AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Matte Maduve: ಪವಿತ್ರಾ ಲೋಕೇಶ್​-ನರೇಶ್​ ಸಂಸಾರ ಹೇಗಿದೆ ಎಂಬುದಕ್ಕೆ ‘ಉರುಳೋ ಕಾಲವೇ..’ ಉತ್ತರ

Naresh | Pavithra Lokesh: ಟೀಸರ್​ ಮೂಲಕ ‘ಮತ್ತೆ ಮದುವೆ’ ಸಿನಿಮಾ ಗಮನ ಸೆಳೆದಿತ್ತು. ಈಗ ಈ ಚಿತ್ರದ ಮೊದಲ ಸಾಂಗ್​ ಬಿಡುಗಡೆ ಆಗಿದೆ. ಸಂತೋಷ್ ವೆಂಕಿ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.

Matte Maduve: ಪವಿತ್ರಾ ಲೋಕೇಶ್​-ನರೇಶ್​ ಸಂಸಾರ ಹೇಗಿದೆ ಎಂಬುದಕ್ಕೆ ‘ಉರುಳೋ ಕಾಲವೇ..’ ಉತ್ತರ
ನರೇಶ್, ಪವಿತ್ರಾ ಲೋಕೇಶ್
ಮದನ್​ ಕುಮಾರ್​
|

Updated on:Apr 28, 2023 | 5:10 PM

Share

ಪವಿತ್ರಾ ಲೋಕೇಶ್​ (Pavithra Lokesh) ಮತ್ತು ನರೇಶ್​ (Naresh) ಅವರ ರಿಯಲ್​ ಲೈಫ್​ ಘಟನೆಗಳು ಸಾಕಷ್ಟು ವಿವಾದಕ್ಕೆ ಕಾರಣ ಆಗಿದ್ದವು. ಅವರಿಬ್ಬರು ಜೋಡಿಯಾಗಿ ಮತ್ತೆ ಮದುವೆ’ (Matte Maduve) ಸಿನಿಮಾದಲ್ಲಿ ನಟಿಸಿರುವುದು ಪ್ರೇಕ್ಷಕರಲ್ಲಿ ಕೌತುಕ ಮೂಡಿಸಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಟೀಸರ್​ ಬಿಡುಗಡೆ ಆಗಿತ್ತು. ಅದನ್ನು ನೋಡಿ ಪ್ರೇಕ್ಷಕರಿಗೆ ಖಂಡಿತಾ ಅಚ್ಚರಿ ಆಗಿತ್ತು. ಅದರ ಬೆನ್ನಲ್ಲೇ ಈಗ ಈ ಚಿತ್ರದ ಮೊದಲ ಹಾಡು ರಿಲೀಸ್​ ಆಗಿದೆ. ‘ಉರುಳೋ ಕಾಲವೇ..’ ಎಂಬ ಹಾಡಿನ ಸಾಹಿತ್ಯದಲ್ಲಿ ಕಥೆಯ ಬಗ್ಗೆ ಒಂದಷ್ಟು ಹಿಂಟ್ಸ್​ ನೀಡಲಾಗಿದೆ. ಇದು ಲಿರಿಕಲ್​ ವಿಡಿಯೋ ಆಗಿದ್ದು, ಜೊತೆಗೆ ಮೇಕಿಂಗ್​ ತುಣುಕುಗಳು ಗಮನ ಸೆಳೆಯುತ್ತಿವೆ. ‘ಉರುಳೋ ಕಾಲವೇ..’ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ. ಸಂತೋಷ್ ವೆಂಕಿ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಎಂ.ಎಸ್. ರಾಜು ಅವರು ‘ಮತ್ತೆ ಮದುವೆ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಮೂಲಕ ನರೇಶ್ ಅವರು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಕೌಟುಂಬಿಕ ಕಹಾನಿ ಇದೆ ಎನ್ನಲಾಗಿದೆ. ಎಂ.ಎಸ್. ರಾಜು ಅವರು ನಿರ್ದೇಶನದ ಜೊತೆಗೆ ಕಥೆಯನ್ನೂ ಬರೆದಿದ್ದಾರೆ. ನರೇಶ್​, ಪವಿತ್ರಾ ಲೋಕೇಶ್​ ಜೊತೆ ಜಯಸುಧಾ ಮತ್ತು ಶರತ್ ಬಾಬು ಕೂಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇದನ್ನೂ ಓದಿ
Image
Matte Maduve: ತಮ್ಮದೇ ಸಂಸಾರದ ಕಿರಿಕ್​ ಕಥೆಯನ್ನು ಇಟ್ಟುಕೊಂಡು ‘ಮತ್ತೆ ಮದುವೆ’ ಸಿನಿಮಾ ಮಾಡಿದ ನರೇಶ್​-ಪವಿತ್ರಾ?
Image
‘ಮತ್ತೆ ಮದುವೆ’ ಆದ ಬಳಿಕ ಮನೆ ಎದುರು ರಂಗೋಲಿ ಹಾಕುತ್ತಾ ಕುಳಿತ ಪವಿತ್ರಾ ಲೋಕೇಶ್
Image
Naresh-Pavithra: ಮದುವೆ ಮುಗಿದ ಕೂಡಲೇ ದುಬೈಗೆ ಹಾರಿದ ನರೇಶ್-ಪವಿತ್ರಾ ಲೋಕೇಶ್ ಜೋಡಿ
Image
ಮೂರನೇ ಪತ್ನಿಗೆ ವಿಚ್ಛೇದನ ಕೊಡದೆ ನಾಲ್ಕನೇ ಮದುವೆ ಆದ ನರೇಶ್​; ಕಾನೂನು ತೊಡಕುಗಳೇನು?

ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧೂ ಮುಂತಾದವರು ಸಹ ‘ಮತ್ತೆ ಮದುವೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಅರುಲ್ ದೇವ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎಂ.ಎನ್. ಬಾಲ್ ರೆಡ್ಡಿ ಛಾಯಾಗ್ರಹಣ ಮಾಡಿದ್ದಾರೆ. ಜುನೈದ್ ಸಿದ್ದಿಕಿ ಸಂಕಲನ ಈ ಚಿತ್ರಕ್ಕಿದೆ. ಹಲವು ಕಾರಣಗಳಿಂದಾಗಿ ‘ಮತ್ತೆ ಮದುವೆ’ ಸಿನಿಮಾ ಕೌತುಕ ಮೂಡಿಸಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಮೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

Matte Maduve: ತಮ್ಮದೇ ಸಂಸಾರದ ಕಿರಿಕ್​ ಕಥೆಯನ್ನು ಇಟ್ಟುಕೊಂಡು ‘ಮತ್ತೆ ಮದುವೆ’ ಸಿನಿಮಾ ಮಾಡಿದ ನರೇಶ್​-ಪವಿತ್ರಾ?

ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿರುವ ಪವಿತ್ರಾ ಲೋಕೇಶ್​ ಮತ್ತು ನರೇಶ್​ ಅವರ ರಿಯಲ್​ ಲೈಫ್​ನಲ್ಲಿ ನಡೆದ ಘಟನೆಗಳನ್ನೇ ಈ ಸಿನಿಮಾದಲ್ಲಿ ಮರುಸೃಷ್ಟಿ ಮಾಡಲಾಗಿದೆ. ಮೈಸೂರಿನ ಹೋಟೆಲ್​ನಲ್ಲಿ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಅವರು ಜೊತೆಯಾಗಿ ಇದ್ದಾಗ ರಮ್ಯಾ ಅವರು ದಾಳಿ ಮಾಡಿದ್ದರು. ಆಗ ನರೇಶ್​ ಅವರು ಶಿಳ್ಳೆ ಹಾಕುತ್ತಾ ಪವಿತ್ರಾ ಜೊತೆ ಹೋಟೆಲ್​ ರೂಮ್​ನಿಂದ ಹೊರಗೆ ಬಂದಿದ್ದರು. ಆ ದೃಶ್ಯ ಕೂಡ ‘ಮತ್ತೆ ಮದುವೆ’ ಟೀಸರ್​ನಲ್ಲಿ ಹೈಲೈಟ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:10 pm, Fri, 28 April 23