ಮನಸ್ಸಿಗೆ ನೆಮ್ಮದಿಯೇ ಇಲ್ಲ’; ಥಿಯೇಟರ್ ಮುಂದೆ ದೈವಾರಾಧನೆ ಅನುಕರಣೆ ಮಾಡಿದ್ದವನ ಕ್ಷಮೆ
Kantara Chapter 1: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆದ ದಿನ ವ್ಯಕ್ತಿಯೊಬ್ಬನ ವಿಡಿಯೋ ಒಂದು ಸಹ ವೈರಲ್ ಆಗಿತ್ತು. ಸಿನಿಮಾ ಬಿಡುಗಡೆ ಆದ ದಿನ ಚಿತ್ರಮಂದಿರದ ಮುಂದೆ ವ್ಯಕ್ತಿಯೊಬ್ಬ ಮೈಮೇಲೆ ದೆವ್ವ ಬಂದವನಂತೆ ಹುಚ್ಚನಂತೆ ಆಡಿದ್ದ. ಆ ವಿಡಿಯೋ ವೈರಲ್ ಆಗಿತ್ತು. ಈಗ ಆ ವ್ಯಕ್ತಿ ಕ್ಷಮೆ ಕೇಳಿದ್ದಾನೆ.

‘ಕಾಂತಾರ’ (Kantara) ಹಾಗೂ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಕಂಡ ಬಳಿಕ ದೈವದ ವಿಷಯವು ಹೆಚ್ಚು ಬೆಳಕಿಗೆ ಬಂತು. ಕರಾವಳಿ ಭಾಗದ ಜನತೆಯ ಆಚರಣೆ ದೈವಾರಾಧನೆ ಮೇಲೆ ಈ ಸಿನಿಮಾಗಳು ಬೆಳಕು ಚೆಲ್ಲುವ ರೀತಿಯಲ್ಲಿ ಇದೆ. ಆದರೆ, ಈ ಸಿನಿಮಾ ರಿಲೀಸ್ ಆದ ಬಳಿಕ ಕೆಲವರು ಇದನ್ನು ಅನುಕರಣೆ ಮಾಡಲು ಹೋಗಿದ್ದನ್ನು ನೀವು ಕಾಣಬಹುದು. ಇದು ಸರಿ ಅಲ್ಲ ಎಂದು ಅನೇಕರು ಹೇಳುತ್ತಾ ಬರುತ್ತಿದ್ದಾರೆ. ಈಗ ಇದೇ ರೀತಿ ಮಾಡಿದ ವ್ಯಕ್ತಿಯೋರ್ವ ಕ್ಷಮೆ ಕೇಳಿದ್ದಾನೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಕಂಡಿತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಈ ಸಿನಿಮಾ ರಿಲೀಸ್ ಆದ ಬಳಿಕ ವ್ಯಕ್ತಿಯೊಬ್ಬನು ಥಿಯೇಟರ್ನ ಹೊರ ಭಾಗದಲ್ಲಿ ದೈವ ಬಂದಂತೆ ಆಡಿದ್ದನು ಮತ್ತು ಈ ವಿಡಿಯೋ ವೈರಲ್ ಆಗಿತ್ತು. ‘ರಿಷಬ್ ಅವರಲ್ಲಿ ದೇವರನ್ನು ನೋಡಿದೆ’ ಎಂದೆಲ್ಲ ಆತ ಹೇಳಿಕೊಂಡಿದ್ದ.
ಈ ವಿಡಿಯೋ ವೈರಲ್ ಆದ ಬಳಿಕ ಅನೇಕರು ವಿರೋಧ ಹೊರ ಹಾಕಿದ್ದರು. ಈ ರೀತಿ ಮಾಡೋದು ಸರಿ ಅಲ್ಲ ಎಂದು ಕೆಲವರು ಹೇಳಿದ್ದರು. ಇದು ದೈವಕ್ಕೆ ಮಾಡುವ ಅವಮಾನ ಎಂಬ ಮಾತುಗಳು ಕೂಡ ಕೇಳಿ ಬಂದವು. ಈಗ ಈ ವಿಚಾರದಲ್ಲಿ ಆ ವ್ಯಕ್ತಿ ಕ್ಷಮೆ ಕೇಳಿದ್ದಾನೆ. ಕಳೆದ ಕೆಲವು ದಿನಗಳಿಂದ ಮನಸ್ಸಿಗೆ ನೆಮ್ಮದಿ ಇಲ್ಲದಂತೆ ಆಗಿದೆ ಎಂದು ಕೋರಿರುವ ಆತನು, ಈ ರೀತಿ ಯಾರೂ ಮಾಡಲು ಹೋಗಬೇಡಿ ಎಂದು ಕೋರಿದ್ದಾನೆ. ‘ನನ್ನ ಹೆಸರು ವೆಂಕಟ್ ಎಂದು. ಇತ್ತೀಚೆಗೆ ವೈರಲ್ ಆದ ವಿಡಿಯೋ ನೋಡಿರ್ತೀರಿ. ಅದು ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ರಿಷಬ್ ಶೆಟ್ಟಿ, ಕಾಂತಾರ ಟೀಮ್ಗೆ ನನ್ನ ಕ್ಷಮೆ ಇರಲಿ. ಮಂಗಳೂರು ಜನತೆಗೆ, ತುಳು ನಾಡಿನ ಜನತೆಗೆ ಕ್ಷಮೆ ಇರಲಿ. ಪ್ಲೀಸ್ ಈ ರೀತಿ ಮಾಡಬೇಡಿ. ಈ ಘಟನೆ ಆದಾಗಿನಿಂದ ನೆಮ್ಮದಿ-ಶಾಂತಿ ಇಲ್ಲ. ನನ್ನನ್ನು ಕ್ಷಮಿಸಿ’ ಎಂದು ಆತನ ಕೋರಿಕೊಂಡಿದ್ದಾನೆ.
View this post on Instagram
ದೈವಾರಾಧನೆ ಮಾಡಲು ಅದರದ್ದೇ ಆದ ಪದ್ದತಿ ಇರುತ್ತದೆ. ಅದನ್ನು ಈ ರೀತಿ ಮಾಡುವುದು ಆ ಆಚರಣೆಗೆ ಮಾಡುವ ಅವಮಾನವೇ ಆಗಿರುತ್ತದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಕರಾವಳಿ ಸಂಸ್ಕೃತಿ ವಿಶ್ವ ಮಟ್ಟಕ್ಕೆ ಹರಡಿದೆ ಅನ್ನೋದು ವಿಶೇಷ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



