ಕಿಚ್ಚ ಸುದೀಪ್ ಅವರನ್ನು ಮಾತಿನಲ್ಲಿ ಸೋಲಿಸೋರು ಯಾರೂ ಇಲ್ಲ. ಅವರು ಅಷ್ಟು ಚೆನ್ನಾಗಿ ಮಾತನಾಡುತ್ತಾರೆ. ಅವರು ಹಲವು ಸಂದರ್ಶನಗಳಲ್ಲಿ ಜೀವನದ ಪಾಠಗಳನ್ನು ಮಾಡಿದ್ದೂ ಇದೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಈಗ ಸುದೀಪ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಜೀವನದ ಪಾಠ ಮಾಡಿದ್ದರು. ಜೀವನ ಅಂದರೆ ಏನು ಎಂದು ವಿವರಿಸಿದ್ದರು.
ಜೀವನ ಎಂದರೆ ಒಬ್ಬರದ್ದು ಒಂದೊಂದು ಅರ್ಥ. ಕಿಚ್ಚ ಸುದೀಪ್ ಅವರು ಕೂಡ ಜೀವನ ಎಂದರೆ ಏನು ಎಂಬ ಬಗ್ಗೆ ತಮ್ಮದೇ ಆದ ಕಲ್ಪನೆ ಹೊಂದಿದ್ದಾರೆ. ಅದರಲ್ಲೂ ಮದುವೆ ಎಂದರೆ ಏನು ಎಂಬ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದರು. ಅರೇಂಜ್ ಮ್ಯಾರೇಜ್ ಆದ ಬಳಿಕ ಎಲ್ಲವನ್ನೂ ಒಪ್ಪಿ ನಡೆಯಬೇಕಾಗುತ್ತದೆ ಎಂದು ಅವರು ಹೇಳಿದ್ದರು. ಇದೇ ಜೀವನ ಎಂದು ವಿವರಿಸಿದ್ದರು.
‘ಎಲ್ಲೋ ಹೋಗಿ, ಎಲ್ಲೋ ಸೆಟಲ್ ಆಗ್ತೀರಿ, ಇದೇ ಜೀವನ. ಯಾವುದೋ ಗೊತ್ತಿಲ್ಲದ ಹುಡುಗಿಗೆ ಹೋಗಿ ತಾಳಿ ಕಟ್ಟುತ್ತೀರಿ. ಇದೇ ನನ್ನ ಹೆಂಡತಿ, ಅವಳನ್ನು ಪ್ರೀತಿಸಬೇಕು ಎನ್ನುವುದಕ್ಕೆ ಬರುತ್ತೇವೆ. ಶೆ. 90ರಷ್ಟು ಜೀವನದಲ್ಲಿ ನಡೆಯೋದು ಇದೇ’ ಎಂದಿದ್ದಾರೆ ಅವರು.
‘ಅವಳು ಯಾರು ಅನ್ನೋದು ಗೊತ್ತಿರಲ್ಲ. ಅವಳ ಜೊತೆ ಎಲ್ಲವನ್ನೂ ಶೇರ್ ಮಾಡಬೇಕು. ಆಸಕ್ತಿ ಸೇರುತ್ತದೆಯೋ ಗೊತ್ತಿಲ್ಲ. ಅವರನ್ನು ಪ್ರೀತಿಸುವುದನ್ನು ಕಲಿಯುತ್ತೇವೆ, ಅವರ ವೀಕ್ನೆಸ್ ಪಾಸಿಟಿವ್ ವಿಚಾರಗಳನ್ನು ಒಪ್ಪಿಕೊಳ್ಳುತ್ತೇವೆ. ಇದೇ ಜೀವನ’ ಎಂದು ಸುದೀಪ್ ಹೇಳಿದ್ದರು.
ಇದನ್ನೂ ಓದಿ: ‘ಪಾರ್ಟಿ ಅನ್ನೋದು ವೈಯಕ್ತಿಕ’; ಕಿಚ್ಚ ಸುದೀಪ್ ಅವರ ಆಲೋಚೆನೆಯೇ ಬೇರೆ
ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಕಳೆದ ವರ್ಷಾಂತ್ಯಕ್ಕೆ ಬಂದ ಈ ಚಿತ್ರ ಗೆಲುವು ಕಂಡಿದೆ. ಈಗ ಅವರು ಬಿಲ್ಲ ರಂಗ ಭಾಷ ಚಿತ್ರದಲ್ಲಿ ನಟಿಸಬೇಕಿದೆ. ಈ ಸಿನಿಮಾ ಈ ವರ್ಷ ಆರಂಭ ಆಗಲಿದೆ. ಅನೂಪ್ ಭಂಡಾರಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಸಿಸಿಎಲ್ನಲ್ಲೂ ಅವರು ಭಾಗಿ ಆಗಿದ್ದರು. ಅವರು ನಿರ್ದೇಶನವನ್ನೂ ಮಾಡಬೇಕಿದೆ. ಈ ಬಗ್ಗೆ ಇನ್ನಷ್ಟೇ ಘೋಷಣೆ ಮಾಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.