AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಿಪ್ ಲಾಕ್’ ಸಿನಿಮಾ ಪ್ರಾರಂಭ, ನೀವಂದುಕೊಂಡತಲ್ಲ ಕತೆ

ಈ ಹಿಂದೆ ಒಂದೇ ಶಾಟ್​ನಲ್ಲಿ ಚತ್ರೀಕರಣ ಮಾಡಲಾಗಿದ್ದ ‘ಯಂಗ್ ಮ್ಯಾನ್’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದ ಮುತ್ತುರಾಜ್ ಇದೀಗ ‘ಲಿಪ್​ಲಾಕ್’ ಹೆಸರಿನ ಸಿನಿಮಾ ನಿರ್ಮಿಸಲಿದ್ದಾರೆ.

‘ಲಿಪ್ ಲಾಕ್’ ಸಿನಿಮಾ ಪ್ರಾರಂಭ, ನೀವಂದುಕೊಂಡತಲ್ಲ ಕತೆ
ಮಂಜುನಾಥ ಸಿ.
|

Updated on: Aug 25, 2024 | 7:00 AM

Share

ಒಂದೇ ಟೇಕ್ ನಲ್ಲಿ ಚಿತ್ರೀಕರಣ ಮಾಡಲಾಗಿದ್ದ ‘ಯಂಗ್ ಮ್ಯಾನ್’ ಸಿನಿಮಾದ ನಿರ್ದೇಶಕ ಮುತ್ತುರಾಜ್ ಇದೀಗ ‘ಲಿಪ್ ಲಾಕ್’ಹೆಸರಿನ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಈ ಹೊಸ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. ಸಿನಿಮಾದ ಮೊದಲ ದೃಶ್ಯಕ್ಕೆ ನಿರ್ಮಾಪಕರ ಸಂಬಂಧಿಯೊಬ್ಬರು ಕ್ಲ್ಯಾಪ್ ಮಾಡಿದರು. ಸಿನಿಮಾದ ಮುಹೂರ್ತಕ್ಕೆ ಹಲವು ಗಣ್ಯರು ಆಗಮಿಸಿದ್ದು ಸಿನಿಮಾಕ್ಕೆ ಶುಭ ಹಾರೈಸಿದರು.

ಸಿನಿಮಾದ ನಿರ್ದೇಶಕ ಮುತ್ತುರಾಜ್ ಮಾತನಾಡಿ, ‘ಲಿಪ್ ಲಾಕ್’ ಸಿನಿಮಾದ ಹೆಸರು ಕೇಳುತ್ತಿದ್ದಂತೆ ಇದರ ಕತೆ ಏನೋ ಇರಬಹುದು, ಹಸಿ-ಬಿಸಿ ದೃಶ್ಯಗಳು ಇರಬಹುದು ಎಂದು ಊಹಿಸಲಾಗುತ್ತದೆ. ಆದರೆ ಹಾಗೇನೂ ಇಲ್ಲ. ‘ಲಿಪ್ ಲಾಕ್’ ಸಿನಿಮಾದ ನಿಜವಾದ ಅರ್ಥವೇ ಬೇರೆ ನಿರ್ದೇಶಕ ಮುತ್ತುರಾಜ್ ಹೇಳುತ್ತಾರೆ. ನಾವು ಮಾಡಲು ಹೊರಟಿರುವ ‘ಲಿಪ್ ಲಾಕ್’ ಸಿನಿಮಾ ಪರಿಶುದ್ಧ ಪ್ರೇಮಕಥೆ ಆಗಿದೆ. ಯಾವುದೇ ಮುಜುಗರವಿಲ್ಲದೆ ಕುಟುಂಬದ ಸಮೇತ ಎಲ್ಲರೂ ನೋಡಬಹುದಾದ ಕೌಟುಂಬಿಕ ಕಥೆ ಇದು’ ಎಂದಿದ್ದಾರೆ ಅವರು.

ಇದನ್ನೂ ಓದಿ:ರಾಷ್ಟ್ರಪ್ರಶಸ್ತಿ ಗೆದ್ದಿರುವ ನಿತ್ಯ ಮೆನನ್ ನಟಿಸಿರುವ ಕನ್ನಡ ಸಿನಿಮಾಗಳಿವು

ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯುತ್ತದೆ‌ಯಂತೆ. ಕರಣ್ ಆರ್ಯನ್, ತ್ರಿವಿಕ್ರಮ್ ಹಾಗೂ ಚಿತ್ರದ ನಿರ್ಮಾಪಕರೂ ಆಗಿರುವ ಹೇಮಂತ್ ಕುಮಾರ್ ಈ ಚಿತ್ರದ ನಾಯಕರಾಗಿದ್ದು, ನಾಯಕಿಯರಾಗಿ ದೀಪ, ಜಗದೀಶ್, ಸೃಷ್ಟಿ , ನಿಹಾರಿಕಾ ನಟಿಸುತ್ತಿದ್ದಾರೆ. ಜಗಪ್ಪ, ಆನಂದ್, ಕರಿಬಸವ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಲೋಕಿ ತವಸ್ಯ ಸಂಗೀತ ನಿರ್ದೇಶನ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿದೆ‌ ಎಂದರು.

ನಿರ್ಮಾಪಕನಾಗಿ ಇದು ಮೊದಲ ಚಿತ್ರ . ಹೇಮಂತ್ ಸಿನಿಮಾಸ್ ಹಾಗೂ ಪರಿ ಮೂವೀ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ಮಾಣದ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸುತ್ತಿದ್ದೇನೆ ಎಂದರು ಹೇಮಂತ್ ಕೃಷ್ಣಮೂರ್ತಿ. ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ನನ್ನದು ಈ ಚಿತ್ರದಲ್ಲಿ ಕೆಳ ಮಧ್ಯಮ ವರ್ಗದ ಹುಡುಗನ ಪಾತ್ರ‌ ಎಂದರು ನಟ ಕರಣ್ ಆರ್ಯನ್. ನನ್ನ ಪಾತ್ರ ಕೂಡ ವಿಭಿನ್ನವಾಗಿದೆ. “ಬ್ಯಾಡ್ ಮ್ಯಾನರ್ಸ್” ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದರು”ಪದ್ಮಾವತಿ ” ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ್. ನಟಿಯರಾದ ದೀಪ ಜಗದೀಶ್ , ಸೃಷ್ಟಿ ಹಗೂ ನಿಹಾರಿಕಾ ಕೂಡ ಚಿತ್ರದ ಕುರಿತು ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ