‘ಎದ್ದೇಳು ಮಂಜುನಾಥ 2’ ಚಿತ್ರದಲ್ಲಿ ಜಗ್ಗೇಶ್​ ಇರಲ್ಲ; ಹಾಗಾದರೆ ಈ ಸಿನಿಮಾದ ಹೀರೋ ಯಾರು?

‘ಎದ್ದೇಳು ಮಂಜುನಾಥ’ ಎಂದಾಗ ಜಗ್ಗೇಶ್​ ನೆನಪಾಗುತ್ತಾರೆ. ಆದರೆ ಈ ಚಿತ್ರದ 2ನೇ ಪಾರ್ಟ್ ಬರುತ್ತಿದ್ದು, ಅದರಲ್ಲಿ ಜಗ್ಗೇಶ್​ ನಟಿಸುತ್ತಿಲ್ಲ.

‘ಎದ್ದೇಳು ಮಂಜುನಾಥ 2’ ಚಿತ್ರದಲ್ಲಿ ಜಗ್ಗೇಶ್​ ಇರಲ್ಲ; ಹಾಗಾದರೆ ಈ ಸಿನಿಮಾದ ಹೀರೋ ಯಾರು?
ಗುರು ಪ್ರಸಾದ್
Follow us
TV9 Web
| Updated By: ಮದನ್​ ಕುಮಾರ್​

Updated on: Mar 07, 2022 | 9:42 AM

2009ರಲ್ಲಿ ತೆರೆಕಂಡ ‘ಎದ್ದೇಳು ಮಂಜುನಾಥ’ (Eddelu Manjunatha) ಸಿನಿಮಾವನ್ನು ಜನರು ಈಗಲೂ ನೋಡಿ ಎಂಜಾಯ್​ ಮಾಡುತ್ತಾರೆ. ನಿರ್ದೇಶಕ ಗುರುಪ್ರಸಾದ್​ ಮತ್ತು ನಟ ಜಗ್ಗೇಶ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದ ಆ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಈಗ ಆ ಸಿನಿಮಾದ ‘ಪಾರ್ಟ್​ 2’ ಬರುತ್ತಿದೆ. ಹೌದು, ‘ಎದ್ದೇಳು ಮಂಜುನಾಥ 2’ ಚಿತ್ರವನ್ನು ಜನರ ಮುಂದಿಡಲು ನಿರ್ದೇಶಕ ಗುರುಪ್ರಸಾದ್​ (Mata Guruprasad) ಅವರು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಹೀರೋ ಜಗ್ಗೇಶ್​ ಅಲ್ಲ! ಮಾ.6ರಂದು ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಅನೇಕ ವಿಚಾರಗಳನ್ನು ಗುರುಪ್ರಸಾದ್​ ಹಂಚಿಕೊಂಡರು. ವಿಶೇಷ ಏನೆಂದರೆ ‘ಎದ್ದೇಳು ಮಂಜುನಾಥ 2’ (Eddelu Manjunatha 2) ಸಿನಿಮಾದಲ್ಲಿ ಅವರೇ ಹೀರೋ ಆಗಿ ನಟಿಸುತ್ತಿದ್ದಾರೆ. ಆದರೆ ಈ ಪಾತ್ರವನ್ನು ಹೀರೋ ಎನ್ನುವ ಬದಲು ಕಥಾನಾಯಕ ಎಂದು ಅವರು ಹೇಳಿಕೊಂಡಿದ್ದಾರೆ. ಒಟ್ಟಾರೆ ಈ ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬುದರ ಬಗ್ಗೆ ಅವರು ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ರಚಿತಾ ಮಹಾಲಕ್ಷ್ಮೀ ಅಭಿನಯಿಸಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್​ ಕೂಡ ಮುಕ್ತಾಯ ಆಗಿದೆ.

‘ಮಂಜುನಾಥನ ಪಾತ್ರ ಎಂದರೆ ಒಬ್ಬ ವ್ಯಕ್ತಿಯ ಸೋಮಾರಿತನ ಅಂತ ಬಿಂಬಿಸಿದ್ದೆ. ಈಗ ಬೇರೆ ವಿಚಾರ ತರುತ್ತೇನೆ. ಕನ್ನಡ ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿಗೆ ಆ ರೀತಿಯ ಒಂದು ಪಾತ್ರ ಬರುತ್ತಿದೆ. ಅದನ್ನು ನಾನೇ ನಿಭಾಯಿಸಿದ್ದೇನೆ. ಅದೇನು ಎಂಬುದನ್ನು ನಾನು ಈಗ ಹೇಳಲ್ಲ. ಜನರು ಚಿತ್ರಮಂದಿರದಲ್ಲಿಯೇ ನೋಡಬೇಕು. ನಾನು ನೋಡಿದ, ಅನುಭವಿಸಿದ ಅನೇಕ ಯಾತನೆಗಳು ಇದರಲ್ಲಿ ಇದೆ. ಈ ಸಿನಿಮಾ ಸಾಕಷ್ಟು ನಗಿಸುತ್ತದೆ’ ಎಂದು ಗುರು ಪ್ರಸಾದ್​ ಹೇಳಿದ್ದಾರೆ.

‘ಶರತ್​ ಲೋಹಿತಾಶ್ವ ಅವರು ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೆಂಡತಿಯನ್ನು ಯಾಕೆ ಕೊಂದೆ ಎಂದು ನನ್ನನ್ನು ವಿಚಾರಣೆ ನಡೆಸುವ ಪಾತ್ರ ಅವರದ್ದು. ಯಾಕೆ ಕೊಂದೆ ಎಂಬ ಪ್ರಶ್ನೆಗೆ ದ್ವಿತೀಯಾರ್ಧದಲ್ಲಿ ಉತ್ತರ ಸಿಗತ್ತೆ’ ಎಂದು ಹೇಳಿರುವ ನಿರ್ದೇಶಕರು, ‘ಈ ಚಿತ್ರದಲ್ಲಿ ಸಾಕಷ್ಟು ಬಾಂಬ್​ಗಳಿವೆ’ ಅಂತ ಕೂಡ ಹೇಳಿದ್ದಾರೆ. ಆ ಮೂಲಕ ಕೌತುಕ ಮೂಡಿಸಲು ಪ್ರಯತ್ನಿಸಿದ್ದಾರೆ. ಹಾಗಾದರೆ ಆ ಬಾಂಬ್​ಗಳು ಯಾವುವು? ಅದರ ಬಗ್ಗೆ ಅವರು ಬೇರೆಯದೇ ರೀತಿಯಲ್ಲಿ ಉತ್ತರಿಸಿದ್ದಾರೆ.

‘ಬಾಂಬ್​ ಎಲ್ಲಿ ಮುಚ್ಚಿಟ್ಟಿದ್ದೇವೆ ಎಂಬುದನ್ನು ಮೊದಲೇ ಹೇಳಿದರೆ ಆ ಕೌತುಕ ಹೋಗುತ್ತದೆ. ದೇವರನ್ನು ನಂಬಿ ಬದುಕುವಂತಹ ವ್ಯಕ್ತಿ ಈ ಸಿನಿಮಾ ನೋಡಿದರೆ ದೇವರು ಇದ್ದಾನೋ ಇಲ್ಲವೋ ಎಂಬುಷ್ಟು ಚರ್ಚೆ ಮಾಡುವ ರೀತಿಯಲ್ಲಿ ಬಾಂಬ್​ ಇಟ್ಟಿದ್ದೇನೆ’ ಎಂದಿದ್ದಾರೆ ಗುರುಪ್ರಸಾದ್​. ಇದಕ್ಕೆ ಅವರು ಬಾಂಬ್​ ಅನ್ನೋದು ಯಾಕೆ? ಬಾಂಬ್​ ಅಂದ್ರೆ ವಿವಾದಗಳು ಎಂದುಕೊಳ್ಳಬಹುದಾ? ಅದನ್ನೂ ಅವರು ವಿವರಿಸಿದ್ದಾರೆ.

‘ಇದು ವಿವಾದ ಅಲ್ಲ. ಬರೀ ಮನರಂಜನೆ. ನನ್ನ ಪಾಲಿಗೆ ಅದು ವಿಚಾರ. ನಿಮ್ಮ ಪಾಲಿಗೆ ಅದು ವಿವಾದ ಆಗಿರಬಹುದು. ಈ ಸಿನಿಮಾ ಒಂದು ಸೀಕ್ವೆಲ್​ ಅಲ್ಲ. ಆದರೆ ಎದ್ದೇಳು ಮಂಜುನಾಥ ಎಂಬ ಶೀರ್ಷಿಕೆಗೆ ನ್ಯಾಯ ಕೊಡುತ್ತೇನೆ. ಒಂದು ಹಾಡು ಈ ಚಿತ್ರದಲ್ಲಿ ಇದೆ. ಪ್ರೇಮಕ್ಕೆ ಎರಡು ಮುಖ ಇರತ್ತೆ. ಕರ್ಕಶ ಮತ್ತು ಮಾಧುರ್ಯ ಕೂಡ ಪ್ರೇಮದಲ್ಲಿ ಇರುತ್ತದೆ. ಕಥೆಗೆ ಅನುಗುಣವಾಗಿ ಪ್ರೇಮ ಎಂಬುದು ಬೇರೆ ಬೇರೆ ರೀತಿಯಲ್ಲಿ ಬಿಂಬಿತ ಆಗುತ್ತದೆ’ ಎಂದಿದ್ದಾರೆ ಗುರು ಪ್ರಸಾದ್​.

ಇದನ್ನೂ ಓದಿ:

3 ತಿಂಗಳ ರಾಯರ ಸೇವೆ ಬಳಿಕ ನಡೆದಿದ್ದು ಪವಾಡ; ಬದುಕಿನ ಅಚ್ಚರಿಯ ವಿಚಾರ ತೆರೆದಿಟ್ಟ ನಟ ಜಗ್ಗೇಶ್​

ನಿರ್ದೇಶಕ ಗುರುಪ್ರಸಾದ್​ ಬರುತ್ತಿದ್ದಂತೆ ಕರ್ಪೂರ ಹಚ್ಚಿ ಈಡುಗಾಯಿ ಒಡೆದು ಮನಸು ಗೆಲ್ಲಬೇಕು ಅಂದುಕೊಂಡಿದ್ದೆ, ಆದರೆ ಆಗಿದ್ದೇ ಬೇರೆ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು