ರೇಣುಕಾ ಸ್ವಾಮಿ ಕೊಲೆ: ಆರೋಪಿಗಳ ಭೀಕರತೆ ತೆರೆದಿಟ್ಟ ಸರ್ಕಾರಿ ವಕೀಲ

Renuka Swamy: ರೇಣುಕಾ ಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಈ ವೇಳೆ ಕೊಲೆಯ ಭೀಕರತೆ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬಿದ್ದಿವೆ. ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಪಾತ್ರ ಏನೆಂಬುದು ಸಹ ಬಹಿರಂಗವಾಗಿದೆ.

ರೇಣುಕಾ ಸ್ವಾಮಿ ಕೊಲೆ: ಆರೋಪಿಗಳ ಭೀಕರತೆ ತೆರೆದಿಟ್ಟ ಸರ್ಕಾರಿ ವಕೀಲ
ದರ್ಶನ್​, ಪವಿತ್ರಾ ಗೌಡ, ರೇಣುಕಾ ಸ್ವಾಮಿ
Follow us
ಮಂಜುನಾಥ ಸಿ.
|

Updated on: Aug 28, 2024 | 4:19 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳೆಲ್ಲರಿಗೂ ಇಂದು (ಆಗಸ್ಟ್ 28) ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಇದೇ ದಿನ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯೂ ನಡೆದಿದೆ. ವಿಚಾರಣೆ ವೇಳೆ ಜಾಮೀನಿಗೆ ವಿರೋಧ ವ್ಯಕ್ತಪಡಿಸಿರುವ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸುತ್ತಾ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಕೆಲ ಘಟನೆಗಳನ್ನು ನ್ಯಾಯಾಲಯದ ಮುಂದೆ ಇರಿಸಿದ್ದಾರೆ. ಸರ್ಕಾರಿ ವಕೀಲರು ಹೇಳಿರುವ ಘಟನೆಗಳು ಆರೋಪಿಗಳು ಅದೆಷ್ಟು ವ್ಯವಸ್ಥಿತವಾಗಿ ಹಾಗೂ ಭೀಕರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆಂಬುದನ್ನು ತಿಳಿಸುತ್ತಿದೆ.

ರೇಣುಕಾ ಸ್ವಾಮಿ, ಪವಿತ್ರಾಗೆ ಸಂದೇಶ ಕಳಿಸಿದಾಗ ಆ ಮೊಬೈಲ್ ಸಂಖ್ಯೆಯನ್ನು ಪವಿತ್ರಾ ಗೌಡ ಆರೋಪಿ ಪವನ್​ಗೆ ನೀಡಿದ್ದಾರೆ. ರೇಣುಕಾ ಸ್ವಾಮಿ, ಪವಿತ್ರಾ ಗೌಡ ಎಂದುಕೊಂಡು ಪವನ್ ಜೊತೆಗೆ ಸಂದೇಶದಲ್ಲಿ ಮಾತನಾಡಿದ್ದಾನೆ. ಪವನ್ ಮೊಬೈಲ್ ಮೂಲಕವೇ ಪವಿತ್ರಾ ಗೌಡ ಸಹ ರೇಣುಕಾ ಸ್ವಾಮಿ ಜೊತೆ ಮಾತನಾಡಿದ್ದಾರೆ.

ರೇಣುಕಾ ಸ್ವಾಮಿಯ ಲೊಕೇಶನ್ ಪಡೆದುಕೊಂಡು ಪ್ರಕರಣದ ಆರೋಪಿಗಳಾದ ಚಿತ್ರದುರ್ಗದ ರಾಘವೇಂದ್ರ, ವಿನಯ್, ಜಗ್ಗ, ಅನು, ರವಿ ಎಂಬುವರ ನೆರವಿನೊಂದಿಗೆ ಸಂತ್ರಸ್ತ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಲಾಗಿದೆ. ರೇಣುಕಾ ಸ್ವಾಮಿಯನ್ನು ಅಪರಹರಣ ಮಾಡಿರುವ ವಿಡಿಯೋಗಳು ಸಿಸಿಟಿವಿಗಳಲ್ಲಿ ಪತ್ತೆಯಾಗಿದ್ದು, ಅವನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ-ದರ್ಶನ್ ಪ್ರಕರಣ: ಅಂತಿಮ ಹಂತ ತಲುಪಿದ ತನಿಖೆ

ರೇಣುಕಾ ಸ್ವಾಮಿಯನ್ನು ಶೆಡ್​ಗೆ ಕರೆತಂದು ಹಲ್ಲೆ ಮಾಡಲಾಗಿದೆ. ಆ ನಂತರ ಪ್ರಕರಣದ ಎ3 ಪವನ್ ಹೋಗಿ ಸ್ಟೋನಿ ಬ್ರೂಕ್​ ರೆಸ್ಟೊರೆಂಟ್​ನಲ್ಲಿ ಪಾರ್ಟಿ ಮಾಡುತ್ತಿದ್ದ ದರ್ಶನ್​ಗೆ ವಿಷಯ ಮುಟ್ಟಿಸಿದ್ದಾನೆ. ಬಳಿಕ ಎ10 ಆರೋಪಿ ವಿನಯ್ ಹಾಗೂ ಎ14 ಆರೋಪಿ ಪ್ರದೋಶ್ ಅನ್ನು ಜೊತೆಗೆ ಕರೆದುಕೊಂಡ ದರ್ಶನ್ ಅಲ್ಲಿಂದ ಪವಿತ್ರಾ ಗೌಡ ಮನೆಗೆ ಹೋಗಿ, ಪವಿತ್ರಾರನ್ನು ಕರೆದುಕೊಂಡು ಕಪ್ಪು ಬಣ್ಣದ ಸ್ಕಾರ್ಪಿಯೋನಲ್ಲಿ ಪಟ್ಟಣಗೆರೆ ಶೆಡ್​ಗೆ ತೆರಳಿದ್ದಾರೆ.

ದರ್ಶನ್, ಪವಿತ್ರಾ, ವಿನಯ್, ಪ್ರದೋಶ್ ಶೆಡ್​ಗೆ ಬಂದು ರೇಣುಕಾ ಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಬಿದಿರಿನ ದೊಣ್ಣೆಯಿಂದ ಹೊಡೆಯಲಾಗಿದೆ. ರೇಣುಕಾ ಸ್ವಾಮಿಯ ಬಟ್ಟೆ ಕಿತ್ತು ಹಾಕಲಾಗಿದೆ. ಮರ್ಮಾಂಗದ ಮೇಲೂ ಹಲ್ಲೆ ಮಾಡಲಾಗಿದೆ. ರೇಣುಕಾ ಸ್ವಾಮಿ ಧರಿಸಿದ್ದ ಚಿನ್ನದ ಆಭರಣ ಹಾಗೂ ಧರಿಸಿದ್ದ ಲಿಂಗವದ್ದ ಕರಡಿಗೆ, ಕೈ ಗಡಿಯಾರಗಳನ್ನು ಕಿತ್ತುಕೊಳ್ಳಲಾಗಿದೆ. ಈ ವೇಳೆ ರೇಣುಕಾ ಸ್ವಾಮಿ ಕೈ ಮುಗಿದು ಬಿಟ್ಟು ಬಿಡುವಂತೆ ಬೇಡಿಕೊಂಡಿದ್ದಾನೆ. ಆತ ಬೇಡಿಕೊಳ್ಳುತ್ತಿರುವ ಚಿತ್ರವನ್ನು ತೆಗೆದುಕೊಳ್ಳಲಾಗಿದೆ. ಅದನ್ನು ಕೆಲವರಿಗೆ ವಾಟ್ಸ್​​ ಆಪ್​ ಮೂಲಕ ಕಳಿಸಲಾಗಿದೆ. ಆ ಬಳಿಕ ರೇಣುಕಾ ಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ಸಹ ನೀಡಿ ಕೊಲ್ಲಲಾಗಿದೆ.

ಹೊಡೆದಿರುವ ಹೊಡೆತಕ್ಕೆ ರೇಣುಕಾ ಸ್ವಾಮಿಯ ಶ್ವಾಸಕೋಶದ ಮೂಳೆಗಳು ಮುರಿದಿವೆ. ಹಲವು ಆಂತರಿಕ ಮತ್ತು ಬಹಿರಂಗ ಗಾಯಗಳಾಗಿವೆ. ಈ ಹಲ್ಲೆ ಮತ್ತು ಹತ್ಯೆಯ ಒಳಸಂಚಿನಲ್ಲಿ ಪವಿತ್ರಾ ಗೌಡ ಸಹ ಭಾಗಿಯಾಗಿದ್ದಾರೆ. ಆಕೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶ ಕಾನೂನಿನಲ್ಲಿದೆ. ಅಲ್ಲದೆ ಮಹಿಳೆ ಎಂಬ ಏಕೈಕ ಕಾರಣಕ್ಕೆ ಆಕೆಗೆ ಜಾಮೀನು ನೀಡುವಂತಿಲ್ಲ ಎಂದು ಸರ್ಕಾರಿ ವಕೀಲರು ಇಂದು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ