AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಡಲ ತೀರದ ಭಾ​ರ್ಗವ’ ಚಿತ್ರದ ಮೊದಲ ಟಿಕೆಟ್​ 2 ಲಕ್ಷ ರೂ.ಗೆ ಹರಾಜು; ಒಳ್ಳೇ ಕೆಲಸಕ್ಕೆ ಈ ಹಣ ಬಳಕೆ

Kadala Theerada Bhargava: ಮಾರ್ಚ್​ 3ರಂದು ‘ಕಡಲ ತೀರದ ಭಾರ್ಗವ’ ಚಿತ್ರ ರಿಲೀಸ್​ ಆಗಲಿದೆ. ಭಾರಿ ಮೊತ್ತಕ್ಕೆ ಮೊದಲ ಟಿಕೆಟ್​ ಹರಾಜಾಗಿದ್ದಕ್ಕೆ ನಿರ್ಮಾಪಕರಾದ ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ಸಂತೋಷ ವ್ಯಕ್ತಪಡಿಸಿದ್ದಾರೆ.

‘ಕಡಲ ತೀರದ ಭಾ​ರ್ಗವ’ ಚಿತ್ರದ ಮೊದಲ ಟಿಕೆಟ್​ 2 ಲಕ್ಷ ರೂ.ಗೆ ಹರಾಜು; ಒಳ್ಳೇ ಕೆಲಸಕ್ಕೆ ಈ ಹಣ ಬಳಕೆ
‘ಕಡಲ ತೀರದ ಭಾರ್ಗವ’ ಸುದ್ದಿಗೋಷ್ಠಿ
Follow us
ಮದನ್​ ಕುಮಾರ್​
|

Updated on:Feb 14, 2023 | 5:49 PM

ಸಸ್ಪೆನ್ಸ್​, ಲವ್​, ಆ್ಯಕ್ಷನ್​ ಮುಂತಾದ ಅಂಶಗಳನ್ನು ಹೊಂದಿರುವ ‘ಕಡಲ ತೀರದ ಭಾರ್ಗವ’ (Kadala Theerada Bhargava) ಸಿನಿಮಾ ಈಗ ಬಿಡುಗಡೆ ಸಜ್ಜಾಗಿದೆ. ಈಗಾಗಲೇ ಹಾಡು ಮತ್ತು ಟ್ರೇಲರ್​ ಮೂಲಕ ಈ ಚಿತ್ರ ಗಮನ ಸೆಳೆದಿದೆ. ಇನ್ನೊಂದು ವಿಶೇಷ ಏನೆಂದರೆ, ಈ ಸಿನಿಮಾದ ಮೊದಲ ಟಿಕೆಟ್​ (Movie Ticket) ಬರೋಬ್ಬರಿ 2 ಲಕ್ಷ ರೂಪಾಯಿಗೆ ಹರಾಜಾಗಿದೆ. ಈ ಪ್ರಸಂಗ ನಡೆದಿದ್ದು ಸುದ್ದಿಗೋಷ್ಠಿಯಲ್ಲಿ. ಇತ್ತೀಚೆಗೆ ಇದರ ಟ್ರೇಲರ್​ ಬಿಡುಗಡೆ ಸಮಾರಂಭ ನಡೆಯಿತು. ಮಾಜಿ ಉಪ ಮಹಾಪೌರರಾದ ಮೋಹನ್ ರಾಜು, ‘ನೀರ್ ದೋಸೆ’ ಖ್ಯಾತಿಯ ನಿರ್ಮಾಪಕ ಪ್ರಸನ್ನ ಹಾಗೂ ‘ಗಜಾನನ ಗ್ಯಾಂಗ್’ ಚಿತ್ರದ ನಿರ್ಮಾಪಕ ನಾಗೇಶ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ವೇಳೆ ಮೋಹನ್ ರಾಜು ಅವರು ಈ ಸಿನಿಮಾದ ಮೊದಲ ಟಿಕೆಟ್​ ಅನ್ನು ಎರಡು ಲಕ್ಷ ರೂಪಾಯಿಗೆ ಹರಾಜಿನಲ್ಲಿ ಪಡೆದುಕೊಂಡು ಅಚ್ಚರಿ ಮೂಡಿಸಿದರು.

ಈ ರೀತಿ ಭಾರಿ ಮೊತ್ತಕ್ಕೆ ಮೊದಲ ಟಿಕೆಟ್​ ಹರಾಜಾಗಿದ್ದಕ್ಕೆ ನಿರ್ಮಾಪಕರಾದ ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಹಣವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡುವುದಾಗಿ ತಿಳಿಸಿದ್ದಾರೆ. ಮಾರ್ಚ್​ 3ರಂದು ‘ಕಡಲ ತೀರದ ಭಾರ್ಗವ’ ಸಿನಿಮಾ ರಿಲೀಸ್​ ಆಗಲಿದೆ. ಈ ಚಿತ್ರಕ್ಕೆ ಪನ್ನಗ ಸೋಮಶೇಖರ್ ನಿರ್ದೇಶನ ಮಾಡಿದ್ದಾರೆ. ‘ಇದು ಹಿರಿಯ ಸಾಹಿತಿ ಶಿವರಾಮ ಕಾರಂತರ ಜೀವನ್ನಾಧಾರಿತ ಚಿತ್ರವಲ್ಲ. ಕಡಲ ತೀರದಲ್ಲಿ ವಾಸಿಸುವ ನಮ್ಮ ನಾಯಕನ ಹೆಸರು ಭಾರ್ಗವ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Chaos movie: ‘ಖೆಯೊಸ್​’ ಚಿತ್ರದಲ್ಲಿ ಪುತ್ರ ಅಕ್ಷಿತ್ ಜತೆ ಮೊದಲ ಬಾರಿ ಬಣ್ಣ ಹಚ್ಚಿದ ನಟ ಶಶಿಕುಮಾರ್​; ಫೆ.17ಕ್ಕೆ ರಿಲೀಸ್​

ಇದನ್ನೂ ಓದಿ
Image
‘ಲಕ್ಕಿ ಮ್ಯಾನ್​​ ಸಿನಿಮಾವನ್ನು ಎಲ್ಲರೂ ತಬ್ಬಿಕೊಳ್ಳಿ,​ ಮತ್ತೆ ಬೇಕು ಅಂದ್ರೂ ಇದು ಸಿಗಲ್ಲ’; ಕಿಚ್ಚ ಸುದೀಪ್​
Image
ಮುಖ ತೋರಿಸದೇ ಫೇಮಸ್​ ಆದ ಭಾಸ್ಕರ್​; ಕಿಚ್ಚ ಸುದೀಪ್​ ಬದುಕಿನಲ್ಲೂ ಇದ್ದಾನೆ ಅಂಥ ಒಬ್ಬ ವ್ಯಕ್ತಿ
Image
‘ವಿಕ್ರಾಂತ್​ ರೋಣ’ ಸೂಪರ್​ ಹಿಟ್​; ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ‘ಕಬ್ಜ’ ಮೇಲೆ ಹೆಚ್ಚಿತು ನಿರೀಕ್ಷೆ
Image
Vikrant Rona: ದೆಹಲಿಯಲ್ಲಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ ಕಿಚ್ಚ ಸುದೀಪ್​; ಇಲ್ಲಿವೆ ಫೋಟೋಗಳು

ಮೊದಲ ಟಿಕೆಟ್​ ಪಡೆದ ಮೋಹನ್ ರಾಜು ಅವರು ‘ಕಡಲ ತೀರದ ಭಾರ್ಗವ’ ಚಿತ್ರಕ್ಕೆ ಶುಭ ಕೋರಿದ್ದಾರೆ. ‘ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಗೆಲ್ಲುತ್ತಿವೆ. ಅದರಲ್ಲೂ ‘ಕ’ ಅಕ್ಷರದಿಂದ ಆರಂಭವಾಗುವ ‘ಕೆಜಿಎಫ್’, ‘ಕಾಂತಾರ’ ಚಿತ್ರಗಳು ಯಶಸ್ಸು ಕಂಡಿವೆ. ಹಾಗೆಯೇ ‘ಕಡಲ ತೀರದ ಭಾರ್ಗವ’ ಕೂಡ ಭರ್ಜರಿ ಗೆಲುವು ಪಡೆಯಲಿ’ ಎಂದು ಅವರು ವಿಶ್​ ಮಾಡಿದ್ದಾರೆ.

ಭರತ್​ ಗೌಡ, ಪಟೇಲ್​ ವರುಣ್​ ರಾಜು​ ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ನಾಯಕಿಯಾಗಿ ಶ್ರುತಿ ಪ್ರಕಾಶ್​ ಅಭಿನಯಿಸಿದ್ದಾರೆ. ‘ಚಿತ್ರದಲ್ಲಿ ಕಡಲ ತೀರದಲ್ಲಿ ವಾಸಿಸುವ ಭಾರ್ಗವನಾಗಿ ನಾನು ನಟಿಸಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮಗೆ ಸಹಕಾರ ‌ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದಿದ್ದಾರೆ ನಟ, ನಿರ್ಮಾಪಕ ಪಟೇಲ್ ವರುಣ್ ರಾಜು. ಹಾಡು ಮತ್ತು ಟ್ರೇಲರ್​ಗೆ ಸಿಕ್ಕ ಪ್ರತಿಕ್ರಿಯೆ ಕಂಡು ಭರತ್ ಗೌಡ ಖುಷಿಯಾಗಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:49 pm, Tue, 14 February 23

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ