AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಖ್ಯಾತಿಯ ಕಾವ್ಯಾ ಶೈವಾಗೆ ಅವಮಾನ; ವೇದಿಕೆಯಲ್ಲೇ ಮೈಕ್ ಕಿತ್ತುಕೊಂಡ ವ್ಯಕ್ತಿ

ನಟಿ ಕಾವ್ಯಾ ಶೈವ ಅವರಿಗೆ ಬಿಗ್ ಬಾಸ್ ಖ್ಯಾತಿ ಸಿಕ್ಕಿದೆ. ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಅವರ ಕೈಯಿಂದ ಮೈಕ್ ಕಸಿದುಕೊಳ್ಳಲಾಗಿದೆ. ಇದರಿಂದ ವೇದಿಕೆಯಲ್ಲಿ ಗೊಂದಲ ಉಂಟಾಗಿದ್ದು, ಸಂಘಟಕರು ಈ ಘಟನೆಯನ್ನು ಪ್ರಶ್ನಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಾವ್ಯಾ ಶಾಕ್ ಆಗಿದ್ದರೂ, ಎಲ್ಲಿಯೂ ಕೋಪ ಹೊರಹಾಕಿಲ್ಲ.

ಬಿಗ್ ಬಾಸ್ ಖ್ಯಾತಿಯ ಕಾವ್ಯಾ ಶೈವಾಗೆ ಅವಮಾನ; ವೇದಿಕೆಯಲ್ಲೇ ಮೈಕ್ ಕಿತ್ತುಕೊಂಡ ವ್ಯಕ್ತಿ
ಕಾವ್ಯಾ Image Credit source: Instagram
ರಾಜೇಶ್ ದುಗ್ಗುಮನೆ
|

Updated on: May 25, 2026 | 1:13 PM

Share

ನಟಿ ಕಾವ್ಯಾ ಶೈವ ಅವರಿಗೆ ಬಿಗ್ ಬಾಸ್ (Bigg Boss) ಮೂಲಕ ತುಂಬಾನೇ ಖ್ಯಾತಿ ಸಿಕ್ಕಿದೆ. ಅವರು ಅನೇಕ ಸಮಾರಂಭಗಳಿಗೆ ತೆರಳುತ್ತಿದ್ದಾರೆ. ಈಗ ಅವರು ವೇದಿಕೆ ಮೇಲೆ ಇದ್ದಾಗಲೇ ನಡೆದ ಒಂದು ಘಟನೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಕಾವ್ಯಾ ಅವರು ವೇದಿಕೆ ಮೇಲೆ ಮಾತನಾಡುವಾಗ ಮೈಕ್ ಕಸಿದುಕೊಳ್ಳಲಾಗಿದೆ. ಕಲಬುರಗಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಾ ಇದೆ.

ಕಾವ್ಯಾ ಶೈವ ಅವರು ಕಲಬುರಗಿಯ ಕಲಬುರಗಿಯ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅವರು ವೇದಿಕೆ ಮೇಲೆ ಮಾತನಾಡುತ್ತಿದ್ದರು. ಆಗಲೇ ವೇದಿಕೆ ಪೂರ್ತಿ ಜನರಿಂದ ತುಂಬಿತ್ತು. ಅವರಿಗೆ ಸರಿಯಾಗಿ ನಿಲ್ಲಲೂ ಜಾಗ ಇರಲಿಲ್ಲ. ಆದಾಗ್ಯೂ ಕಾವ್ಯಾ ಮಾತನಾಡುತ್ತಿದ್ದರು. ಆಗ ಬಂದ ವ್ಯಕ್ತಿಯೋರ್ವ ಕಾವ್ಯಾ ಅವರಿಂದ ಮೈಕ್ ಕಸಿದುಕೊಂಡಿದ್ದಾರೆ. ಇದರಿಂದಾಗಿ ವೇದಿಕೆಯ ಮೇಲೆ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ವೇದಿಕೆ ಮೇಲೆ ಮಾತನಾಡುತ್ತಿದ್ದಾಗ ಏಕಾಏಕಿ ಮೈಕ್ ಕಿತ್ತುಕೊಂಡಿದ್ದನ್ನು ಕಂಡು ಕಾವ್ಯಾ ಶಾಕ್ ಆದರು. ಆದರೆ, ಎಲ್ಲಿಯೂ ಅವರು ಕೋಪ ಹೊರಹಾಕಿಲ್ಲ. ಕಾವ್ಯಾಗೆ ಆದ ಅವಮಾನವನ್ನು ಸಂಘಟಕರೊಬ್ಬರು ಪ್ರಶ್ನಿಸಿದ್ದಾರೆ. ಮೈಕ್ ಕಿತ್ತುಕೊಂಡ ವ್ಯಕ್ತಿ ಹಾಗೂ ವೇದಿಕೆಯ ಮೇಲೆಯೇ ಇದ್ದ ಸಂಘಟಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ‘ನಷ್ಟ ಪರಿಹಾರ ಕೊಡಿ’: ಬಿಗ್ ಬಾಸ್​​ಗೆ ನೊಟೀಸ್ ಕಳಿಸಿದ ಮಾಜಿ ಸ್ಪರ್ಧಿ

ಕಾವ್ಯಾ ಶೈವ ಅವರು ಕಿರುತೆರೆ ಮೂಲಕ ಸದ್ದು ಮಾಡಿದವರು. ‘ಕೆಂಡ ಸಂಪಿಗೆ’ ಸೀರಿಯಲ್ ಅಲ್ಲಿ ನಟಿಸಿದರು. ‘ಕೊತ್ತಲವಾಡಿ’ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
ನಾನಿನ್ನೂ ಬದುಕಿದ್ದೇನೆ; ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ
ನಾನಿನ್ನೂ ಬದುಕಿದ್ದೇನೆ; ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ
ಪುರುಷರ ಹಕ್ಕುಗಳ ರಕ್ಷಣೆಗೆ ಹೊಸ ವೇದಿಕೆ
ಪುರುಷರ ಹಕ್ಕುಗಳ ರಕ್ಷಣೆಗೆ ಹೊಸ ವೇದಿಕೆ
ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!
ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!
ಮಳೆಯಿಂದಾಗಿ ಭೂಕುಸಿತದ ಭೀತಿ: ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಬಂದ್!
ಮಳೆಯಿಂದಾಗಿ ಭೂಕುಸಿತದ ಭೀತಿ: ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಬಂದ್!
ದಾವಣಗೆರೆ: ಹಳ್ಳ ಹಿಡಿದ 'ಎಸ್ಐಆರ್' ಪ್ರಕ್ರಿಯೆ
ದಾವಣಗೆರೆ: ಹಳ್ಳ ಹಿಡಿದ 'ಎಸ್ಐಆರ್' ಪ್ರಕ್ರಿಯೆ
ರಾಮಮಂದಿರ ದೇಣಿಗೆ ಕಳ್ಳತನ; RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ರಾಮಮಂದಿರ ದೇಣಿಗೆ ಕಳ್ಳತನ; RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ
ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ