ಬಾಸ್ ವಿವಾದ ಹಾಗೂ ದರ್ಶನ್ ಫ್ಯಾನ್ಸ್ ಬಗ್ಗೆ ನೇರವಾಗಿ ಮಾತನಾಡಿದ ಸುದೀಪ್

ಸೂಪರ್​ ಹಿಟ್​ ಆದ ‘ಮ್ಯಾಕ್ಸ್’ ಸಿನಿಮಾದ ಸಕ್ಸಸ್ ಮೀಟ್ ಮಾಡಲಾಗಿದೆ. ಈ ವೇಳೆ ಬಾಸ್ ಪದದ ಕುರಿತು ಎದ್ದಿರುವ ವಿವಾದಕ್ಕೆ ಕಿಚ್ಚ ಸುದೀಪ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ. ‘ಯಾರಿಗೋ ಟಾಂಟ್​ ನೀಡಿ ಸೆಲೆಬ್ರೇಟ್ ಮಾಡುವವನು ನಾನಲ್ಲ’ ಎಂದು ಸುದೀಪ್ ಖಡಕ್ ಆಗಿ ಹೇಳಿದ್ದಾರೆ.

ಬಾಸ್ ವಿವಾದ ಹಾಗೂ ದರ್ಶನ್ ಫ್ಯಾನ್ಸ್ ಬಗ್ಗೆ ನೇರವಾಗಿ ಮಾತನಾಡಿದ ಸುದೀಪ್
Kichcha Sudeep

Updated on: Dec 30, 2024 | 10:10 PM

‘ಮ್ಯಾಕ್ಸ್’ ಸಿನಿಮಾ ಯಶಸ್ಸು ಕಂಡ ಬಳಿಕ ಕತ್ತರಿಸಿದ ಕೇಕ್​ನಲ್ಲಿ ‘ಬಾಸಿಸಂ ಕಾಲ ಮುಗಿಯಿತು’ ಎಂದು ಬರೆದಿದ್ದು ಅನೇಕರ ಕಣ್ಣು ಕುಕ್ಕಿತ್ತು. ಆ ವಿಚಾರದ ಬಗ್ಗೆ ಕಿಚ್ಚ ಸುದೀಪ್ ಅವರು ಸಕ್ಸಸ್​ ಮೀಟ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ಯಶ್, ದರ್ಶನ್, ಧ್ರುವ, ಉಪ್ಪಿ, ಶಿವಣ್ಣ ಎಲ್ಲರೂ ಸೇರಿದರೆ ಕನ್ನಡ ಚಿತ್ರರಂಗ. ದರ್ಶನ್ ಫ್ಯಾನ್ಸ್ ವಿಷಯ ಬಂದಾಗ ನಾನೇ ಹೇಳಿದ್ದೆ. ದರ್ಶನ್ ಫ್ಯಾನ್ಸ್​ಗೆ ಬೈಯ್ಯಬೇಡಿ. ಅವರು ನೋವಲ್ಲಿ ಇದ್ದಾರೆ. ಇದನ್ನು ನಾನೇ ಹೇಳಿದ ಮೇಲೆ ನಾವು ಯಾಕೆ ಅವರಿಗೆ ಟಾಂಟ್ ಕೊಡೋಣ? ನಾವೆಲ್ಲ ಬಹಳ ಚಿಕ್ಕವರು. ಇಂದು ಚಿತ್ರರಂಗ ಕೊರಗುತ್ತಿದೆ. ನಾವೆಲ್ಲ ಸಿನಿಮಾವನ್ನು ಉಳಿಸೋಕೆ ಹೋಗೋಣವೋ ಅಥವಾ ಈ ಥರದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಕೂರೋಣವಾ ಹೇಳಿ’ ಎಂದಿದ್ದಾರೆ ಸುದೀಪ್​.

‘ನಾವು ಯಾಕೆ ಟಾಂಟ್ ಕೊಡಬೇಕು? ಏನು ಸಿಗುತ್ತೆ ನಮಗೆ ಅದರಿಂದ? ನಾವೇನು ಚತ್ರಪತಿಗಳ? ಚಕ್ರವರ್ತಿಗಳಾ? ವಯಸ್ಸಾಗಿ ನಾವು ಕೂಡ ಹೋಗುವವರೇ ಒಂದು ದಿನ. ಬದುಕಿರುವಾಗ, ಒಂದು ಸಿನಿಮಾ ನಮ್ಮ ಕೈ ಹಿಡಿದಿರುವಾಗ ಬೆಳೆಯೋಣ, ಇನ್ನಷ್ಟು ಆಸೆಪಡೋಣ. ಒಳ್ಳೆಯ ಸಿನಿಮಾ ಮಾಡೋಣ. ಎಲ್ಲರೂ ನನ್ನ ಸಹೋದರನ ರೀತಿ ಇದ್ದೋರು’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

‘ಅಭಿಮಾನಿಗಳು ಯಶ್ ಬಾಸ್, ಧ್ರುವ ಬಾಸ್, ಉಪ್ಪಿ ಬಾಸ್, ಶಿವಣ್ಣ ಬಾಸ್ ಅನ್ನೋದಿಲ್ವಾ? ಎಲ್ಲರಿಗೂ ಅವರವರ ಅಭಿಮಾನಿಗಳು ಹಾಗೆಯೇ ಕರೆಯುತ್ತಾರೆ. ನನಗೂ ದರ್ಶನ್​ಗೂ ಏನೂ ಇಲ್ಲ. ಅವರು ಕೂಡ ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಪ್ರತಿಯೊಬ್ಬರೂ ಕಷ್ಟಪಟ್ಟಿದ್ದಾರೆ. ಕನ್ನಡ ಚಿತ್ರರಂಗ ಇಂದು ತುಂಬ ನೋವಲ್ಲಿ ಇದೆ. ಚಿತ್ರರಂಗ ಬೆಳೆಯಬೇಕು ಎಂದರೆ ವಿವಾದ ಬೇಡ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: ಬಾಸಿಸಂ​ ಕೇಕ್​ ವಿವಾದಕ್ಕೆ ಸ್ಪಷ್ಟನೆ ನೀಡಿದ ಸುದೀಪ್​ ಆಪ್ತ ಪ್ರದೀಪ್​

‘ನನ್ನ ಫ್ಯಾನ್ಸ್ ಹೋಗಿ ಎಲ್ಲ ಹೀರೋಗಳ ಸಿನಿಮಾ ನೋಡುತ್ತಾರೆ. ಅವರ ಫ್ಯಾನ್ಸ್ ಬಂದು ನನ್ನ ಸಿನಿಮಾ ನೋಡುತ್ತಾರೆ. ಆನ್​ಲೈನ್​ನಲ್ಲಿ ಒಂದು ವಾತಾವರಣ ಬೆಳೆಯುವಾಗ ಯಾರೋ ಒಬ್ಬರು ಒಂದು ಆಯಾಮ ಕೊಡುವುದೇ ತಪ್ಪು. ಕೆಟ್ಟ ಅಹಂಕಾರ ನಮ್ಮಲ್ಲಿ ಇದೆ ಅಂತ ನೀವು ಅಂದುಕೊಂಡಿರುವುದೇ ತಪ್ಪು. ನಮ್ಮ ಹಿರಿಯರು ಚಿತ್ರರಂಗವನ್ನು ತಮ್ಮ ಭುಜದಮೇಲೆ ಹೊತ್ತುಕೊಂಡು ಬೆಳೆಸಿದ್ದಾರೆ. ಇವತ್ತು ನಮ್ಮ ಕೈಗೆ ಕೊಟ್ಟಿದ್ದಾರೆ. ನಾನು ಇನ್ನಷ್ಟು ಬೆಳೆಸಿ ಮುಂದಿನ ತಲೆಮಾರಿಗೆ ಕೊಟ್ಟು ಹೋಗಬೇಕು’ ಎಂದು ಸುದೀಪ್ ಹೇಳಿದ್ದಾರೆ.

Sudeep on Darshan: ದರ್ಶನ್ ಬಗ್ಗೆ Max ಇವೆಂಟ್​ನಲ್ಲಿ ಕಿಚ್ಚ ಖಡಕ್ ರಿಯಾಕ್ಷನ್ | #TV9D

ಡಿಸೆಂಬರ್​ 25ರಂದು ತೆರೆಕಂಡ ಮ್ಯಾಕ್ಸ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಇದರಿಂದ ಸುದೀಪ್ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಇದೇ ಖುಷಿಯಲ್ಲಿ ಬೆಂಗಳೂರಿನಲ್ಲಿ ಇಂದು (ಡಿಸೆಂಬರ್​ 30) ಸಕ್ಸಸ್ ಮೀಟ್ ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us