ಕನ್ನಡ, ಮರಾಠಿ, ಹಿಂದಿ ಭಾಷೆಯಲ್ಲಿ ಮೇಘಾ ಶೆಟ್ಟಿ ಸಿನಿಮಾ ‘ಆಪರೇಷನ್ ಲಂಡನ್ ಕೆಫೆ’
ಭಿನ್ನ ಶೀರ್ಷಿಕೆಯ ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದ ಬಿಡುಗಡೆ ದಿನಾಂಕವನ್ನು ತಿಳಿಸಲಾಗಿದೆ. ನಟಿ ಮೇಘಾ ಶೆಟ್ಟಿ ಹಾಗೂ ನಟ ಕವೀಶ್ ಶೆಟ್ಟಿ ಅಭಿನಯಿಸಿರುವ ಮೂರು ಭಾಷೆಯ ಸಿನಿಮಾ ಇದು. ಕನ್ನಡ ಚಿತ್ರರಂಗ ಮತ್ತು ಮರಾಠಿ ಚಿತ್ರತಂಗದ ಹೆಸರಾಂತ ಕಲಾವಿದರ ಸಂಗಮ ಈ ಸಿನಿಮಾದಲ್ಲಿ ಆಗಿದೆ.

ನವೆಂಬರ್ 28ರಂದು ಓ.ಎಲ್.ಸಿ (ಆಪರೇಷನ್ ಲಂಡನ್ ಕೆಫೆ) ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ರಿಲೀಸ್ಗೆ ಕೌಂಟ್ಡೌನ್ ಶುರು ಆಗಿದ್ದು, ಸಿನಿಪ್ರಿಯರಲ್ಲಿ ಕೂತುಕ ಮೂಡಿಸಿದೆ. ಮೇಘಾ ಶೆಟ್ಟಿ (Megha Shetty), ಕವೀಶ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಸಿನಿಪ್ರಿಯರು ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಆಪರೇಷನ್ ಲಂಡನ್ ಕೆಫೆ’ (Operation London Cafe) ಚಿತ್ರತಂಡ ಪೋಸ್ಟರ್ ಬಿಡುಗಡೆ ಮೂಲಕ ರಿಲೀಸ್ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಸಿನಿಮಾ ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿರುವುದು ವಿಶೇಷ.
‘ಆಪರೇಷನ್ ಲಂಡನ್ ಕೆಫೆ’ ಸಿನಿಮಾವನ್ನು ಉಡುಪಿ ಮೂಲದ ‘ಇಂಡಿಯನ್ ಫಿಲ್ಮ್ ಫ್ಯಾಕ್ಟರಿ’, ಮರಾಠಿಯ ‘ದೀಪಕ್ ರಾಣೆ ಫಿಲ್ಮ್ಸ್’ ಮೂಲಕ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಹಾಗೂ ವಿಜಯ್ ಪ್ರಕಾಶ್ ಅವರು ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲೇ ಮಾಸ್ ಮತ್ತು ಮೆಲೋಡಿ ಹಾಡುಗಳು ಜೊತೆಗೆ ಟ್ರೇಲರ್ ಬಿಡುಗಡೆ ಮಾಡಲಿರುವುದಾಗಿ ಚಿತ್ರತಂಡ ತಿಳಿಸಿದೆ.
ನಟ ಕವೀಶ್ ಶೆಟ್ಟಿ ಅವರು ಈ ಮೊದಲು ‘ಜಿಲ್ಕಾ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಅವರು ಲವರ್ ಕಮ್ ಚಾಕಲೇಟ್ ಬಾಯ್ ಆಗಿ ಗಮನ ಸೆಳೆದಿದ್ದರು. ಈಗ ಅವರು ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದ ಮೂಲಕ ಮಾಸ್ ಕಮ್ ಆ್ಯಕ್ಷನ್ ಹೀರೋ ಆಗುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ.
‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದಲ್ಲಿ ಮೇಘಾ ಶೆಟ್ಟಿ ಅವರ ಗೆಟಪ್ ಗಮನ ಸೆಳೆಯುತ್ತಿದೆ. ಅಪ್ಪಟ ಹಳ್ಳಿ ಸೊಗಡಿನ ಹೈಸ್ಕೂಲು ಹುಡುಗಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಖಡಕ್ ಲುಕ್ ಮೂಲಕ ಮರಾಠಿಯ ಶಿವಾನಿ ಸುರ್ವೆ, ವಿರಾಟ್ ಮಡ್ಕೆ ಅವರು ಅಭಿನಯಿಸಿದ್ದಾರೆ. ಅರ್ಜುನ್ ಕಾಪಿಕಾಡ್ ಅವರು ಆರ್ಮಿ ಆಫೀಸರ್ ಪಾತ್ರವನ್ನು ಮಾಡಿದ್ದಾರೆ.
ಇದನ್ನೂ ಓದಿ: ಮೇಘಾ ಶೆಟ್ಟಿ ಮನೆಯಲ್ಲಿ ದೀಪಾವಳಿ ಸಂಭ್ರಮ ಹೇಗಿತ್ತು ನೋಡಿ
ಈ ಸಿನಿಮಾಗೆ ಸಡಗರ ರಾಘವೇಂದ್ರ ಅವರು ನಿರ್ದೇಶನ ಮಾಡಿದ್ದಾರೆ. ಬಿ. ಸುರೇಶ್, ಕೃಷ್ಣ ಹೆಬ್ಬಾಳೆ, ಧರ್ಮೇಂದ್ರ ಅರಸ್, ನೀನಾಸಂ ಅಶ್ವತ್ಥ್, ಅಶ್ವಿನಿ ಚವೇರಾ ಮುಂತಾದ ಕಲಾವಿದರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಆರ್. ಡಿ. ನಾಗಾರ್ಜುನ್ ಛಾಯಾಗ್ರಹಣ ಮಾಡಿದ್ದಾರೆ. ಪ್ರಾಂಶು ಝಾ ಸಂಗೀತ ನೀಡಿದ್ದಾರೆ. ವರದರಾಜ್ ಕಾಮತ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ. ವಿಕ್ರಂ ಮೋರ್, ಮಾಸ್ ಮಾದ, ಅರ್ಜುನ್ ರಾಜ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




