‘ನನ್ನ ಸಿನಿಮಾ 800 ಕೋಟಿ ರೂಪಾಯಿ ಗಳಿಸಿದ್ರೂ ನಾನು ಸುದೀಪ್ ಫ್ಯಾನ್’: ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕಷ್ಟಪಟ್ಟು ಚಿತ್ರರಂಗಕ್ಕೆ ಬಂದು, ಯಶಸ್ವಿ ನಾಯಕ, ನಿರ್ದೇಶಕನಾಗಿ ಬೆಳೆದು ನಿಂತಿರುವ ರಿಷಬ್ ಶೆಟ್ಟಿ ಅವರಿಗೆ ಕಿಚ್ಚ ಸುದೀಪ್ ಎಂದರೆ ಬಹಳ ಪ್ರೀತಿಯಂತೆ. ನಾನು ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿ ಎಂದಿದ್ದಾರೆ ರಿಷಬ್.
ಕಿಚ್ಚ ಸುದೀಪ್ ಅವರು ಶ್ರೇಷ್ಠ ಕಲಾವಿದರಲ್ಲಿ ಒಬ್ಬರು. ಅವರು ಚಿತ್ರರಂಗದಲ್ಲಿ ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ ಎಂಬುದು ಅನೇಕರಿಗೆ ಗೊತ್ತಿರುವ ವಿಚಾರ. ಖ್ಯಾತ ನಟ, ನಿರ್ದೇಶ, ನಿರ್ಮಾಪಕ ರಿಷಬ್ ಶೆಟ್ಟಿ ಅವರಿಗೂ ಸುದೀಪ್ ಫೇವರಿಟ್ ಹೀರೋ. ಅವರು ಈ ಮಾತನ್ನು ಈ ಮೊದಲು ಹೇಳಿದ್ದರು. ಅದನ್ನು ಅವರು ಈಗಲೂ ಹೇಳುತ್ತಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ರಿಷಬ್ ಶೆಟ್ಟಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಾಗ ಕೆಲವರು ಬದಲಾಗುತ್ತಾರೆ. ಅವರು ಮಾತನಾಡುವ ಶೈಲಿ ಬದಲಾಗುತ್ತದೆ. ಅಭಿಮಾನಿಗಳನ್ನು ನೋಡುವ ರೀತಿಯೂ ಬೇರೆ ಆಗುತ್ತದೆ. ಆದರೆ, ರಿಷಬ್ ಆ ರೀತಿ ಅಲ್ಲವೇ ಅಲ್ಲ. ಅವರ ನಟನೆಯ ‘ಕಾಂತಾರ’ ಸಿನಿಮಾ 400 ಕೋಟಿ ರೂಪಾಯಿ ಬಾಚಿಕೊಂಡಿದೆ. ಆದರೆ, ರಿಷಬ್ ಅವರು ಬದಲಾಗಿಲ್ಲ. ಆಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ.
ರಿಷಬ್ ಶೆಟ್ಟಿ ಅವರು ‘ಖಡಕ್ ಸಿನಿಮಾ’ ಹೆಸರಿನ ಯೂಟ್ಯಬ್ ಚಾನೆಲ್ಗೆ ಸಂದರ್ಶನ ಕೊಟ್ಟಿದ್ದಾರೆ. ಈ ವೇಳೆ ರಿಷಬ್ಗೆ ಬೇರೆ ಬೇರೆ ಫೋಟೋ ತೋರಿಸಲಾಗಿದೆ. ಪ್ರತಿ ಫೋಟೋ ತೋರಿಸಿದಾಗಲೂ ಅದರ ಹಿಂದಿನ ಕಥೆಯನ್ನು ರಿಷಬ್ ಹೇಳಿದ್ದಾರೆ. ರಿಷಬ್, ಪ್ರಗತಿ, ಸುದೀಪ್ ಹಾಗೂ ಪ್ರಿಯಾ ಒಟ್ಟಾಗಿ ನಿಂತು ತೆಗೆಸಿದ ಫೋಟೋ ತೋರಿಸಲಾಗಿದೆ. ಈ ಫೋಟೋ ಹಿಂದಿನ ಕಥೆಯನ್ನು ರಿಷಬ್ ಅವರು ವಿವರಿಸಿದ್ದಾರೆ.
ಇದನ್ನೂ ಓದಿ:ಜೀ ಕನ್ನಡದ ಹೊಸ ಧಾರಾವಾಹಿಗೆ ಬೆಂಬಲಕೊಟ್ಟ ರಿಷಬ್ ಶೆಟ್ಟಿ; ಕಾರಣ ಏನು?
‘ನನ್ನ ಮೋಸ್ಟ್ ಫೇವರಿಟ್ ಹೀರೋ ಸುದೀಪ್. ನಾನು ಅವರ ಅಭಿಮಾನಿ. ಹುಟ್ಟುಹಬ್ಬದ ದಿನ ಸಿಕ್ಕಿದಾಗ ಸರ್ ಜೊತೆ ತೆಗೆದುಕೊಂಡ ಫೋಟೋ ಇದು. ಆ ದಿನ ದ್ಯಾನಿಶ್ ಅವರು ಸುದೀಪ್ ಬರ್ತ್ಡೇನ ಹೋಸ್ಟ್ ಮಾಡ್ತಾ ಇದ್ದರು. ಆಗ ಒಂದು ಪ್ರಶ್ನೆ ಕೇಳಿದರು. 400 ಕೋಟಿ ಎಂದೆಲ್ಲ ಬಿಲ್ಡಪ್ ಕೊಟ್ಟರು. ಏನು ಮಾತನಾಡಬೇಕು ಎಂದು ಬಿಲ್ಡಪ್ ಕೊಟ್ಟರು. ನಾನು ಅವರಿಗೆ ಆಗ ಹೇಳಿದ್ದು ಒಂದೇ ಮಾತು, ಇದರಪ್ಪನ ತರ ಕಲೆಕ್ಷನ್ ಆದರೂ ನಾನು ಸುದೀಪ್ ಅವರ ಅಭಿಮಾನಿ ಆಗೇ ಇರ್ತೀನಿ ಎಂದಿದ್ದೆ’ ಎಂಬುದಾಗಿ ರಿಷಬ್ ವಿವರಿಸಿದ್ದಾರೆ.
ರಿಷಬ್ ಶೆಟ್ಟಿ ಅವರು ‘ಕಾಂತಾರ
ಚಾಪ್ಟರ್ 1’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ, ಈ ಚಿತ್ರದ ಬಗ್ಗೆ ಫ್ಯಾನ್ಸ್ಗೆ ನಿರೀಕ್ಷೆ ಇದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ