್, ಬಿಜಿಎಂ, ಮಲ್ಟಿ ಸ್ಟಾರರ್ ಸಿನಿಮಾ ಎಂಬಿತ್ಯಾದಿ ವಿಚಾರಗಳು ಚಿತ್ರಕ್ಕೆ ಸಹಾಯ ಮಾಡಿದೆ. ಉಪೇಂದ್ರ, ಸುದೀಪ್ ಹಾಗೂ ಶಿವಣ್ಣ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ.

ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!