‘ಈ ಇಂಡಸ್ಟ್ರಿ ಗೆಳೆಯರನ್ನು ಮಾಡಿಕೊಳ್ಳೋ ಜಾಗವಲ್ಲ, ಅವರೇ ತುಳಿಯುತ್ತಾರೆ’; ನಮ್ರತಾ ಗೌಡ

| Updated By: ರಾಜೇಶ್ ದುಗ್ಗುಮನೆ

Updated on: May 28, 2024 | 8:57 AM

ನಮ್ರತಾ ಗೌಡ ಅವರು ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದವರು. ನಂತರ ನಾಯಕಿ ಆದರು. ‘ನಾಗಿಣಿ 2’ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದರು. ಬಿಗ್ ಬಾಸ್ ಅವರ ಖ್ಯಾತಿಯನ್ನು ಹೆಚ್ಚಿಸಿದೆ. ಈಗ ನಮ್ರತಾ ಅವರು ಬಣ್ಣದ ಲೋಕದ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ್ದಾರೆ.

‘ಈ ಇಂಡಸ್ಟ್ರಿ ಗೆಳೆಯರನ್ನು ಮಾಡಿಕೊಳ್ಳೋ ಜಾಗವಲ್ಲ, ಅವರೇ ತುಳಿಯುತ್ತಾರೆ’; ನಮ್ರತಾ ಗೌಡ
ನಮ್ರತಾ
Follow us on

ನಮ್ರತಾ ಗೌಡ (Namratha Gowda) ಅವರ ಸ್ವಭಾವ ತುಂಬಾನೇ ಡಿಫರೆಂಟ್. ಅವರು ಎಲ್ಲರ ಜೊತೆಗೂ ಅಷ್ಟಾಗಿ ಬೆರೆಯುವುದಿಲ್ಲ. ಅವರು ಬಿಗ್ ಬಾಸ್​ಗೆ ಹೋದಾಗ ಮೈಕಲ್ ಹಾಗೂ ವಿನಯ್ ಜೊತೆ ಮಾತ್ರ ಹೆಚ್ಚು ಅನ್ಯೋನ್ಯವಾಗಿದ್ದರು. ಅವರನ್ನು ಹೆಚ್ಚು ನಂಬುತ್ತಿದ್ದರು. ಉಳಿದವರ ಜೊತೆ ಅವರು ಅಂತರ ಕಾಯ್ದುಕೊಂಡಿದ್ದರು. ನಿಜ ಜೀವನದಲ್ಲೂ ನಮ್ರತಾ ಗೌಡ ಇರೋದೇ ಹೀಗೆ. ಅದಕ್ಕೆ ಇಂಡಸ್ಟ್ರಿಯಲ್ಲಿ ಆದ ಅನುಭವಗಳೇ ಕಾರಣ.

ನಮ್ರತಾ ಗೌಡ ಅವರು ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದವರು. ನಂತರ ನಾಯಕಿ ಆದರು. ‘ನಾಗಿಣಿ 2’ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದರು. ಬಿಗ್ ಬಾಸ್ ಅವರ ಖ್ಯಾತಿಯನ್ನು ಹೆಚ್ಚಿಸಿದೆ. ಈಗ ನಮ್ರತಾ ಅವರು ಬಣ್ಣದ ಲೋಕದ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ್ದಾರೆ. ಈ ಇಂಡಸ್ಟ್ರಿಯಲ್ಲಿ ಗೆಳೆಯನರನ್ನು ಮಾಡಿಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.

ರ‍್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ನಮ್ರತಾ ಮಾತನಾಡಿದ್ದಾರೆ. ‘ನನ್ನ ಫ್ರೆಂಡ್ಸ್​ ಸರ್ಕಲ್ ತುಂಬಾನೇ ಚಿಕ್ಕದು. ಹಾಯ್ ಬಾಯ್ ಅನ್ನೋರು ತುಂಬಾ ಜನ ಇದಾರೆ. ಆದರೆ ಆಪ್ತರು ಅಂತ ಇರೋರು 6-7 ಮಂದಿ ಮಾತ್ರ. ಈ ಇಂಡಸ್ಟ್ರಿ ಫ್ರೆಂಡ್ಸ್ ಮಾಡಿಕೊಳ್ಳೋ ಜಾಗ ಅಲ್ಲ. ನನ್ನ ಕಾಂಪಿಟ್​ನ ನೋಡಿದ್ರೆ ನನಗೆ ಇನ್​ಸೆಕ್ಯೂರ್ ಅನಿಸಲ್ಲ, ಯಾವಾಗಲೂ ಜಲಸ್ ಫೀಲ್ ಆಗಲ್ಲ. ಆದರೆ, ಎಲ್ಲರಿಗೂ ಇದೇ ರೀತಿ ಆಗುವುದಿಲ್ಲ’ ಎಂದಿದ್ದಾರೆ ನಮ್ರತಾ.

ಇದನ್ನೂ ಓದಿ: ‘ಬಿಗ್ ಬಾಸ್’ ಬಳಿಕ ನಮ್ರತಾ ಗೌಡ ಜೀವನದಲ್ಲಿ ಆದ ಬದಲಾವಣೆ ಒಂದೆರಡಲ್ಲ; ವಿವರಿಸಿದ ನಟಿ

ಯಾವುದೇ ಇಂಡಸ್ಟ್ರಿಗೆ ಹೋದರು ತುಳಿದು ಮೇಲೆ ಬರೋಕೆ ಪ್ರಯತ್ನಿಸುವವರು ಕೆಲವರು ಇರುತ್ತಾರೆ. ಬಣ್ಣದ ಲೋಕದಲ್ಲಿ ಇದು ಸ್ವಲ್ಪ ಹೆಚ್ಚೇ ಇದೆ ಅನ್ನೋದು ಕೆಲವರ ಆರೋಪ. ನಮ್ರತಾ ಗೌಡ ಅವರಿಗೆ ಈ ಬಗ್ಗೆ ಅನುಭವ ಆಗಿದೆ. ‘ಈ ಇಂಡಸ್ಟ್ರಿಯಲ್ಲಿ ತುಳಿದು ಮೇಲಿ ಬರೋಕೆ ನೋಡ್ತಾರೆ. ಅದೆಲ್ಲ ಅನುಭವಿಸಿದ್ದೇನೆ. ಟ್ರ್ಯೂ ಆಗಿ ನನ್ನ ಬೆಂಬಲಿಸುವವರನ್ನು ಮಾತ್ರ ಜೊತೆಯಲ್ಲಿ ಇಟ್ಟುಕೊಳ್ಳುತ್ತೇನೆ. ಎಲ್ಲವನ್ನೂ ಖಾಸಗಿಯಾಗಿ ಇಡುತ್ತೇನೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.