AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್​ ರಾಜ್​ಕುಮಾರ್​ ನಟನೆಯ ‘ಪೆಪೆ’ ಸಿನಿಮಾ ‘ಕೆಆರ್‌ಜಿ’ ಮೂಲಕ ಸದ್ಯದಲ್ಲೇ ರಿಲೀಸ್​

ನಟ ವಿನಯ್ ರಾಜ್‌ಕುಮಾರ್ ಅವರು ಇಲ್ಲಿಯವರೆಗೆ ಕ್ಲಾಸ್​ ಆದಂತಹ ಪಾತ್ರಗಳನ್ನು ಮಾಡಿದ್ದೇ ಹೆಚ್ಚು. ಈಗ ಅವರು ‘ಪೆಪೆ’ ಸಿನಿಮಾದಲ್ಲಿ ಮಾಸ್​ ಪಾತ್ರ ಮಾಡಿದ್ದಾರೆ. ರಗಡ್​ ಲುಕ್​ನಲ್ಲಿ ಅವರು ಜನರ ಎದುರು ಬರಲಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ತೆರೆಕಾಣಲಿದೆ. ಈ ಚಿತ್ರದ ವಿತರಣೆ ಹಕ್ಕನ್ನು ‘ಕೆಆರ್‌ಜಿ ಸ್ಟುಡಿಯೋಸ್’ ಸಂಸ್ಥೆ ಪಡೆದುಕೊಂಡಿದೆ.

ವಿನಯ್​ ರಾಜ್​ಕುಮಾರ್​ ನಟನೆಯ ‘ಪೆಪೆ’ ಸಿನಿಮಾ ‘ಕೆಆರ್‌ಜಿ’ ಮೂಲಕ ಸದ್ಯದಲ್ಲೇ ರಿಲೀಸ್​
ವಿನಯ್​ ರಾಜ್​ಕುಮಾರ್​
ಮದನ್​ ಕುಮಾರ್​
|

Updated on: Aug 11, 2024 | 3:31 PM

Share

ಕನ್ನಡ ಚಿತ್ರರಂಗದ ಯುವ ನಟ ವಿನಯ್ ರಾಜ್​ಕುಮಾರ್ ಅವರು ಬೇರೆ ಬೇರೆ ಬಗೆಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ನಟಿಸಿರುವ ‘ಪೆಪೆ’ ಸಿನಿಮಾ ಒಂದಷ್ಟು ಕಾರಣಗಳಿಂದ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಈ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ರಿಲೀಸ್​ಗೆ ಸಜ್ಜಾಗಿರುವ ಈ ಸಿನಿಮಾ ಬಗ್ಗೆ ಇನ್ನೊಂದು ನ್ಯೂಸ್​ ಸಿಕ್ಕಿದೆ. ಈ ಚಿತ್ರವನ್ನು ವಿತರಣೆ ಮಾಡಲು ‘ಕೆಆರ್​ಜಿ’ ಸಂಸ್ಥೆ ಮುಂದೆ ಬಂದಿದೆ. ಹೌದು, ‘ಕೆಆರ್‌ಜಿ ಸ್ಟುಡಿಯೋಸ್’ ಮೂಲಕ ‘ಪೆಪೆ’ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಅವರು ರಾಜ್ಯಾದ್ಯಂತ ವಿತರಣೆ ಮಾಡಲಿದ್ದಾರೆ.

‘ಪೆಪೆ’ ಮತ್ತು ‘ಕೆಆರ್​ಜಿ ಸ್ಟುಡಿಯೋಸ್’ ಕೈ ಜೋಡಿಸಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಇಷ್ಟು ದಿನ ಕ್ಲಾಸ್ ಹೀರೋ ಪಾತ್ರಗಳಲ್ಲಿ ಸೈ ಎನಿಸಿಕೊಂಡ ವಿನಯ್ ರಾಜ್​ಕುಮಾರ್​ ಅವರು ಈಗ ‘ಪೆಪೆ’ ಸಿನಿಮಾದಲ್ಲಿ ಮಾಸ್ ಗೆಟಪ್​ ತಾಳಿದ್ದಾರೆ. ಇದು ಕೂಡ ಸಿನಿಮಾದ ವಿಶೇಷತೆಗಳಲ್ಲಿ ಒಂದು. ಈಗಾಗಲೇ ಹೊರಬಂದಿರುವ ಟೈಟಲ್​ ಸಾಂಗ್​ ಸದ್ದು ಮಾಡಿದೆ.

ಇದನ್ನೂ ಓದಿ: ‘ಓಂ’ ಕ್ಲೈಮ್ಯಾಕ್ಸ್​ನಲ್ಲಿ ವಿನಯ್ ರಾಜ್​ಕುಮಾರ್-ಯುವ ಇದ್ರು; ಯಾವ ದೃಶ್ಯ ಎಂದು ಊಹಿಸುತ್ತೀರಾ?

ಸದ್ಯದಲ್ಲೇ ‘ಪೆಪೆ’ ಸಿನಿಮಾ ಬಿಡುಗಡೆ ಆಗಲಿದೆ. ರವಿವರ್ಮ, ಡಿಫರೆಂಟ್‌ ಡ್ಯಾನಿ, ಚೇತನ್‌ ಡಿಸೋಜಾ, ನರಸಿಂಹ ಅವರು ಈ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಮೈಸೂರು, ಬೆಂಗಳೂರು, ಕೊಡಗು, ಸಕಲೇಶಪುರ ಮುಂತಾದೆಡೆ ಸಿನಿಮಾದ ಶೂಟಿಂಗ್​ ನಡೆದಿದೆ. ‘ಉದಯ್‌ ಸಿನಿ ವೆಂಚರ್‌’, ‘ದೀಪಾ ಫಿಲ್ಮ್ಸ್ ಬ್ಯಾನರ್‌’ ಮೂಲಕ ಉದಯ್ ಶಂಕರ್ ಎಸ್. ಮತ್ತು ಬಿ.ಎಮ್. ಶ್ರೀರಾಮ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

‘ಪೆಪೆ’ ಸಿನಿಮಾಗೆ ಶ್ರೀಲೇಶ್ ಎಸ್. ನಾಯರ್ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಡಿಫರೆಂಟ್​ ಆದಂತಹ ಸಿನಿಮಾವನ್ನು ಅವರು ಪ್ರೇಕ್ಷಕರಿಗೆ ನೀಡುವ ಭರವಸೆ ನೀಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ಅವರು ನಟಿಸಿದ್ದಾರೆ. ಮಯೂರ್‌ ಪಟೇಲ್‌, ಬಲ ರಾಜ್‌ವಾಡಿ, ಯಶ್‌ ಶೆಟ್ಟಿ, ಮೇದಿನಿ ಕೆಳಮನೆ, ನವೀನ್‌ ಡಿ. ಪಡೀಲ್‌, ಅರುಣಾ ಬಾಲರಾಜ್‌ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಭಿಷೇಕ್‌ ಜಿ. ಕಾಸರಗೋಡು ಅವರು ಛಾಯಾಗ್ರಹಣ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ