ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಹೊಸ ನಿಯಮಗಳ ಪಟ್ಟಿ ಸಿದ್ಧ; ಪಾಲಿಸಲೇ ಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

ಆಕ್ಷನ್ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿಯಮಗಳನ್ನು ಪಾಲಿಸಲು ಫಿಲ್ಮ್ ಚೇಂಬರ್ ತೀರ್ಮಾನಿಸಿದೆ. ಚಿತ್ರೀಕರಣದ ಸ್ಥಳದಲ್ಲಿ ಪಾಲಿಸಬೇಕಾದ ನಿಯಮಗಳ ಪಟ್ಟಿಯನ್ನು ಚೇಂಬರ್ ಸಿದ್ಧಪಡಿಸಿದೆ.

ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಹೊಸ ನಿಯಮಗಳ ಪಟ್ಟಿ ಸಿದ್ಧ; ಪಾಲಿಸಲೇ ಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ
ಸಾಂಕೇತಿಕ ಚಿತ್ರ
Follow us
TV9 Web
| Updated By: shivaprasad.hs

Updated on:Aug 17, 2021 | 5:14 PM

ಚಿತ್ರೀಕರಣದ ವೇಳೆ ಹೊಸ ನಿಯಮ ಜಾರಿ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರದ ನಿರ್ಧಾರದ ಬಗ್ಗೆ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಅದರ ಆಧಾರದಲ್ಲಿ ಒಂದಷ್ಟು ನಿಯಮ ಪಾಲನೆ ಮಾಡಲು ನಿರ್ಧರಿಸಲಾಗಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಹೇಳಿಕೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅಧಿಕಾರಿಗಳ ಜೊತೆ ಚರ್ಚಿಸಿದ ಆಧಾರದಲ್ಲಿ ಚಿತ್ರೀಕರಣದ ಸ್ಥಳದಲ್ಲಿ ಒಂದಷ್ಟು ನಿಯಮಗಳನ್ನು ಕಠಿಣವಾಗಿ ಪಾಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಚಿತ್ರೀಕರಣದ ವೇಳೆ ಪಾಲಿಸಲು ನಿರ್ಧರಿಸಲಾಗಿರುವ ನಿಯಮಗಳು:

ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಹೊಸ ನಿಯಮಾವಳಿಗಳ​ ಲೀಸ್ಟ್ ತಯಾರಿಸಲಾಗಿದೆ. ಫೈಟರ್ಸ್ ಹಾಗೂ ಕಾರ್ಮಿಕರಿಗೆ ಇನ್ಶೂರೆನ್ಸ್​ ಕಡ್ಡಾಯವಾಗಿದ್ದು, ಇನ್ಶೂರೆನ್ಸ್ ಇರುವ ಫೈಟರ್ಸ್​ಗಳನ್ನು ಮಾತ್ರ ಚಿತ್ರೀಕರಣಕ್ಕೆ ಬಳಸಬೇಕು ಎಂದು ತೀರ್ಮಾನಿಸಲಾಗಿದೆ. ಸಾಹಸ ದೃಶ್ಯ, ರಿಸ್ಕಿ ದೃಶ್ಯ ಶೂಟಿಂಗ್ ವೇಳೆ ಮುಂಜಾಗ್ರತೆಯನ್ನು ಕಡ್ಡಾಯವಾಗಿ ವಹಿಸಬೇಕಾಗಿದ್ದು, ಚಿತ್ರೀಕರಣ ಸ್ಥಳದಲ್ಲಿ ಆ್ಯಂಬುಲೆನ್ಸ್, ವೈದ್ಯರು, ನರ್ಸ್ ಹಾಗೂ ಪ್ರಥಮ ಚಿಕಿತ್ಸೆಯ ಸೌಲಭ್ಯ ಕಡ್ಡಾಯವಾಗಿ ಇರಬೇಕು.

ನಿರ್ಮಾಪಕರು ಗುಂಪು ವಿಮೆ ಮಾಡಿಸುವುದು ಕಡ್ಡಾಯವಾಗಿದ್ದು, ಫೈಟರ್ಸ್, ಕಾರ್ಮಿಕರು ಸ್ವಯಂ ಪ್ರೇರಿತರಾಗಿ ಒಪ್ಪಿ ಸಹಿ ಸಹಿ ಮಾಡಿ ಒಪ್ಪಂದ ಪತ್ರ ಮಾಡಿಕೊಳ್ಳಬೇಕು. ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ನುರಿತ ಫೈಟ್ ಮಾಸ್ಟರ್ ನೇಮಕ‌ ಮಾಡಿ ಚಿತ್ರೀಕರಣ ನಡೆಸಬೇಕು. ಒಂದು ವೇಳೆ ಕಾರ್ಮಿಕರಿಗೆ ತೊಂದರೆ ಆದರೆ ವಿಭಾಗದ ಮುಖ್ಯಸ್ಥರೇ ಹೊಣೆ ಹೊರಬೇಕಾಗುತ್ತದೆ ಎಂದು ನಿಯಮಾವಳಿಗಳಲ್ಲಿ ತಿಳಿಸಲಾಗಿದೆ. ನವೆಂಬರ್ 1ರಿಂದ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಚೇಂಬರ್ ಮಾಹಿತಿ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎಂ.ಎನ್.ಸುರೇಶ್, ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ಮಾಪಕ ಸಾರಾ ಗೋವಿಂದು ಒಕ್ಕೂಟದಿಂದ ರವೀಂದ್ರ ನಾಥ್, ಫೈಟ್ ಮಾಸ್ಟರ್ ಥ್ರಿಲ್ಲರ್ ಮುಂಜು, ಡಿಫರೆಂಟ್ ಡಾನಿ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚೆಗಷ್ಟೇ ‘ಲವ್​ ಯೂ ರಚ್ಚು’ ಚಿತ್ರೀಕರಣದ ಸಂದರ್ಭದಲ್ಲಿ ಫೈಟರ್ ವಿವೇಕ್ ನಿಧನವಾಗಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಚಿತ್ರೀಕರಣಕ್ಕೆ ಹೊಸ ನಿಯಮಾವಳಿ ರೂಪಿಸುತ್ತೇವೆ ಎಂದು ಘೋಷಿಸಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ವಿವಿಧ ಸಂಘಟನೆಗಳ ಸಭೆಯನ್ನೂ ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ನಡೆಸಲಾಗಿತ್ತು. ಈಗ ಫಿಲ್ಮ್ ಚೇಂಬರ್ ಚಿತ್ರೀಕರಣದ ವೇಳೆ ಪಾಲಿಸಬೇಕಾದ ನಿಯಮಾವಳಿಗಳನ್ನು ತಿಳಿಸಿದೆ.

ಇದನ್ನೂ ಓದಿ:

ಸುದೀಪ್​ ನಿರ್ದೇಶನದಲ್ಲಿ ಶಿವಣ್ಣ ನಟನೆ; ಹೊಸ ಸಿನಿಮಾ ಬಗ್ಗೆ ವೇದಿಕೆ ಮೇಲೆ ‘ಹ್ಯಾಟ್ರಿಕ್​ ಹೀರೋ’ ಮಾತು

(New list of guidelines to shoot action sequences in movies is ready in Karnataka)

Published On - 5:02 pm, Tue, 17 August 21

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್