ಅಂಬರೀಷ್ ಮನೆಗೆ ಶೀಘ್ರವೇ ಹೊಸ ಸದಸ್ಯ? ಆಗಸ್ಟ್ 15ಕ್ಕೆ ಅವಿವಾ ಸೀಮಂತ ಶಾಸ್ತ್ರ?
ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ದಾಂಪತ್ಯಕ್ಕೆ ಈಗ ಒಂದು ವರ್ಷ ತುಂಬಿದೆ. 2023ರ ಜೂನ್ 5ರಂದು ಈ ಜೋಡಿ ವಿವಾಹ ಆಯಿತು. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈಗ ಇಬ್ಬರು ಮೂವರಾಗೋ ಸಮಯ ಬಂದಿದೆ. ಅವಿವಾ ಪ್ರೆಗ್ನೆಂಟ್ ಎನ್ನಲಾಗಿದೆ.
ಅಭಿಷೇಕ್ ಅಂಬರೀಷ್ ಹಾಗೂ ಅವಿವಾ 2023ರ ಜೂನ್ 5ರಂದು ವಿವಾಹ ಆದರು. ಇವರು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈಗ ಅಂಬರೀಷ್ ಮನೆಗೆ ಜೂನಿಯರ್ ಅಂಬರೀಷ್ ಬರೋ ಸಮಯ ಆಗಿದೆ. ಅರ್ಥಾತ್, ಅಭಿಷೇಕ್ ಅಂಬರೀಷ್ ಅವರು ಶೀಘ್ರವೇ ತಂದೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ಅವಿವಾ ಪ್ರೆಗ್ನೆಂಟ್ ಆಗಿದ್ದು ಆಗಸ್ಟ್ 15ರಂದು ಸೀಮಂತ ಶಾಸ್ತ್ರ ನಡೆಯಲಿದೆಯಂತೆ.
ಆಗಸ್ಟ್ 15ರಂದು ಅಭಿಷೇಕ್ ಅಂಬರೀಷ್ ಮನೆಯಲ್ಲಿ ಸರಳವಾಗಿ ಶಾಸ್ತ್ರ ನಡೆಸಲು ಸಿದ್ಧತೆ ನಡೆದಿದೆ ಎಂದು ವರದಿ ಆಗಿದೆ. ತುಂಬಾನೇ ಖಾಸಗಿಯಾಗಿ ಸೀಮಂತ ಶಾಸ್ತ್ರ ನಡೆಯಲಿದೆ. ಈಗ ಅವಿವಾಗೆ ಏಳು ತಿಂಗಳು ಎನ್ನಲಾಗಿದೆ. ಹೀಗಾಗಿ ಸುಮಲತಾ ಅವರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಕ್ಟೋಬರ್ ವೇಳೆಗೆ ಅವಿವಾ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಆಪ್ತರು ಹಾಗೂ ಕುಟುಂಬದವರು ಕೂಡ ಈ ಸೀಮಂತ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರಂತೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.
ದರ್ಶನ್ ಗೈರು
ಅಂಬರೀಷ್ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಅಲ್ಲಿ ದರ್ಶನ್ ಹಾಜರಿ ಹಾಕುತ್ತಿದ್ದರು. ಮುಂದೆ ನಿಂತು ಈ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಸುಮಲತಾ ಅವರು ಅಂಬರೀಷ್ನ ಹಿರಿಯ ಮಗನಂತೆ ಕಂಡಿದ್ದಾರೆ. ಆದರೆ, ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅವರು ಜೈಲು ಸೇರಿದ್ದಾರೆ. ಹೀಗಾಗಿ, ದರ್ಶನ್ ಅವರು ಸೀಮಂತ ಶಾಸ್ತ್ರಕ್ಕೆ ಗೈರಾಗಲಿದ್ದಾರೆ.
ಇದನ್ನೂ ಓದಿ: ಅಭಿಷೇಕ್-ಅವಿವಾ ದಾಂಪತ್ಯಕ್ಕೆ ಒಂದು ವರ್ಷ; ಪ್ರೀತಿಯಿಂದ ಶುಭಕೋರಿದ ಸುಮಲತಾ
ವಿವಾಹದ ಬಗ್ಗೆ
2023ರಲ್ಲಿ ಅವಿವಾ ಹಾಗೂ ಅಭಿಷೇಕ್ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ಆದರು. ಅವಿವಾ ಅವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ ಬಿಡಪ ಅವರ ಮಗಳು. ಈಗ ಅವಿವಾ ಹಾಗೂ ಅಭಿಷೇಕ್ ಮಗುವನ್ನು ಸ್ವಾಗತಿಸಲು ರೆಡಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.