ಸುದೀಪ್​ಗೆ ಕೊರೊನಾ ಪಾಸಿಟಿವ್ ಅಲ್ಲ; ‘ವಿಕ್ರಾಂತ್ ರೋಣ’ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ

ಸುದೀಪ್​ ಅವರು ಹೊರ ರಾಜ್ಯಗಳಲ್ಲಿ ಸಿನಿಮಾ ಪ್ರಚಾರ ಮಾಡಬೇಕಿತ್ತು. ಆದರೆ, ಅವರಿಗೆ ಜ್ವರ ಬಂದಿದೆ. ಈ ಬೆನ್ನಲ್ಲೇ ‘ಸುದೀಪ್​ಗೆ ಕೊರೊನಾ ಪಾಸಿಟಿವ್​’ ಎಂದು ಸುದ್ದಿ ಬಿತ್ತರ ಆಗಿತ್ತು. ಇದಕ್ಕೆ ನಿರ್ಮಾಪಕ ಮಂಜು ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ಸುದೀಪ್​ಗೆ ಕೊರೊನಾ ಪಾಸಿಟಿವ್ ಅಲ್ಲ; ‘ವಿಕ್ರಾಂತ್ ರೋಣ’ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ
ಸುದೀಪ್​-ಮಂಜು
Edited By:

Updated on: Jul 20, 2022 | 7:12 PM

ಕಿಚ್ಚ ಸುದೀಪ್ (Kichcha Sudeep) ಅವರ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ತೆರೆಗೆ ಬರೋಕೆ ಒಂದು ವಾರ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂಬ ಸುದ್ದಿ ಹರಿದಾಡಿತ್ತು. ಈಗ ಇದಕ್ಕೆ ‘ವಿಕ್ರಾಂತ್​ ರೋಣ’ ಚಿತ್ರದ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ. ‘ಅವರಿಗೆ ಕೊವಿಡ್ ಪಾಸಿಟಿವ್ ಬಂದಿಲ್ಲ, ಜ್ವರ ಅಷ್ಟೇ’ ಎಂದಿದ್ದಾರೆ ಜಾಕ್ ಮಂಜು.

‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅಬ್ಬರದ ಪ್ರಚಾರ ಮಾಡಲಾಗುತ್ತಿದೆ. ಇತ್ತೀಚೆಗೆ ಸುದೀಪ್ ಅವರು ದೆಹಲಿಗೆ ತೆರಳಿ ಸಿನಿಮಾ ಪ್ರಚಾರ ಮಾಡಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿದ್ದರು. ಈಗಲೂ ಅವರು ಹೊರ ರಾಜ್ಯಗಳಲ್ಲಿ ಸಿನಿಮಾ ಪ್ರಚಾರ ಮಾಡಬೇಕಿತ್ತು. ಆದರೆ, ಅವರಿಗೆ ಜ್ವರ ಬಂದಿದೆ. ಈ ಬೆನ್ನಲ್ಲೇ ಕೆಲ ಮಾಧ್ಯಮಗಳು ‘ಸುದೀಪ್​ಗೆ ಕೊರೊನಾ ಪಾಸಿಟಿವ್​’ ಎಂದು ಸುದ್ದಿ ಬಿತ್ತರ ಮಾಡಿದ್ದವು. ಇದಕ್ಕೆ ನಿರ್ಮಾಪಕ ಮಂಜು ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

‘ಸುದೀಪ್ ಮಳೆಯಲ್ಲಿ ನೆನೆದರು. ಹೀಗಾಗಿ ಜ್ವರ ಬಂದಿದೆ. ಈ ಕಾರಣಕ್ಕೆ ಬೇರೆ ರಾಜ್ಯಗಳಲ್ಲಿ ಅವರು ಪ್ರಮೋಷನ್​ಗೆ ಹಾಜರಾಗಿಲ್ಲ. ಜುಲೈ 22ರಿಂದ ಸಿನಿಮಾ ಪ್ರಚಾರದಲ್ಲಿ ಕಿಚ್ಚ ಭಾಗಿ ಆಗಲಿದ್ದಾರೆ. ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂದು ಮಂಜು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಸುದೀಪ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ
ಬಾಗಲಕೋಟೆಯಲ್ಲಿ ರಾ.. ರಾ.. ರಕ್ಕಮ್ಮ ಹಾಡಿಗೆ ನೂರಾರು ಜನರಿಂದ ಭರ್ಜರಿ ಸ್ಟೆಪ್
Jacqueline Fernandez: ಸೆನ್ಸೇಶನ್ ಸೃಷ್ಟಿಸಿದ ‘ರಾ ರಾ ರಕ್ಕಮ್ಮ’; ಕನ್ನಡದಲ್ಲೇ ಧನ್ಯವಾದ ಹೇಳಿದ ಜಾಕ್ವೆಲಿನ್​
 ‘ರಾ ರಾ ರಕ್ಕಮ್ಮಾ..’ ಹಾಡಿಗೆ ಮಸ್ತ್​ ಆಗಿ ಹೆಜ್ಜೆ ಹಾಕಿದ ಅರವಿಂದ್ ಕೆಪಿ-ದಿವ್ಯಾ ಉರುಡುಗ
Vikrant Rona: ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್

ಜುಲೈ 25ಕ್ಕೆ ಪ್ರೀ-ರಿಲೀಸ್​ ಕಾರ್ಯಕ್ರಮ ಮಾಡಲು ‘ವಿಕ್ರಾಂತ್ ರೋಣ’ ಸಿನಿಮಾ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈ ಬಗ್ಗೆ ಸುದೀಪ್ ಮಾತನಾಡಿದ್ದರು.‘ಜುಲೈ 25ಕ್ಕೆ ಪ್ರೀ-ರಿಲೀಸ್​ ಕಾರ್ಯಕ್ರಮ ಮಾಡಬೇಕು ಅಂತ ಅಂದುಕೊಂಡಿದ್ದೇವೆ. ಒಂದೆರಡು ದಿನ ಆಚೀಚೆ ಆಗಬಹುದು. ಆ ಸಮಯದಲ್ಲಿ ನೀವೆಲ್ಲರೂ ಬಿಡುವು ಮಾಡಿಕೊಂಡಿರಿ. ಬೇರೆ ಕಡೆಗಳಲ್ಲಿ ಪ್ರಚಾರ ಕಾರ್ಯ ಮುಗಿಸಿಕೊಂಡು ಮತ್ತೆ ನಮ್ಮ ಊರಿಗೆ, ನಮ್ಮ ಜನರ ಬಳಿ ಬರುತ್ತೇನೆ. ವಿಕ್ರಾಂತ್​ ರೋಣ ಪ್ರೀ ರಿಲೀಸ್​ ಇವೆಂಟ್​ನಲ್ಲಿ ಎಲ್ಲರೂ ಭಾಗಿ ಆಗೋಣ’ ಎಂದು ಕಿಚ್ಚ ಸುದೀಪ್​ ಹೇಳಿದ್ದರು.

ಇದನ್ನೂ ಓದಿ: ಸುದೀಪ್​​ಗೆ ಉತ್ತರ ಭಾರತದವರು ‘ಬಾಜಿರಾವ್’ ಹೀರೋ ಎಂದು ಕರೆಯುತ್ತಿದ್ದುದು ಏಕೆ? ಕಿಚ್ಚ ಬಿಚ್ಚಿಟ್ರು ಅಚ್ಚರಿಯ ಮಾಹಿತಿ

ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗೆ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 3ಡಿ ಅವತರಣಿಕೆಯಲ್ಲಿ ಸಿನಿಮಾ ಮೂಡಿ ಬರುತ್ತಿರುವುದು ವಿಶೇಷ.

 

Published On - 7:12 pm, Wed, 20 July 22