‘ಕಾಂತಾರ’ ಚಿತ್ರದ ಕೋಣಕ್ಕೆ ಇರೋ ಸವಲತ್ತು ಒಂದೆರಡಲ್ಲ; ಇವನ್ನು ಸಾಕೋ ವಿಧಾನವೇ ಬೇರೆ

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಲ್ಲಿ ಕೋಣಗಳನ್ನು ಓಡಿಸಿದ್ದಾರೆ. ಅವರಿಗೆ ಮೊದಲು ಈ ಅನುಭವ ಇರಲಿಲ್ಲ. ಸಾಕಷ್ಟು ಕಷ್ಟಪಟ್ಟು ಇದನ್ನು ಕಲಿತಿದ್ದಾರೆ ಅವರು. ಸಿನಿಮಾದಲ್ಲಿ ಆ ದೃಶ್ಯಗಳು ಮೈನವರೇಳಿಸುವಂತಿದೆ.

‘ಕಾಂತಾರ’ ಚಿತ್ರದ ಕೋಣಕ್ಕೆ ಇರೋ ಸವಲತ್ತು ಒಂದೆರಡಲ್ಲ; ಇವನ್ನು ಸಾಕೋ ವಿಧಾನವೇ ಬೇರೆ
Follow us
ರಾಜೇಶ್ ದುಗ್ಗುಮನೆ
|

Updated on: Nov 27, 2023 | 1:11 PM

‘ಕಾಂತಾರ’ ಚಿತ್ರದಲ್ಲಿ ಕಂಬಳದ ದೃಶ್ಯ ಬರುತ್ತದೆ. ಇದರಲ್ಲಿ ರಿಷಬ್ ಶೆಟ್ಟಿ (Rishab Shetty) ಅವರು ಕೋಣ ಓಡಿಸಿದ್ದರು. ಅದೇ ಕೋಣಗಳು ಬೆಂಗಳೂರಿಗೆ ಬಂದಿದ್ದವು. ಬೆಂಗಳೂರಿನಲ್ಲಿ ಇತ್ತೀಚೆಗೆ ಕಂಬಳ ನಡೆದಿತ್ತು. ಈ ಕಂಬಳದಲ್ಲಿ ‘ಕಾಂತಾರ’ ಕೋಣಗಳು ಭಾಗವಹಿಸಿ ಜಯಭೇರಿ ಬಾರಿಸಿವೆ. ಈ ಕೋಣಗಳನ್ನು ಓಡಿಸಿದವರು ಟಿವಿ 9 ಕನ್ನಡದ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ಕೋಣಗಳನ್ನು ಸಾಕೋದು ಅಷ್ಟು ಸುಲಭದಲ್ಲಿ ಇಲ್ಲ ಎಂಬುದು ಅವರ ಮಾತು.

ಕನಹಲಗೆಯ ಕಂಬಳ ವಿಭಾಗದಲ್ಲಿ ಬೋಳಂಬಳ್ಳಿ ಪರಮೇಶ್ವರ್ ಭಟ್ ಮಾಲೀಕತ್ವದ ಕೋಣಗಳು ವಿಜಯ ಸಾಧಿಸಿವೆ. ಈ ಮೂಲಕ ಚಿನ್ನದ ಪದಕ ಗೆದ್ದಿವೆ. ಇವುಗಳನ್ನು ಓಡಿಸಿದವರು ಕೋಣದ ವಿಶೇಷತೆ ಕುರಿತು ಮಾತನಾಡಿದ್ದಾರೆ. ಈ ಕೋಣಗಳಿಗೆ ಕಿಟ್ಟು-ಅಪ್ಪು ಎಂದು ಹೆಸರು ಇಡಲಾಗಿದೆ. ಕಿಟ್ಟುಗೆ 12 ವರ್ಷ ಹಾಗೂ ಅಪ್ಪುಗೆ 10 ವರ್ಷ. ಒಂದು ದಿನಕ್ಕೆ ಪ್ರತಿ ಕೋಣಕ್ಕೆ ಎರಡು ಶೇರು ಹುರಳಿ, 10 ಕಟ್ಟು ಹುಲ್ಲು, ವಾರಕ್ಕೆ ಒಮ್ಮೆ ಎಣ್ಣೆಯ ಸ್ನಾನ ಮಾಡಿಸಲಾಗುತ್ತದೆ. ಈ ಕೋಣಗಳು ಸಾಕಷ್ಟು ವೇಗವಾಗಿ ಓಡಬೇಕು. ಹೀಗಾಗಿ, ಅವುಗಳಿಗೆ ಹೆಚ್ಚಿನ ಆಹಾರದ ಅಗತ್ಯ ಇರುತ್ತದೆ. ಹೀಗಾಗಿ, ಕೋಣಗಳನ್ನು ವಿಶೇಷ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ.

‘ರಿಷಬ್ ಶೆಟ್ಟಿ ನಮ್ಮ ಊರಿನವರೇ. ಕೋಣಗಳನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಂಡರು. ರಿಷಬ್ ಮನೆಯಲ್ಲಿ ಕೋಣಗಳಿದ್ದವು. ಅವರು ಮೊದಲು ಕೋಣಗಳನ್ನು ನೋಡಿದ್ದರಿಂದ ಕಂಬಳ ಓಡಿಸುವುದನ್ನು ಬೇಗ ಕಲಿತರು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ತೆರೆ, ಫೈನಲ್​ನಲ್ಲಿ ಚಿನ್ನ ಬೇಟೆಯಾಡಿದ ಕೋಣಗಳ ವಿವರ ಇಲ್ಲಿದೆ

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಲ್ಲಿ ಕೋಣಗಳನ್ನು ಓಡಿಸಿದ್ದಾರೆ. ಅವರಿಗೆ ಮೊದಲು ಈ ಅನುಭವ ಇರಲಿಲ್ಲ. ಸಾಕಷ್ಟು ಕಷ್ಟಪಟ್ಟು ಇದನ್ನು ಕಲಿತಿದ್ದಾರೆ ಅವರು. ಸಿನಿಮಾದಲ್ಲಿ ಆ ದೃಶ್ಯಗಳು ಮೈನವರೇಳಿಸುವಂತಿದೆ. ‘ಕಾಂತಾರ 2’ ಚಿತ್ರಕ್ಕೆ ಕೋಣಗಳು ಬೇಕಾದರೆ ಪರಮೇಶ್ವರ ಭಟ್ಟರು ಇವುಗಳನ್ನು ಕೊಡಲು ಸಿದ್ಧರಿದ್ದಾರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು