ಒಟಿಟಿ ರಿಲೀಸ್ ದಿನಾಂಕ ಘೋಷಿಸಿದ ಬಳಿಕವೂ ಕೋಟಿ ಕೋಟಿ ಬಾಚಿದ ‘ಕಾಂತಾರ: ಚಾಪ್ಟರ್ 1’

'ಕಾಂತಾರ: ಚಾಪ್ಟರ್ 1' ಸಿನಿಮಾ ಒಟಿಟಿ ರಿಲೀಸ್ ದಿನಾಂಕ ಘೋಷಣೆಯಾದ ನಂತರವೂ ಅಸಾಧಾರಣ ಬಾಕ್ಸ್ ಆಫೀಸ್ ಗಳಿಕೆ ಕಂಡಿದೆ. ಅಕ್ಟೋಬರ್ 31ಕ್ಕೆ ಅಮೇಜಾನ್ ಪ್ರೈಮ್‌ಗೆ ಬರುತ್ತಿದ್ದರೂ, ಚಿತ್ರವು ಕೋಟಿಗಟ್ಟಲೆ ಹಣವನ್ನು ಗಳಿಸುತ್ತಲೇ ಇದೆ. ಸಾಮಾನ್ಯವಾಗಿ ಒಟಿಟಿ ಸುದ್ದಿ ಕಲೆಕ್ಷನ್ ಕಡಿಮೆ ಮಾಡುತ್ತದೆ, ಆದರೆ ಈ ಸಿನಿಮಾ ಇದಕ್ಕೆ ಹೊರತಾಗಿದೆ.

ಒಟಿಟಿ ರಿಲೀಸ್ ದಿನಾಂಕ ಘೋಷಿಸಿದ ಬಳಿಕವೂ ಕೋಟಿ ಕೋಟಿ ಬಾಚಿದ ‘ಕಾಂತಾರ: ಚಾಪ್ಟರ್ 1’
ಕಾಂತಾರ

Updated on: Oct 29, 2025 | 11:44 AM

‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಈ ಚಿತ್ರ ಅಕ್ಟೋಬರ್ 31ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಕಾಣಲಿದೆ. ಸಾಮಾನ್ಯವಾಗಿ ಸಿನಿಮಾ ಒಟಿಟಿಗೆ ಬರುತ್ತದೆ ಎಂಬ ಸಣ್ಣ ಸುಳಿವು ಸಿಕ್ಕರೂ ಕಲೆಕ್ಷನ್ ತಗ್ಗಿ ಬಿಡುತ್ತದೆ. ಈ ಕಾರಣಕ್ಕೆ ತಂಡದವರು ಒಟಿಟಿ ರಿಲೀಸ್ ವಿಚಾರದಲ್ಲಿ ಹೆಚ್ಚು ಮೌನ ವಹಿಸುತ್ತಾರೆ. ಆದರೆ, ‘ಕಾಂತಾರ: ಚಾಪ್ಟರ್ 1’ ವಿಚಾರದಲ್ಲಿ ಆ ರೀತಿ ಆಗಿಲ್ಲ. ಈ ಚಿತ್ರ ನಾಲ್ಕನೇ ಮಂಗಳವಾರ (ಅಕ್ಟೋಬರ್ 28) ಒಳ್ಳೆಯ ಕಲೆಕ್ಷನ್ ಮಾಡಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್ ಆಗಿದ್ದು ಅಕ್ಟೋಬರ್ 2ರಂದು. ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೀಗಾಗಿ, ಸಿನಿಮಾ ಸದ್ಯಕ್ಕಂತೂ ಚಿತ್ರ ಒಟಿಟಿಗೆ ಬರೋದಿಲ್ಲ ಎಂಬುದು ಎಲ್ಲರ ಊಹೆ ಆಗಿತ್ತು. ಆದರೆ, ಈ ಲೆಕ್ಕಾಚಾರ ತಲೆಕೆಳಗಾಗಿದೆ. ಅಮೇಜಾನ್ ಪ್ರೈಮ್ ವಿಡಿಯೋ ಜೊತೆ ಹೊಂಬಾಳೆ ಫಿಲ್ಮ್ಸ್ ಮಾಡಿದ ಒಪ್ಪಂದದ ಕಾರಣಕ್ಕೆ ಸಿನಿಮಾ ಕೇವಲ ಒಂದೇ ತಿಂಗಳಿಗೆ ಒಟಿಟಿಗೆ ಬರುತ್ತಿದೆ.

‘ಕಾಂತಾರ: ಚಾಪ್ಟರ್ 1’ ಚಿತ್ರ ಒಟಿಟಿಗೆ ಬರಲಿದೆ ಎಂದು ಅಕ್ಟೋಬರ್ 27ರಂದು ಘೋಷಣೆ ಮಾಡಲಾಯಿತು. ಅಕ್ಟೋಬರ್ 27ರಂದು ಸಿನಿಮಾ 3.25 ಕೋಟಿ ರೂಪಾಯಿ ಹಾಗೂ ಅಕ್ಟೋಬರ್ 28ರಂದು 3.65 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಲ್ಲಿ ಸಿಂಹ ಪಾಲು ಹಿಂದಿ ಭಾಷೆಯಿಂದ ಬಂದಿದೆ.

ಇದನ್ನೂ ಓದಿ
ಸಾಯುವುದಕ್ಕೂ ಸರಿಯಾಗಿ ಒಂದು ವರ್ಷ ಮೊದಲು ಅಪ್ಪು ಮಾಡಿದ ಒಳ್ಳೆಯ ಕೆಲಸ ನೋಡಿ
ಪುನೀತ್ ಪುಣ್ಯಸ್ಮರಣೆ; 4 ವರ್ಷಗಳ ಹಿಂದೆ ನಿಜಕ್ಕೂ ನಡೆದಿದ್ದೇನು?
Shocking News: ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದ ಮಲ್ಲಮ್ಮ
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ

‘ಕಾಂತಾರ: ಚಾಪ್ಟರ್ 1’ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ 900 ಕೋಟಿ ರೂಪಾಯಿ ಸಮೀಪಿಸಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಸಾವಿರ ಕೋಟಿ ರೂಪಾಯಿ ಆಗಲಿದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ, ಅದು ನಿಜವಾಗುವ ಲಕ್ಷಣ ಕಾಣುತ್ತಿಲ್ಲ. ಸಿನಿಮಾ ಒಟಿಟಿಗೆ ಕಾಲಿಟ್ಟ ಬಳಿಕ ಚಿತ್ರದ ಗಳಿಕೆ ಮತ್ತಷ್ಟು ತಗ್ಗಲಿದೆ.

ಇದನ್ನೂ ಓದಿ: ಸಾವಿರ ಕೋಟಿ ತಲುಪಲ್ಲ ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್; ದೊಡ್ಡ ಕನಸು ಭಗ್ನ

‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ರಿಷಬ್ ಶೆಟ್ಟಿ ನಿರ್ದೇಶನ ಇದೆ. ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾದ ಹಾಡುಗಳು ಗಮನ ಸೆಳೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.