ಯಾರೂ ಮಾಡದ ದಾಖಲೆ ಬರೆದು 2024 ಪೂರ್ಣಗೊಳಿಸಿದ ‘ಮ್ಯಾಕ್ಸ್’
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆಯಾಗಿ 2024ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರವಾಗಿದೆ. ಕೇವಲ ಏಳು ದಿನಗಳ ಪ್ರದರ್ಶನದಲ್ಲಿಯೇ ಪುಷ್ಪ 2 ಸೇರಿದಂತೆ ಹಲವು ಸಿನಿಮಾಗಳನ್ನು ಹಿಂದಿಕ್ಕಿದೆ. ಕೆಆರ್ಜಿ ಸ್ಟುಡಿಯೋಸ್ ಚಿತ್ರದ ಹಂಚಿಕೆ ಹಕ್ಕುಗಳನ್ನು ಪಡೆದುಕೊಂಡಿದ್ದು, ಈ ಯಶಸ್ಸಿಗೆ ಅವರು ಸುದೀಪ್ ಅವರಿಗೆ ಧನ್ಯವಾದ ಹೇಳಿದ್ದಾರೆ.
‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಯಿತು. ಸುದೀಪ್ ನಟನೆಯ ಈ ಚಿತ್ರ 2024ರಲ್ಲಿ ಹಲವು ದಾಖಲೆಗಳನ್ನು ಬರೆದಿದೆ. 2024ರಲ್ಲಿ ಕೇವಲ ಏಳು ದಿನ ಈ ಚಿತ್ರ ಪ್ರದರ್ಶನ ಕಂಡರೂ ಈ ಸಿನಿಮಾ ದಾಖಲೆ ಬರೆದಿದೆ. ‘ಪುಷ್ಪ 2’ ಸೇರಿದಂತೆ ಕಳೆದ ವರ್ಷ ರಿಲೀಸ್ ಆಗಿ (ಕರ್ನಾಟಕ ಭಾಗದಲ್ಲಿ) ಯಶಸ್ಸು ಕಂಡ ಸಿನಿಮಾಗಳನ್ನು ಈ ಚಿತ್ರ ಹಿಂದಿಕ್ಕಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟಾಗಿರಬಹುದು ಎಂಬ ಬಗ್ಗೆ ತಂಡದವರು ಮಾಹಿತಿ ನಿಡಿಲ್ಲ.
‘ಮ್ಯಾಕ್ಸ್’ ಚಿತ್ರದ ಹಂಚಿಕೆ ಹಕ್ಕನ್ನು ‘ಕೆಆರ್ಜಿ ಸ್ಟುಡಿಯೋಸ್’ ಪಡೆದುಕೊಂಡಿದೆ. ಈ ಸಂಸ್ಥೆಯಲ್ಲಿ ಒಬ್ಬರಾದ ಕಾರ್ತಿಕ್ ಗೌಡ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘2024ರ ಕೊನೆಯಲ್ಲಿ ಇದ್ದೇವೆ. ಈ ವರ್ಷ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ ಮ್ಯಾಕ್ಸ್’ ಎಂದು ಅವರು ಬರೆದುಕೊಂಡು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಯಶಸ್ಸಿಗೆ ಕಾರಣವಾದ ಕೆಆರ್ಜಿ ಸ್ಟುಡಿಯೋ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಚಿತ್ರದ ಮುಖ್ಯ ಸ್ಥಂಭ. ಅವರಿಗೆ ಕಾರ್ತಿಕ್ ಅವರು ಧನ್ಯವಾದ ಹೇಳೋದನ್ನು ಮರೆತಿಲ್ಲ. 2024ರ ಆರಂಭದಲ್ಲಿ ‘ಹನುಮಾನ್’ ಚಿತ್ರವನ್ನು ಕೆಆರ್ಜಿ ಸ್ಟುಡಿಯೋಸ್ ಹಂಚಿಕೆ ಮಾಡಿತ್ತು. ಇದು ಕೆಆರ್ಜಿ ಕೈ ಸೇರಿದ್ದು ಸುದೀಪ್ ಅವರಿಂದಲೇ ಅಂತೆ. ಈ ಕಾರಣಕ್ಕೆ ಅವರಿಗೆ ವಿಶೇಷ ಥ್ಯಾಂಕ್ಸ್ ಹೇಳಿದ್ದಾರೆ.
As we end 2024, I can proudly say #Max is the Highest Grosser of this year in Karnataka. My heartfelt thanks to my team at @KRG_Connects(Anil, Suhas, Deekshith, Bindu & Bharathi) who worked round the clock on the Promotions with little bit of assets we had. Special thanks to… pic.twitter.com/1jaC9YRmBk
— Karthik Gowda (@Karthik1423) December 31, 2024
‘ಮ್ಯಾಕ್ಸ್’ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಎಲ್ಲ ಕಡೆಗಳಲ್ಲಿ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದ ಗ್ರಾಸ್ ಕಲೆಕ್ಷನ್ 80 ಕೋಟಿ ರೂಪಾಯಿ ದಾಟಿದೆ ಎಂದು ಸುದೀಪ್ ಫ್ಯಾನ್ಸ್ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ತಂಡದವರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ‘ಯುಐ’ ಚಿತ್ರದ ಗಳಿಕೆ ಹಿಂದಿಕ್ಕಿದ ‘ಮ್ಯಾಕ್ಸ್’; ಯಾವ ಸಿನಿಮಾದ ಕಲೆಕ್ಷನ್ ಎಷ್ಟು?
ಗಳಿಕೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತನಾಡಲು ಸುದೀಪ್ ಕೂಡ ನಿರಕಾರಿಸಿದ್ದಾರೆ. ಅದು ತುಂಬಾನೇ ವೈಯಕ್ತಿಕ ವಿಚಾರ ಎಂದಿರೋ ಅವರು, ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ ಎಂದಷ್ಟೇ ಹೇಳಿದ್ದಾರೆ. ‘ಮ್ಯಾಕ್ಸ್’ ರಿಲೀಸ್ ವಿಳಂಬ ಆಗುತ್ತಲೇ ಬಂದಿತ್ತು. ಈ ಸಿನಿಮಾ ಲೇಟ್ ಆಗಿ ರಿಲೀಸ್ ಆದರೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:45 am, Wed, 1 January 25