Divya Uruduga: ಮಾಸ್ಕ್ ಹಾಕಿ ಸಾಗರ ಜಾತ್ರೆ ಸುತ್ತಾಡಿದ ದಿವ್ಯಾ ಉರುಡುಗ; ಫ್ಯಾನ್ಸ್ ಗುರುತಿಸಿದ್ರಾ?
ದಿವ್ಯಾ ಉರುಡುಗ ಅವರು ಸಾಗರದ ಜಾತ್ರೆಗೆ ತೆರಳಿದ್ದಾರೆ. ಈ ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದಿವ್ಯಾ ಉರುಡುಗ (Divya Uruduga) ಅವರು ಎರಡು ಬಾರಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಿ ಬಂದಿದ್ದಾರೆ. ಅವರು ಸ್ಪರ್ಧೆ ಮಾಡಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಕಳೆದ ವರ್ಷಾಂತ್ಯಕ್ಕೆ ಪೂರ್ಣಗೊಂಡಿದೆ. ‘ಬಿಗ್ ಬಾಸ್’ನಿಂದ ದಿವ್ಯಾ ಉರುಡುಗ ಖ್ಯಾತಿ ಹೆಚ್ಚಿದೆ. ಈಗ ದಿವ್ಯಾ ಉರುಡುಗ ಅವರು ಸಾಗರದ ಜಾತ್ರೆಯಲ್ಲಿ ಮಾಸ್ಕ್ ಹಾಕಿ ಸುತ್ತಾಡಿದ್ದಾರೆ. ಈ ವಿಡಿಯೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ದಿವ್ಯಾ ಉರುಡುಗ ಅವರು ತೀರ್ಥಹಳ್ಳಿಯವರು. ಅವರಿಗೆ ಊರಿನ ಬಗ್ಗೆ ಸಾಕಷ್ಟು ಪ್ರೀತಿ ಇದೆ. ಅನೇಕ ಬಾರಿ ಇದನ್ನು ಅವರು ಹೇಳಿಕೊಂಡಿದ್ದಿದೆ. ಈಗ ದಿವ್ಯಾ ಉರುಡುಗ ಅವರು ಸಾಗರದ ಜಾತ್ರೆಗೆ ತೆರಳಿದ್ದಾರೆ. ಈ ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕಂಡರೆ ಮುತ್ತಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಮಾಸ್ಕ್ ಹಾಕಿ ಅವರು ಓಡಾಡಿದ್ದಾರೆ. ಹೀಗಾಗಿ, ಅವರನ್ನು ಗುರುತಿಸೋದು ಕಷ್ಟವಾಗಿದೆ.
ದಿವ್ಯಾ ಉರುಡುಗ ಹಂಚಿಕೊಂಡಿರುವ ರೀಲ್ಸ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ‘ನಾನು ಜಾತ್ರೆಯಲ್ಲಿದ್ದರೂ ನಿಮ್ಮನ್ನು ಗುರುತಿಸೋಕೆ ಸಾಧ್ಯವಾಗಲಿಲ್ಲವಲ್ಲ’ ಎಂದಿದ್ದಾರೆ. ಇನ್ನೂ ಕೆಲವರು ‘ಅರವಿಂದ್ ಕೆಪಿ ಬಂದಿಲ್ಲವೇ, ಅವರಿಗೂ ಜಾತ್ರೆ ತೋರಿಸಬಹುದಿತ್ತು’ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
View this post on Instagram
ದಿವ್ಯಾ ಉರುಡುಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಮೊದಲ ಬಾರಿಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಅಲ್ಲಿ ಬೈಕರ್ ಅರವಿಂದ್ ಕೆಪಿ ಪರಿಚಯ ಅವರಿಗೆ ಆಯಿತು. ಇಬ್ಬರೂ ಪರಸ್ಪರ ಪ್ರೀತಿಸೋಕೆ ಆರಂಭಿಸಿದರು. ಈ ಕಾರಣಕ್ಕೂ ಅವರು ಹೆಚ್ಚು ಗಮನ ಸೆಳೆದರು. ಎಂಟನೇ ಸೀಸನ್ನಲ್ಲಿ ಅವರು ಎರಡನೇ ರನ್ನರ್ ಅಪ್ ಆದರು. ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲೂ ದಿವ್ಯಾ ಸ್ಪರ್ಧೆ ಮಾಡಿದ್ದರು. ಅರವಿಂದ್ ಇಲ್ಲ ಎನ್ನುವ ಕಾರಣಕ್ಕೆ ಅವರು ಕೊಂಚ ಡಲ್ ಆದರು. ಆದರೆ, ಕೊನೆಯಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದರು. 9ನೇ ಸೀಸನ್ನಲ್ಲಿ ದಿವ್ಯಾ ಉರುಡುಗ ಅವರು ನಾಲ್ಕನೇ ರನ್ನರ್ ಅಪ್ ಆದರು.
View this post on Instagram
ಇದನ್ನೂ ಓದಿ:Divya Uruduga: ಅರವಿಂದ್ ಕೆಪಿ ಜನ್ಮದಿನಕ್ಕಾಗಿ ದಿವ್ಯಾ ಉರುಡುಗ ವಿಶೇಷ ಸಾಲುಗಳು; ಇಲ್ಲಿದೆ ಆ ಕವಿತೆ
ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ‘ಅರ್ದಂ ಬರ್ಧ ಪ್ರೇಮ ಕಥೆ’ ಎಂದು ಈ ಚಿತ್ರಕ್ಕೆ ಟೈಟಲ್ ಇಡಲಾಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:45 am, Tue, 14 February 23