
ಯೂಟ್ಯೂಬರ್ ನಿಹಾರಿಕಾ ಎನ್ಎಂ ಬಗ್ಗೆ ಅನೇಕರಿಗೆ ಪರಿಚಯ ಇದೆ. ಯಶ್ ನಟನೆಯ ‘ಕೆಜಿಎಫ್ 2’ (KGF Chapter 2) ಸಿನಿಮಾ ರಿಲೀಸ್ ವೇಳೆ ಅವರು ಯಶ್ ಜೊತೆ ರೀಲ್ಸ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಮಾಡಿದ ಆದ ಬಳಿಕ ಅವರ ಜೀವನ ಸಂಪೂರ್ಣ ಬದಲಾಗಿದೆಯಂತೆ. ಈ ಬಗ್ಗೆ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇದು ಯಶ್ ಪವರ್ ಎಂದು ಅನೇಕರು ಹೇಳಿದ್ದಾರೆ.
ನಿಹಾರಿಕಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 40 ಲಕ್ಷಕ್ಕೂ ಅಧಿಕ ಹಿಂಬಾಲಕರು ಇದ್ದಾರೆ. ಕನ್ನಡದ ಸ್ಟಾರ್ ನಟ ಯಶ್ ಜೊತೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡುತ್ತಿದ್ದಂತೆಯೇ ಅವರ ಜೀವನ ಬದಲಾಗಿದೆಯಂತೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
‘ಯಶ್ ಜೊತೆ ನಾನು ಮಾಡಿದ ವಿಡಿಯೋ ತುಂಬಾನೇ ಹಿಟ್ ಆಯಿತು. ಇದಾದ ಬಳಿಕ ನನ್ನ ಜೀವನ ಸಂಪೂರ್ಣ ಬದಲಾಯಿತು’ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇದು ಯಶ್ ಅವರ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ.
ನಿಹಾರಿಕಾ ಅವರು ಈಗ ಕೇವಲ ಯೂಟ್ಯೂಬ್ ಮಾತ್ರ ಅಲ್ಲ. ಅವರು ತಮಿಳಿನಲ್ಲಿ ಸಿನಿಮಾ ಕೂಡ ಮಾಡುತ್ತಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಇದನ್ನು ತಮಿಳಿನ ಜೊತೆಗೆ ಇತರ ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡಲು ತಂಡ ನಿರ್ಧರಿಸಿದೆ. ಅಥರ್ವ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಫ್ರೆಂಡ್ಗಾಗಿ ನಿಧಿ ಸುಬ್ಬಯ್ಯ ಮನೆ ಎದುರು ದೊಡ್ಡ ಅವಾಂತರ ಮಾಡಿದ್ದ ಯಶ್; ಇಲ್ಲಿದೆ ವಿವರ
ಯಶ್ ಖ್ಯಾತಿ ತುಂಬಾನೇ ಹೆಚ್ಚಾಗಿದೆ. ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ಗೆ ನಿರೀಕ್ಷೆ ಇದೆ. ಈ ಚಿತ್ರ ಮುಂದಿನ ವರ್ಷ ರಿಲೀಸ್ ಆಗಲಿದೆ. ಈ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್ನಲ್ಲೂ ಬಿಡುಗಡೆ ಕಾಣಲಿದೆ ಎಂಬುದು ವಿಶೇಷ. ಈ ಚಿತ್ರದ ಸೆಟ್ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಾ ಇವೆ. ಇದು ಚಿತ್ರತಂಡಕ್ಕೆ ತಲೆಬಿಸಿ ತಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.