ಅರ್ಜುನ್ ಜನ್ಯ-ಶಿವಣ್ಣ ಸಿನಿಮಾಗೆ ಹೀರೋಯಿನ್ ಸಿಕ್ಕಿದ್ರು? ಕನ್ನಡದ ಕಿರುತೆರೆ ನಟಿಗೆ ಅವಕಾಶ

ಎಡಿಟ್ ಮಾಡದ ಫೋಟೋ ಹಾಗೂ ಪರ್ಫಾರ್ಮೆನ್ಸ್​ನ ಚಿಕ್ಕ ವಿಡಿಯೋ ತುಣುಕನ್ನು ಕಳುಹಿಸಬೇಕು ಎಂದು ಕೋರಲಾಗಿತ್ತು. ಈಗ ಧಾರಾವಾಹಿ ನಟಿಗೆ ಈ ಅದೃಷ್ಟ ಒಲಿದಿದೆ ಎನ್ನಲಾಗುತ್ತಿದೆ.

ಅರ್ಜುನ್ ಜನ್ಯ-ಶಿವಣ್ಣ ಸಿನಿಮಾಗೆ ಹೀರೋಯಿನ್ ಸಿಕ್ಕಿದ್ರು? ಕನ್ನಡದ ಕಿರುತೆರೆ ನಟಿಗೆ ಅವಕಾಶ
Follow us
|

Updated on: Mar 31, 2023 | 7:59 AM

ಸಂಗೀತ ಸಂಯೋಜಕ ಅರ್ಜುನ್ ಜನ್ಯ (Arjun Janya) ಹಾಗೂ ಖ್ಯಾತ ಹೀರೋ ಶಿವರಾಜ್​ಕುಮಾರ್ ಒಟ್ಟಾಗಿ ಸಿನಿಮಾ ಮಾಡುತ್ತಿರುವ ವಿಚಾರ ಗೊತ್ತೇ ಇದೆ. ಉಪೇಂದ್ರ, ರಾಜ್​ ಬಿ. ಶೆಟ್ಟಿ (Raj B Shetty) ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. ಇತ್ತೀಚೆಗಷ್ಟೇ ಹೀರೋಯಿನ್ ಆಯ್ಕೆಗೆ ಆಡಿಷನ್​ಗೆ ಕರೆಯಲಾಗಿತ್ತು. ಮೂಲಗಳ ಪ್ರಕಾರ ಈ ಚಿತ್ರಕ್ಕೆ ನಾಯಕಿಯ ಹೆಸರು ಫೈನಲ್ ಆಗಿದೆ. ಕನ್ನಡ ಧಾರಾವಾಹಿ ನಟಿಯೊಬ್ಬರನ್ನು ಈ ಚಿತ್ರಕ್ಕೆ ಹೀರೋಯಿನ್ ಆಗಿ ಸೆಲೆಕ್ಟ್ ಮಾಡಲಾಗಿದೆ ಎಂದು ವರದಿ ಆಗಿದೆ.

‘ನನ್ನರಸಿ ರಾಧೆ’ ಧಾರಾವಾಹಿ ಖ್ಯಾತಿಯ ಕೌಸ್ತುಭ ಮಣಿ ಅವರು ‘45’ ಚಿತ್ರಕ್ಕೆ ನಾಯಕಿ ಆಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಚಿತ್ರತಂಡದವರು ನಾಯಕಿಯ ಆಯ್ಕೆಗೆ ಹುಡುಕಾಟ ನಡೆಸಿದ್ದರು. ಈ ಸಿನಿಮಾದ ನಾಯಕಿ ಕನ್ನಡದವರೇ ಆಗಿದ್ದರೆ ಉತ್ತಮ ಎನ್ನುವ ಅಭಿಪ್ರಾಯ ಚಿತ್ರತಂಡದವರಿಗೆ ಇತ್ತು. ಎಡಿಟ್ ಮಾಡದ ಫೋಟೋ ಹಾಗೂ ಪರ್ಫಾರ್ಮೆನ್ಸ್​ನ ಚಿಕ್ಕ ವಿಡಿಯೋ ತುಣುಕನ್ನು 45kannadamovie@gmail.comಗೆ ಕಳುಹಿಸಬೇಕು ಎಂದು ಕೋರಲಾಗಿತ್ತು. ಈಗ ಕೌಸ್ತುಭಗೆ ಈ ಅದೃಷ್ಟ ಒಲಿದಿದೆ ಎನ್ನಲಾಗುತ್ತಿದೆ.

‘ಕೋಡಲ್ಲು ಮೀಕು ಜೋಹರ್ಲು’ ಹೆಸರಿನ ತೆಲುಗು ಧಾರಾವಾಹಿಯಲ್ಲಿ ನಟಿ ಕೌಸ್ತುಭ ಮಣಿ ನಟಿಸುತ್ತಿದ್ದಾರೆ.  ‘ರಾಮಾಚಾರಿ 2.0’ ಚಿತ್ರದಲ್ಲೂ ನಾಯಕಿಯಾಗಿ ಕೌಸ್ತುಭ ಮಣಿ ನಟಿಸಿದ್ದಾರೆ. ಈಗ ಅವರಿಗೆ ಸ್ಟಾರ್ ನಟರ ಜೊತೆ ನಟಿಸೋ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: Shiva Rajkumar: ಬರ್ತಿದ್ದಾನೆ ಭೈರತಿ ರಣಗಲ್, ಶಿವಣ್ಣನ ಪ್ಯಾನ್ ಇಂಡಿಯಾ ಸಿನಿಮಾ ಪೋಸ್ಟರ್ ರಿಲೀಸ್

ಶಿವರಾಜ್​ಕುಮಾರ್​ ನಟನೆಯ ‘45’ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳಲಿದೆ. ಈ ಸಿನಿಮಾಗೆ ರಮೇಶ್​ ರೆಡ್ಡಿ ಬಂಡವಾಳ ಹೂಡುತ್ತಿದ್ದು, ಅರ್ಜುನ್​ ಜನ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ನಾತಿಚರಾಮಿ’, ‘ಗಾಳಿಪಟ 2’ ಮೊದಲಾದ ಸಿನಿಮಾಗಳನ್ನು ರಮೇಶ್‌ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಈಗ ಅವರು ಶಿವಣ್ಣ-ಅರ್ಜುನ್ ಜನ್ಯಾ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: Shiva Rajkumar: ಪತ್ನಿ ಗೀತಾ ಎದುರೇ ಶಿವಣ್ಣನಿಗೆ ಕಿಸ್ ಕೊಟ್ಟ ಮಹಿಳಾ ಅಭಿಮಾನಿ

ದೊಡ್ಡ ಬಜೆಟ್​ನಲ್ಲಿ ‘45’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಕಾಣಿಸಲು ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ